Home ಸ್ಥಳೀಯ ಸಮಾಚಾರ ಧರ್ಮಸ್ಥಳದಲ್ಲಿ ಕಾಡಾನೆ ದಾಳಿ ವ್ಯಾಪಕ‌ ಕೃಷಿ ಹಾನಿ

ಧರ್ಮಸ್ಥಳದಲ್ಲಿ ಕಾಡಾನೆ ದಾಳಿ ವ್ಯಾಪಕ‌ ಕೃಷಿ ಹಾನಿ

492
0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ವಿವಿದೆಡೆಗಳಲ್ಲಿ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಸಂಭವಿಸಿದೆ.
ಇಲ್ಲನ ನೇರ್ತನೆ ನಿವಾಸಿ ಜೋಸೆಫ್ ಪಿ.ಕೆ ಎಂಬವರ ತೋಟಕ್ಕೆ ನುಗ್ಗಿದ ಅನೆಗಳು ಅಡಿಕೆ ಹಾಗೂ ಬಾಳೆ ಗಿಡಗಳನ್ನು ನೆಲಸಮ ಗೊಳಿಸಿದೆ. ಜೇಮ್ಸ್ ಎಂಬವರ ತೋಟದಲ್ಲಿ ಎರಡು ತೆಂಗಿನ ಮರಗಳನ್ನು ನಾಶಗೊಳಿಸಿದ್ದು ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದೆ. ಅಲ್ಲದೆ ರಾಜನ್ ಎಂಬವರ ತೋಟಕ್ಕೆ‌ನುಗ್ಗಿ ಅಲ್ಲಿ ನೆಡಲಾಗಿದ್ದ ಸುಮಾರು 100ಕ್ಕೂ ಹೆಚ್ಚು ಮರಗೆಣಸಿನ ಗಿಡಗಳನ್ನು ಸಂಲೂರ್ಣವಾಗಿ ನಾಶಗೊಳಿಸಿದೆ, ಬಿಜು ಎಂಬವರ ತೋಟಕ್ಕೂ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದೆೆ.


ಒಂದು ಮರಿಯಾನೆ ಸೇರಿದಂತೆ ಎರಡು ಆನೆಗಳು ಇಲ್ಲಿ ಓಡಾಟ ನಡೆಸುತ್ತಿದ್ದು ಕಳೆದ‌ಎರಡು ಮೂರು ದಿನಗಳಿಂದ ನಿರಂತರವಾಗಿ ಕೃಷಿಗೆ ಹಾನಿಯುಂಟುಮಾಡುತ್ತಿದೆ. ಧರ್ಮಸ್ಥಳ‌ದಿಂದ ನೇರ್ತನೆ ಹೋಗುವ ರಸ್ತೆಯಲ್ಲಿ ಓಡಾಡಲೂ ಜನ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.‌ ಇದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡೆಸುತ್ತಿದ್ದು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ‌ ಜನ ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here