ಆಯುಷ್ ಫೆಡರೆಷನ್ ಆಫ್ ಇಂಡಿಯಾ(ಎ ಎಫ್ ಐ),ಕರ್ನಾಟಕ(ರಿ)ಇದರ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಬೆಳ್ತಂಗಡಿ; ಆಯುಷ್ ಫೆಡರೆಷನ್ ಆಫ್ ಇಂಡಿಯಾ(ಎ ಎಫ್ ಐ),ಕರ್ನಾಟಕ(ರಿ)ಇದರ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎ ಎಫ್ ಐ ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷರಾಗಿರುವ ಡಾ.ಸುಷ್ಮಾ ಡೋಂಗ್ರೆ ಇವರು ವಹಿಸಿದ್ದರು. ಬೆಳ್ತಂಗಡಿ ತಾಲೂಕಿನ ಎಲ್ಲಾ ಅಯುಷ್ ವೈದ್ಯರುಗಳ ಸಂಪೂರ್ಣ ಸಹಕಾರವನ್ನು ಮುಂದಿನ ಅವಧಿಯ ಕಾರ್ಯಕ್ರಮಗಳಿಗೆ ನೀಡುವಂತೆ ವಿನಂತಿಸಿಕೊಂಡರು. ಪದಗ್ರಹಣ ಸಭಾರಂಭವನ್ನು ಎ ಎಫ್ ಐದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಂಗಳೂರಿನ ಡಾ.ಕೃಷ್ಣ ಗೋಖಲೆ ಇವರು ನಿರ್ವಹಿಸಿಕೊಟ್ಟರು.ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ...

ತಾಲೂಕು ಒಕ್ಕಲಿಗ ಸೇವಾ ಟ್ರಸ್ಟ್ ನ ಟ್ರಸ್ಟಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಪೊಲೀಸರಿಗೆ ದೂರು

0

ಬೆಳ್ತಂಗಡಿ : ತಾಲೂಕು ಒಕ್ಕಲಿಗ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ಟ್ರಸ್ಟಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಸುಳ್ಳುಸುದ್ದಿ ಸಂದೇಶವನ್ನು ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ಗಳಲ್ಲಿ ರವಾನಿಸಿದ ಬಗ್ಗೆ ಕೊಯ್ಯೂರು ನಿವಾಸಿ ವಿಜಯ ಕುಮಾರ್ ಇವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಟ್ರಸ್ಟಿನ ಚಟುವಟಿಕೆಗಳ ಬಗ್ಗೆ ಹಾಗೂ ವೈಯುಕ್ತಿವಾಗಿ ನಿಂದನಾತ್ಮಕವಾಗಿ ಸಂದೇಶಗಳನ್ನು ಹರಡಿರುವ ಬಗ್ಗೆ ದೂರು ನೀಡಲಾಗಿದೆ. ಪೊಲೀಸರು ದೂರನ್ನು ಸ್ವೀಕರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ; 20ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

0

ಬೆಳ್ತಂಗಡಿ; ಪ್ರಕರಣವೊಂದರಲ್ಲಿ ಆರೋಪಿಯಾಗಿ ಕಳೆದ 20ವರ್ಷಗಳಿಂದ ತಲೆ‌ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಪುತ್ತೂರು ನಿವಾಸಿ ಅಬ್ದುಲ್ ರಹಿಮಾನ್ (50) ಎಂಬಾತನಾಗಿದ್ದಾನೆ. 1998 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆಆರುತಿಂಗಳು ಶಿಕ್ಷೆಗೆ ಒಳಪಟ್ಟ ಈತ ಬಳಿಕ ತಲೆ ಮರೆಸಿಕೊಂಡಿದ್ದ ಈತನನ್ನು ಪುತ್ತೂರು ಪೊಲೀಸರ ಸಹಕಾರದೊಂದಿಗೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಸ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಆಂಬೇಡ್ಕರ್ ಅವರಿಗೆ ಅವಮಾನ ಕ್ರಮಕ್ಕೆ ಒತ್ತಾಯಿಸಿ ಡಿ.ಎಸ್.ಎಸ್. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು

0

ಬೆಳ್ತಂಗಡಿ; ಭಾರತದ ರಾಷ್ಟ್ರೀಯ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿ,ಜಾತಿ ಜಾತಿಗಳ ಮಧ್ಯೆ ದ್ವೇಷದ ವಿಷ ಬೀಜ ಬಿತ್ತಿದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ವಿಶ್ವಹಿಂದೂ ಪರಿಷತ್ ಇದರ ಸಹಸಂಚಾಲಕ ಉಮೇಶ್ ನಾಯ್ಕ ಸೂಡಎಂಬಾತನ ಮೇಲೆ ದೇಶದ ದ್ರೋಹದ ಪ್ರಕರಣವನ್ನು ದಾಖಲಿಸಿ ಆತನನ್ನು ಈ ಕನ್ನಡ ನಾಡಿನಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ,ಹಾಗೂ ದಲಿತ ಚಳುವಳಿಗೆ ಐವತ್ತರ ಸಂಭ್ರಮಾಚರಣಾ ಸಮಿತಿ ಬೆಳ್ತಂಗಡಿ ಇದರ...

ಬೆಳ್ತಂಗಡಿ; ಸಿ.ಪಿ.ಐ.ಎಂ ಪಕ್ಷದ ತಾಲೂಕು ಸಮ್ಮೇಳನ

0

ಬೆಳ್ತಂಗಡಿ; ಇಂದು ನಮ್ಮ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಸರಕಾರ ಅತಿ ಭ್ರಷ್ಟ ಸರಕಾರವಾಗಿದ್ದು, ಇಂತಹ ಭ್ರಷ್ಟ ಮತ್ತು ಕಾರ್ಮಿಕ ವಿರೋದಿ ಸರಕಾರವನ್ನು ಹಿಮ್ಮೆಟ್ಟಿಸುವುದು ಭಾರತೀಯರ ಇಂದಿನ ಕರ್ತವ್ಯವಾಗಿದ್ದು ಆ ಮೂಲಕ ರೈತರ, ಕಾರ್ಮಿಕರ ಬದುಕಿನ ರಕ್ಷಣೆ ಮಾಡಬೇಕಾದ್ದು ಇಂದಿನ ಅತೀ ಅಗತ್ಯ ಕೆಲಸವಾಗಿದೆ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳ ಸದಸ್ಯರಾದ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದರು.ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು 10 ನೇ ಸಮ್ಮೇಳನವನ್ನು ಉದ್ಗಾಟಿಸಿ ಮಾತಾಡುತ್ತಿದ್ದರು. ಕೇವಲ...

ತತಲೆಮರೆಸಿ ಕೊಂಡಿದ್ದ 34 ಕಳ್ಳತನ ಪ್ರಕರಣಗಳ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ವಾರೆಂಟ್ ಅರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಪಡಂಗಡಿಯ ಲಾಡಿ ಮನೆ ನಿವಾಸಿ ಹಮೀದ್ ಯಾನೆ ಜಬ್ಬಾರ್ ಹಮೀದ್ ಯಾನೆ ಕುಂಞಿಮೋನು ಬಂಧಿತ ಆರೋಪಿ. ಈತನನ್ನು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್ ಸಿ 418 ವ್ರಷಭ, ಹೆಚ್ ಸಿ 863 ಬೆಣ್ಣಿಚ್ಚನ್, ಮತ್ತು ಪಿಸಿ 2398 ಮುನಿಯ ನಾಯ್, ಪಿ ಸಿ 433 ಸುನಿಲ್ ರವರು ಪಡಂಗಡಿ ಎಂಬಲ್ಲಿಂದ ದಸ್ತಗಿರಿ ಮಾಡಿ...

ದಲಿತ ಚಳವಳಿಗೆ 50 ಬೆಳ್ತಂಗಡಿ ಯಲ್ಲಿ ಸಂಭ್ರಮಾಚರಣೆ ಸಮಿತಿ ರಚನೆ

0

ಬೆಳ್ತಂಗಡಿ; ಕರ್ನಾಟಕ ದಲಿತ ಸಂಘರ್ಷ ಸಮಿತಿ ಇದೀಗ 50 ರ ಸಂಭ್ರಮದಲ್ಲಿದೆ ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಯಲ್ಲಿ ದಲಿತ ಚಳವಳಿಯ 50ರ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದ್ದು ಇದಕ್ಕಾಗಿ ಪೂರ್ಣ ಪ್ರಮಾಣದ ಸಮಿತಿಯನ್ನು ಬಿಕೆ ವಸಂತ್ ಅವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ಅವರ ಗೌರವ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.ಸಮಿತಿ ವಿವರ ಇಂತಿದೆ.ಅಧ್ಯ ಕ್ಷರು, ಬಿ.ಕೆ ವಸಂತ್, ಗೌರವಾಧ್ಯಕ್ಷರು; ಚೆನ್ನಕೇಶವ. ಕಾರ್ಯಾಧ್ಯಕ್ಷರುಗಳು; ಶೇಖರ ಕುಕ್ಕೇಡಿ, ಬೇಬಿ ಸುವರ್ಣ, ಅಣ್ಣು ಸಾಧನ ಪದ್ಮುಂಜ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್ ಬೆಳ್ತಂಗಡಿ, ರಮೇಶ್ ಆರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ; ಅಚ್ಚುಶ್ರೀ ಬಾಂಗೇರು,ಕೋಶಾಧಿಕಾರಿ ಶ್ರೀಧರ ಎಸ್. ಕಳೆಂಜ ಉಪಾಧ್ಯಕ್ಷರುಗಳು ಪ್ರಭಾಕರ...

ಮುಂಡಾಜೆ; ಭಾರೀ ಮಳೆಗೆ ರಸ್ತೆಗೆ ಕುಸಿದು ಬಿದ್ದ ಗುಡ್ಡ

0

ಬೆಳ್ತಂಗಡಿ; ಮುಂಡಾಜೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ರಸ್ತೆ ಹಾಗೂ ಮನೆಯ ಮೇಲೆ ಬಿದ್ದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರ ಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಮುಚ್ವಿಹೀಗಿದೆ.ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬವರ ಮನೆಯ ಸಮೀಪ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿದಿದೆ. ರಸ್ತೆಗೆ ಹಾಗೂ ಮನೆಯ ಹಿಂಭಾಗದಲ್ಲಿ ಮಣ್ಣು ಬಿದ್ದಿದೆ. ರಸ್ತೆ ಸಂಪೂರ್ಣ ಮುಚ್ಚಿ ಹೋಗಿದ್ದು ಜನರ ಹಾಗೂ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಮನೆಯ ಹಿಂಭಾಗದಲ್ಲಿಯೂ ಮಣ್ಣು ಬಿದ್ದಿದ್ದು ಅಪಾಯಕಾರಿ...

ಬೆಳ್ತಂಗಡಿ; ತ್ರಿಸ್ಟಾರ್ ವೈನ್ಸ್ ನ ಬೀಗ ಒಡೆದು ಕಳ್ಳತನ

0

ಬೆಳ್ತಂಗಡಿ; ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪವೇ ಇರುವ ತ್ರಿ ಸ್ಟಾರ್ ವೈನ್ಸ್ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿ ಗಳನ್ನು ಕಳ್ಳತನ ಮಾಡಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.ಅಂಗಡಿಯ ಹೊರಗಿನ ಬೀಗ ಒಡೆದು ಶಟರ್ ತೆಗೆದು ಒಳಗೆ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಇರಿಸಲಾಗಿದ್ದ ಸುಮಾರು ಆರುಸಾವಿರಕ್ಕೂ ಹೆಚ್ಚು ನಗದನ್ನು ಅಪಹರಿಸಿರುವುದಾಗಿ ತಿಳಿದು ಬಂದಿದೆ. ಮದ್ಯದ ಬಾಟ್ಲಿಗಳನ್ನೂ ಕಳ್ಳತನ ಮಾಡಲಾಗಿದ್ದು ಇದರಬಗ್ಗೆ ಹೆಚ್ಚಿನ ಮಾಹುತಿಗಳು ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

ನೆರಿಯದಲ್ಲಿ ನದಿಗಿಳಿದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತ್ಯು

0

ಬೆಳ್ತಂಗಡಿ; ನೆರಿಯದಲ್ಲಿ ನದಿಗೆ ಇಳಿದಿದ್ದ ತೋಟತ್ತಾಡಿ ನಿವಾಸಿ ಯುವಕನೋರ್ವ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.ನೆರಿಯ ಗ್ರಾಮದ ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಂಬಾತನೇ ಮೃತಪಟ್ಟಿರುವ ಯುವಕನಾಗಿದ್ದಾನೆ.ಈತ ಭಾನುವಾರ ಗೆಳೆಯರೊಂದಿಗೆ ಮೀನು ಹಿಡಿಯಲು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ಹೋಗಿದ್ದ ಎನ್ನಲಾಗಿದೆ. ನದಿಯಲ್ಲಿ ಸಂಜೆಯ ವೇಳೆ ಈತ ನಾಪತ್ತೆಯಾಗಿದ್ದ. ಈತನಿಗಾಗಿ ಸ್ಥಳೀಯರ ನೇತೃತ್ವದಲ್ಲಿ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿದೆಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.