
ಬೆಳ್ತಂಗಡಿ; ಭಾರತದ ರಾಷ್ಟ್ರೀಯ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿ,ಜಾತಿ ಜಾತಿಗಳ ಮಧ್ಯೆ ದ್ವೇಷದ ವಿಷ ಬೀಜ ಬಿತ್ತಿದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ವಿಶ್ವಹಿಂದೂ ಪರಿಷತ್ ಇದರ ಸಹಸಂಚಾಲಕ ಉಮೇಶ್ ನಾಯ್ಕ ಸೂಡ
ಎಂಬಾತನ ಮೇಲೆ ದೇಶದ ದ್ರೋಹದ ಪ್ರಕರಣವನ್ನು ದಾಖಲಿಸಿ ಆತನನ್ನು ಈ ಕನ್ನಡ ನಾಡಿನಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ,ಹಾಗೂ ದಲಿತ ಚಳುವಳಿಗೆ ಐವತ್ತರ ಸಂಭ್ರಮಾಚರಣಾ ಸಮಿತಿ ಬೆಳ್ತಂಗಡಿ ಇದರ ಪದಾದಿಕಾರಿಗಳು
ಬೆಳ್ತಂಗಡಿ ಪೋಲೀಸ್ ವೃತ್ತನಿರೀಕ್ಷಕರಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಬಿ.ಕೆ ವಸಂತ, ಚೆನ್ನಕೇಶವ, ಶೇಖರ ಕುಕ್ಕೇಡಿ ಹಾಗೂ ಇತರರು ಇದ್ದರು.
