
ಬೆಳ್ತಂಗಡಿ : ತಾಲೂಕು ಒಕ್ಕಲಿಗ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ಟ್ರಸ್ಟಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಸುಳ್ಳುಸುದ್ದಿ ಸಂದೇಶವನ್ನು ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ಗಳಲ್ಲಿ ರವಾನಿಸಿದ ಬಗ್ಗೆ ಕೊಯ್ಯೂರು ನಿವಾಸಿ ವಿಜಯ ಕುಮಾರ್ ಇವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ರಸ್ಟಿನ ಚಟುವಟಿಕೆಗಳ ಬಗ್ಗೆ ಹಾಗೂ ವೈಯುಕ್ತಿವಾಗಿ ನಿಂದನಾತ್ಮಕವಾಗಿ ಸಂದೇಶಗಳನ್ನು ಹರಡಿರುವ ಬಗ್ಗೆ ದೂರು ನೀಡಲಾಗಿದೆ. ಪೊಲೀಸರು ದೂರನ್ನು ಸ್ವೀಕರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
