ಬೆನ್ನಮೂಳೆ ಮುರಿತಾಕ್ಕೊಳಗಾದವರಿಗೆ ಆಸರೆಯಾದ ರಾಜ ಕೇಸರಿ
ಬೆಳ್ತಂಗಡಿ; ಸದಾ ನಿರಂತರವಾಗಿ ಸಾಮಾಜಿಕ. ಆರೋಗ್ಯ. ಸೇವಾ ಯೋಜನೆ ಗಳೊಂದಿಗೆ ಹೆಸರು ವಾಸಿಯಾಗಿರುವ ಸದಾ ಸಮಾಜದೊಂದಿಗೆ ಬೆರೆತು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವ ಸಂಘಟನೆ ಯಾದ ರಾಜ ಕೇಸರಿ ವತಿಯಿಂದ ಯಿಂದಬೆಳ್ತಂಗಡಿ ತಾಲೂಕಿನ ಪಾರಡ್ಕ ಮನೆ, ಇಳಂತಿಲ ಗ್ರಾಮ, ನಿವಾಸಿಯಾದ ಪದ್ಮನಾಭ ಕುಂಬಾರ ಎಂಬವರು15 ವರ್ಷದಿಂದ ಬೆನ್ನುಮೂಳೆ ಮುರಿತದಿಂದ ಬಳಲಿತ್ತಿದ್ದು ಇವರಿಗೆ ವೀಲ್ ಚರ್ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ . ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ..ಬೆಳ್ತಂಗಡಿ ತಾಲೂಕು ರಾಜ ಕೇಸರಿ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ.ವಿಪುಲ್...
ವೇಣೂರಿನಲ್ಲಿ ಬೈಕಿನಲ್ಲಿ ಬಂದು ಬಾಲಕಿಗೆ ತೊಂದರೆ ಪೋಕ್ಸೋ ಪ್ರಕರಣ ದಾಖಲು
ಬೆಳ್ತಂಗಡಿ; ವೇಣೂರಿನಲ್ಲಿ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಬೈಕ್ ನಲ್ಲಿ ಹಿಂಬಾಲಿಸಿ ತೊಂದರೆ ನೀಡಿದ ಘಟನೆ ಸಂಭವಿಸಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ಆರೋಪಿ ಜುಮಾರ್ (24) ಎಂಬಾತನಾಗಿದ್ದಾನೆ ಈತ ಕಳೆದ ಕೆಲವು ದಿನಗಳಿಂದ ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ರಸ್ತೆಯಲ್ಲಿ ತನ್ನ ಬೈಕ್ ನಲ್ಲಿ ಬಂದು ಬಾಲಕಿಯನ್ನು ಹಿಂಬಾಲಿಸಿ ಬೈಕ್ ನಲ್ಲಿ ಬರುತ್ತೀಯಾ ನಂಬರ್ ಕೊಡಿ ಎಂದು ಕೇಳುತ್ತಾ ತೊಂದರೆ ನೀಡಿದ್ದು ಈ ಬಗ್ಗೆ ನೊಂದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಘಟನೆಯ...
ಕುವೆಟ್ಟು; ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು
ಬೆಳ್ತಂಗಡಿ; ತಾಲೂಕಿನ ಕುವೆಟ್ಟು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಒಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಿದ ಘಟನೆ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮನೆಯಿಂದ 80,000 ಸಾವಿರ ನಗದು ಹಾಗೂ ಸುಮಾರು 66,000 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿರುವುದಾಗಿಲಲಿತ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅ 13 ರಾತ್ರಿಯ ವೇಳೆ ಮನೆಯ ಹಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಗೋಡ್ರೇಜಿನ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ...
ಸಿ.ಪಿ.ಐ.ಎಂ ಪಕ್ಷದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆ
ಬೆಳ್ತಂಗಡಿ; ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷ್ವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೂತನ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಎಂ.ಭಟ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಪಕ್ಷದ ತಾಲೂಕು ಸಮ್ಮೇಳನ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದು ಇವರನ್ನು ಮುಂದಿನ 3 ವರ್ಷದ ಅವದಿಗೆ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು 1990 ರಿಂದ ಸಿಪಿಐ(ಎಂ) ಮೂಲಕ ರಾಜಕೀಯ ಪ್ರವೇಶಿಸಿ ಕಳೆದ 34 ವರ್ಷಗಳಿಂದ ಕಾರ್ಮಿಕರ, ರೈತರ, ಸಂಘಟನೆ ಮಾಡಿ ಅವರ ಪರ ಕಾರ್ಯನಿರ್ವಹಿಸುತ್ತಿರುವ ಇವರು ಬೀಡಿ ಕಾರ್ಮಿಕರ, ಅಂಗನವಾಡಿ, ಬಿಸಿಯೂಟ, ಆಶಾ, ಅಟೋ ಮೊದಲಾದ ಕಾರ್ಮಿಕ...
ಕೊಕ್ರಾಡಿ ಬೈಕ್ ಹಾಗೂ ಓಮ್ನಿ ನಡುವೆ ಅಪಘಾತ ಬೈಕ್ ಸವಾರನಿಗೆ ಗಂಭೀರ ಗಾಯ
ಬೆಳ್ತಂಗಡಿ; ಕೊಕ್ರಾಡಿ ಗ್ರಾಮದ ಕುಂಟಾಲ್ಕಟ್ಟೆ ಕ್ರಾಸ್ ನಲ್ಲಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.ಗಾಯಾಳು ವ್ಯಕ್ತಿಯನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ.ಬೈಕ್ ಹಾಗೂ ಓಮ್ನಿ ಕಾರು ಎದುರು ಬದುರಾಗಿ ಡಿಕ್ಕಿ ಹೊಡೆದಿದೆ ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೊಕ್ರಾಡಿ ಕುಂಟಾಲ್ ಕಟ್ಟೆ ಕ್ರಾಸ್ ನಲ್ಲಿ ಆಗಾಗ ಅಪಘಾತ ಗಳು ಸಂಭವಿಸುತ್ತಿದೆ, ಅಪಘಾತಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜನರು...
ನಿಡಿಗಲ್ ಸಮೀಪ ಪಾದಾಚಾರಿಗೆ ಬಸ್ ಡಿಕ್ಕಿ ಗಂಭೀರ ಗಾಯ
ಬೆಳ್ತಂಗಡಿ; ನಿಡಿಗಲ್ ಸಮೀಪ ಪಾದಾಚಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಬುಧವಾರ ಸಂಭವಿಸಿದೆ.ಕೆ.ಎಸ್.ಆರ್.ಟಿ.ಸಿ ಬಸ್ಸು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಹೊಡೆದಿರುವುದಾಗಿ ತಿಳಿದು ಬಂದಿದ ರಸ್ತೆಗೆ ಬಿದ್ದಪಾದಾಚಾರಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಾಗಿದೆ
ಕಾಶಿಬೆಟ್ಟುವಿಲ್ಲಿ ಚರಂಡಿಗೆ ಬಿದ್ದ ಕಾರು
ಬೆಳ್ತಂಗಡಿ: ಇಲ್ಲಿಯ ಕಾಶಿಬೆಟ್ಟು ಬಳಿ ಉಡುಪಿಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಘಟನೆ ಬುಧವಾರ ಮುಂಜಾನೆ ಘಟನೆ ನಡೆದಿದೆ.ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಮಳೆಯಿಂದಾಗಿ ರಸ್ತೆ ಜಾರುವ ಸ್ಥಿತಿಯಲ್ಲಿದೆ, ವಾಹನ ಚಾಲಕರು ಜಾಗರೂೂಕತೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯಿದೆೆ
ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ
ಹೊಸದಿಲ್ಲಿ: ಕರ್ನಾಟಕದ ಸಂಡೂರು, ಶಿಗ್ಗಾಂವಿ,ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ನ.13 ರಂದು ರಾಜ್ಯದ ಮೂರು ಕ್ಷೇತ್ರಗಳಾದ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನ.23 ರಂದು ಫಲಿತಾಂಶ ಪ್ರಕಟವಾಗಲಿದೆ. ಅ.25 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.30 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮಹಾರಾಷ್ಟ್ರ ಜಾರ್ಖಂಡ್ ವಿಧಾನ ಸಭಾ ಚುನಾವಣೆ ದಿನಾಂಕ ಪ್ರಕಟ
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನ.20 ರಂದು ಮತದಾನ ನಡೆಯಲಿದೆ. ಜಾರ್ಖಂಡ್ ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲನೆ ಹಂತ ನ.13 ರಂದು ಮತ್ತು ಎರಡನೇ ಹಂತವು ನ.20 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ನ.23 ರಂದು ಮತಎಣಿಕೆ ನಡೆಯಲಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯು 2025ರ ಜನವರಿ 5ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ.
ಕೊಕ್ಕಡ ಕೆನರಾ ಬ್ಯಾಂಕ್ ಎದುರು ಗ್ರಾಹಕರ ಪ್ರತಿಭಟನೆ
ಬೆಳ್ತಂಗಡಿ; ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಆಗುತ್ತಿರುವ ಹಲವಾರು ತೊಂದರೆಗಳ ವಿರುದ್ದ ಸೋಮವಾರ ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ಎದುರುಗಡೆ ಕೆನರಾ ಬ್ಯಾಂಕ್ ದೌರ್ಜನ್ಯ ವಿರೋಧೀ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿಯ ದರಣಿ ಸತ್ಯಾಗ್ರಹ ಪ್ರಾರಂಭ ಆಗಿ ಸಂಜೆ 7 ಗಂಟೆ ವರೆಗೂ ಮುಂದುವರೆದು, ಬ್ಯಾಂಕ್ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಕೊಟ್ಟ ಬೇಡಿಕೆ ಈಡೇರಿಸುವ ಭರವಸೆ ಮೇರೆಗೆ ದರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.ಬ್ಯಾಂಕಿನಲ್ಲಿ ಕಳೆದ ವರ್ಷ ತನಕ ಸುಮಾರು 19 ವರ್ಷ ಸರಾಫರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯರನ್ನು ಅನ್ಯಾಯವಾಗಿ ವಜಾ ಗೊಳಿಸಿದ್ದನ್ನು...















