ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆ

0

ಬೆಳ್ತಂಗಡಿ .ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆಯು ಬೆಳ್ತಂಗಡಿ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಪದಾಧಿಕಾರಿಗಳೊಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ವಾಸಿಸುತ್ತಿರುವ ಬುಡಕಟ್ಟು ಕುಟುಂಬದ ಹಲವಾರು ಸಮಸ್ಯೆಗಳ ಬಗ್ಗೆ ವಿದ್ಯುತ್‌ ,ರಸ್ತೆ ,ಭೂ ಒಡೆತನದ ,ಬಗ್ಗೆ ಸಂವಾದ ವನ್ನು ನಡೆಸಿ.ಮುಂದಿನ ದಿನದಲ್ಲಿ ಬೆಳ್ತಂಗಡಿ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶವನ್ನು ನಡೆಸಿ ಈ ಎಲ್ಲಾ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಮಂತ್ರಿಗಳನ್ನು ಕರೆಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ.ಎಂದರು. ಪರಿಶಿಷ್ಟ ಪಂಗಡದಿಂದ...

ರಾಜ್ಯ ಮಟ್ಟದ ಕ್ರೀಡಾಕೂಟ; ಮುಂಡಾಜೆಯ ತೇಜಲ್ ಅವರಿಗೆ 110ಮೀ ಹರ್ಡಲ್ಸ್ ನಲ್ಲಿ ಚಿನ್ನದ ಪದಕ

0

ಬೆಳ್ತಂಗಡಿ; ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ನಿವಾಸಿ ತೇಜಲ್ ಕೆ ಆರ್ ಅವರು 20ವರ್ಷ ವಯೋಮಿತಿಯ ವಿಭಾಗದಲ್ಲಿ 110ಮೀ ಹರ್ಡಲ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ಪಾಂಡಿಚೇರಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಮುಂಡಾಜೆ ನಿವಾಸಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದ ರಾಜೇಶ್ ಕೆ.ವಿ ಹಾಗೂ ಜಿನ್ಸಿ ದಂಪತಿಯರ ಪುತ್ರನಾಗಿರುವ ತೇಜಲ್ ಕೆ.ಆರ್ ಅವರು ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಯಾಗಿದ್ದಾರೆ. ತೇಜಲ್ ಅವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ 16 ವಯೋಮಾನದ ವಿಭಾಗದಲ್ಲಿ...

ರಾಜ್ಯಮಟ್ಟದ ಕ್ರೀಡಾಕೂಟ ಲಾಯಿಲದ ಚಂದ್ರಿಕಾ ಗೆ 400ಮೀ ಹಡಲ್ಸ್ ನಲ್ಲಿ ಬೆಳ್ಳಿ ಪದಕ

0

ಬೆಳ್ತಂಗಡಿ; ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ನಲ್ಲಿ ಉಜಿರೆ ಎಸ್.ಡಿಎಂ ಕಾಲೇಜ್ ನ ವಿಧ್ಯಾರ್ಥಿನಿ ಚಂದ್ರಿಕಾ ಇವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಮೋಹನ್ ಪೂಜಾರಿ ಮತ್ತು ಯಶೋಧ ದಂಪತಿಗಳ ಪ್ರಥಮ ಪುತ್ರಿ ಚಂದ್ರಿಕಾ ಇವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು 2022-23 ಸಾಲಿನ ಕೇರಳ ಕೊಚ್ಚಿಯಲ್ಲಿ ನಡೆದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ...

ರೆಖ್ಯ ಗುಡ್ಡ ಕುಸಿತದಿಂದ ಹಾನಿಗೀಡಾದ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಸದರು, ಶಾಸಕರ ಭೇಟಿ ಪರಿಶೀಲನೆ

0

ಬೆಳ್ತಂಗಡಿ; ತಾಲೂಕಿನ ರೆಖ್ಯಾ ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ದೇವಸ್ಥಾನದ ಗರ್ಭಗುಡಿಗೆ ಹಾನಿಯಾಗಿದ್ದು ಮಂಗಳವಾರ.ಲ ಸಂಸದರಾದ ಕ್ಯಾ.ಬ್ರಿಜೇಶ್ ಚೌಟರವರು ಹಾಗೂಶಾಸಕ ಹರೀಶ್ ಫೂಂಜ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ವೀಕ್ಷಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಪ್ರಧಾನಿ ಜನ್ಮದಿನ ರಕ್ತದಾನ ಶಿಬಿರದಲ್ಲಿ ಬೆಳ್ತಂಗಡಿ ಯುವ ಮೋರ್ಚಾ ಮುಖಂಡರು ಭಾಗಿ

0

ಬೆಳ್ತಂಗಡಿ : 74 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿಜೀ ಯವರ ಹುಟ್ಟುಹಬ್ಬದ ಸಲುವಾಗಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಯುವಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಈ ರಕ್ತದಾನ ಶಿಬಿರದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ನೇತೃತ್ವದ ತಂಡ ಭಾಗವಹಿಸಿ ರಕ್ತದಾನ ಮಾಡಿದರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯನಗರ ಮತ್ತು ಗ್ರಾಮೀಣ ಅಧ್ಯಕ್ಷರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ.

0

ಬೆಳ್ತಂಗಡಿ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯ ನಗರ ಅಧ್ಯಕ್ಷರಾಗಿ ಬಿ.ಅಬ್ದುಲ್ ರಝಾಕ್ ತೆಕ್ಕಾರು ಮತ್ತು ಗ್ರಾಮೀಣ ಅಧ್ಯಕ್ಷರಾಗಿ ತುಕಾರಾಮ ಜಿ.ಎನ್ ರೆಖ್ಯಾ ನೇಮಕಗೊಂಡಿದ್ದಾರೆ .ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಗಳಾಗಿ ವಿ.ಜಿ ರಾಜೇಶ್ ಭಟ್ ಸವಣಾಲು ,ನಾರಾಯಣ ಪೂಜಾರಿ ಮಚ್ಚಿನ,ಸುರೇಶ್ ಬೈರ ಲಾಯಿಲ,ಜಾರ್ಜ್‌ ಎಮ್ ವಿ ಚಿಬಿದ್ರೆ ಇವರನ್ನು ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಎಮ್ ಅಬ್ಬಾಸ್ ಅಲಿ ನೇಮಕ ಮಾಡಿದ್ದಾರೆ.

ಮುಂಡಾಜೆ: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಅಪಾರ ನಷ್ಟ

0

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಎರಡು ಲಕ್ಷ ರೂ.ಗಿಂತ ಅಧಿಕ ನಷ್ಟ ಸಂಭವಿಸಿದೆ.ಮುಂಡಾಜೆ ಗ್ರಾಮದ ಬಲ್ಯಾರ್ ಕಾಪು ರಸ್ತೆಯ ಹೊಸ ಗದ್ದೆ ಬಾಲಕೃಷ್ಣ ಶೆಟ್ಟಿಯವರ ರಬ್ಬರ್ ಸ್ಮೋಕ್ ಹೌಸ್ ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿ ಸುಮಾರು 3ಕ್ವಿಂಟಲ್ ರಬ್ಬರ್ ಹಾಗು ಒಂದು ಕ್ವಿಂಟಾಲ್ ಅಡಕೆ ಬೆಂಕಿಗೆ ಆಹುತಿಯಾಗಿದೆ.ಸ್ಮೋಕ್ ಹೌಸ್ ನ ಶೀಟುಗಳು ಸುಟ್ಟು ಹೋಗಿವೆ.ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಹತೋಟಿಗೆ ತರಲು ಸಹಕರಿಸಿದರು.ಆದರೂ ಸ್ಮೋಕ್ ಹೌಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಪಡ್ಡಂದಡ್ಕ ಮಸೀದಿಯಲ್ಲಿ ಮಿಲಾದುನ್ನೆಬಿ ಆಚರಣೆ

0

ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ವಿಜೃಂಭಣೆಯಿಂದ ನೆಭಿ ಜನ್ಮದಿನಚರಣೆ ಆಚರಿಸಲಾಯಿತು. ಖತೀಬ್ ಅಶ್ರಫ್ ಫೈಝಿ ನೇತೃತ್ವದಲ್ಲಿ ಮೌಲೂದ್ ಪರಾಯಣ.ಮಕ್ಕಳ ಮಿಲಾದ್ ಮೆರವಣಿಗೆ ಶಾಂತಿನಗರದಿಂದ ಪೆರಿಂಜೆವರೆಗೆ ನಡೆಸಲಾಯಿತು.ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯಪ್ರಮುಖರು,ಜಮಾತಿಗರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಳ್ತಂಗಡಿ ಮಹಿಳೆಯರ ಮೇಲನಿ ದೌರ್ಜನ್ಯ ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

0

ಬೆಳ್ತಂಗಡಿ; ಮಹಿಳೆಯರ ಮೇಲೆ‌ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ‌ಖಂಡಿಸಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಯಿಂದ ರಾಜ್ಯದಾದ್ಯಂತ ‌ನಡೆಯುವ ಪ್ರತಿಭಟನೆಯ ಅಂಗವಾಗಿಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ( Aipwa) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ‌ಸೌಧದ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು. ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಬಳಿ ಯಿಂದ ಮೆರವಣಿಗೆ ಹೊರಟು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನಾ ಸಭೆ‌ನಡೆಯಿತು . ಸಭೆಯನ್ನು ಉದ್ಧೇಶಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ‌ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ...

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ವಸ್ತ್ರ ಚಿತ್ರಕಲಾ ಉದ್ಯಮಿ (ಎಂಬ್ರಾಡರಿ ಮತ್ತು ಫ್ಯಾಬ್ರಿಕ್‌ ಫೈಂಟಿಂಗ್‌) ತರಬೇತಿಯ ಸಮಾರೋಪ

0

ಉಜಿರೆ : ಮನುಷ್ಯನಿಗೆ ವಿದ್ಯೆ ದೊಡ್ಡ ಸಂಪತ್ತು,ನಮ್ಮ ಕನಸುಗಳನ್ನು ನನಸಾಗಿಸಲು ಇರಬೇಕು ನಾವು ಕಲಿತ ವಿದ್ಯೆ ಆದರ ಜೊತೆ ಅದನ್ನು ಬಳಸುವ ಸಂಸ್ಕಾರ ಸಹ ಇದ್ದಲ್ಲಿ ಮಾತ್ರ ವಿದ್ಯೆಗೆ ಬೆಲೆ ಬರುವುದು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚು ಇದೆ ಅದರಲ್ಲಿ ತೊಡಗಿಸಿಕೊಂಡು ಅದನ್ನು ಕಲಿತು ವೃತ್ತಿಯನ್ನಾಗಿಸಿಕೊಂಡು ಬೆಳೆಯಬೇಕು ಆವಾಗ ನೀವು ಗ್ರಾಹಕರ ಹತ್ತಿರ ಹೋಗಬೇಕಾಗಿಲ್ಲ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದು ಉಜಿರೆ ಸಂಧ್ಯಾ ಪ್ರೇಶ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು /ಯಶಸ್ವಿ ಮಹಿಳಾ ಉದ್ಯಮಿಯಾದ ಶ್ರೀಮತಿ ಅರ್ಚನಾ ರಾಜೇಶ್‌ ಪೈ ಅಭಿಪ್ರಾಯಪಟ್ಟರು.ಉಜಿರೆ...