ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ತುರ್ತು ಪರಿಸ್ಥಿತಿ ಹೇರಿದ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ;ಹರೀಶ್ ಪೂಂಜ ಆರೋಪ
ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಮುಸಲ್ಮಾನರನ್ನು ಓಲೈಸಲು ಸಿದ್ದರಾಮಯ್ಯ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆಹಳೆಯ ಭಾಷಣಗಳನ್ನು ಕೆದಕಿ ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಪ್ರಕರಣ ದಾಖಲಿಸಿರುವುದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರಿಗೆ ನೊಟೀಸ್ ನೀಡಿರುವುದು, ರಾತ್ರೋರಾತ್ರಿ ಸಂಘಟನೆಗಳ ಕಾರ್ಯಕರ್ತರ ಮನೆಗೆ ಪೊಲೀಸರು ನುಗ್ಗಿರುವುದು, 15 ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿರುವುದು ಇವೆಲ್ಲವನ್ನು...
ಕಡಿರುದ್ಯಾವರದಲ್ಲಿ ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ
ಬೆಳ್ತಂಗಡಿ; ತಾಲೂಕಿನ ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಲು ಎಂಬಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟುಮಾಡಿದ ಘಾಟನೆ ಸಂಭವಿಸಿದೆ.ಇಲ್ಲಿನ ನಿವಾಸಿಗಳಾದ ಚಿನ್ನಮ್ಮ, ಪುರಂದರ ಮೊಯಿಲಿ, ಹಾಗು ಶೈಜು ಎಂಬವರ ತೋಟಗಳಿಗೆ ಆನೆಗಳ ಹಿಂಡು ನುಗ್ಗಿದೆ. ತೋಟದಲ್ಲಿದ್ದ ತೆಂಗಿನ ಮರ, ಅಡಿಕೆಮರಗಳನ್ನು ಹಾಗೂ ಬಾಳೆಯನ್ನು ನೆಲಕ್ಕೆ ಉರುಳಿಸಿದೆ.ಕಳೆದ ಕೆಲದಿನಗಳಿಂದಲೂ ಈ ಪ್ರದೇಶದಲ್ಲಿ ಕಾಡಾನೆಗಳು ತಿರುಗಾಟ ನಡೆಸುತ್ತಿದ್ದು ಆಗಾಗ ತೋಟಗಳಿಗೆ ನುಗ್ಗುತ್ತಿದೆ. ಕಾಡಾನೆಗಳ ಅಟ್ಟಹಾಸ ಮಿತಿ ಮೀರುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಡ ಕುಟುಂಬಕ್ಕೆ “ಉನ್ನತಿ” ಮನೆ ಹಸ್ತಾಂತರ
ಬೆಳ್ತಂಗಡಿ; ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದಪುದುವೆಟ್ಟು ಗ್ರಾಮದ ಬಾಯ್ತಾರುವಿನಲ್ಲಿ ಕುಸುಮಾವತಿ ಅವರ ಕುಟುಂಬಕ್ಕೆ ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿ ನೀಡಲಾಗಿರುವ ಮನೆ "ಉನ್ನತಿ" ಇದರ ಹಸ್ತಾಂತರನ್ನು ಮೇ 30ರಂದು ಕಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಗಳನ್ನು ಮಾಡುವುದರಿಂದ ಕುಟುಂಬವೊಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಗಳನ್ನು ಮಾಡಲು ಧರ್ಮಸ್ಥಳ ಸೇವಾಸಹಕಾರಿ ಬ್ಯಾಂಕಿನ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ...
ಪ್ರಚೋದನಕಾರಿ ಭಾಷಣ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಸಮಾಜದ ಸ್ವಾಸ್ತ್ಯ ಕೆಡಿಸುವಂತೆ ಹಾಗೂ ಮತೀಯ ಗುಂಪುಗಳ ನಡುವೆ ವೈಷಮ್ಯ ಉಂಟುಮಾಡುವ ರೀತಿಯಲ್ಲಿ ಭಾಷಣ ಮಾಡಿರುವ ಬಗ್ಗೆ ಆರ್.ಎಸ್.ಎಸ್. ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.ಮೇ 12 ರಂದು ಬಂಟ್ವಾಳ ಗ್ರಾಮಾಂತರ ಠಾಣಾವ್ಯಾಪ್ತಿಯ ಬಂಟ್ವಾಳ ಕಾವಳ ಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನಡೆದ ಇತ್ತೀಚೆಗೆ ಕೊಲೆಗೀಡಾದ ಯುವಕನ ಶ್ರದ್ದಾಂಜಲಿ ಸಭಾ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಭಾಗವಹಿಸಿ ಸಮಾಜದ ಸ್ವಾಸ್ತ್ಯ ಹಾಳುಮಾಡುವ ಮತೀಯ ಗುಂಪುಗಳ ನಡುವೆ ವೈಮನಸ್ಯ ವುಂಟುಮಾಡುವಂತೆ...
ಚಾರ್ಮಾಡಿ ಘಾಟಿಯಲ್ಲಿ ಚಾಲಕ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ ಚಾಲಕನಿಗೆ ಗಂಭೀರ ಗಾಯ
ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜಿನ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಗಳೂರು ಕಡೆಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನವು ಚಾರ್ಮಾಡಿ ಘಾಟಿಯ ಮಲೆಯಮಾರುತ ಬಳಿಯಲ್ಲಿ ಮಂಜು ಹಿಡಿದಿರುವ ಕಾರಣ ರಸ್ತೆಯ ದೃಶ್ಯತೆ ಕಡಿಮೆಯಾಗಿತ್ತು. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತವಾದ ಕೂಡಲೆ ಸ್ಥಳೀಯರು ಧಾವಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನ ಕಾರಿ ಪೋಸ್ಟ್; ಧರ್ಮಾಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ; ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬ ಸಮಾಜಿಕ ಜಾಲತಾಣವಾದ ಇನ್ ಸ್ಟ್ರಾಗ್ರಾಂ ನಲ್ಲಿ ಬಂಟ್ವಾಳ ಹಿಂದೂ ವಾರಿಯರ್ ಎಂಬ ಖಾತೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವಂತಹ ಹಾಗು ಕೋಮು ಸೌಹಾರ್ದತೆಯನ್ನು ಹಾಳುಗೆಡವುವಂತಹ ಪೋಸ್ಟ್ ಪ್ರಸಾರ ಮಾಡಿದ್ದು ಇದರಿಂದಾಗಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಯಾಗುವ ಸಾಧ್ಯತೆಗಳಿದ್ದು ಇದರ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಯ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ 1ರಂದು ಕಲಂ 196(1)(ಎ) 353(1)(ಸಿ) ಬಿ.ಎನ್ ಎಸ್ 2023 ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರೆ.
ತೋಡು ಬಂದ್ ಆಗಿ ತೋಟಕ್ಕೆ ನುಗ್ಗಿದ ಕೃಷಿಗೆ ಹಾನಿಕರಾಯ : ಕರಾಯ ಗ್ರಾಮ ಖಂಡಿಗ ಎಂಬಲ್ಲಿ ಕೃಷಿಗೆ ಗುಡ್ಡ ಕುಸಿತ
ಕರಾಯ : ಮೇ 30 ರಂದು ಸುರಿದು ಧಾರಾಕಾರ ಸುರಿದ ಮಳೆಗೆ ಕರಾಯ ಗ್ರಾಮದ ಖಂಡಿಗ ನಿವಾಸಿ ದೊಡ್ಡಪ್ಪ ಗೌಡ, ಶ್ರೀಧರ ಗೌಡ, ಬೊಮ್ಮಣ್ಣ ಗೌಡರ ತೋಟಕ್ಕೆ ಸುಮಾರು 4,5 ಕಡೆ ಪ್ರವಾಹದ ರೀತಿಯಲ್ಲಿ ಗುಡ್ಡ ಕುಸಿದು ಬಿದ್ದು ಹರಿಯುವ ತೋಡು ಬಂದ್ ಆಗಿ ಅಡಿಕೆ ತೋಟದಲ್ಲೇ ನೀರು ಹರಿದಾಡುತ್ತಿದ್ದು ಅಪಾರ ಕೃಷಿ ಹಾನಿಯಾಗಿದ್ದು ನೀರು ಹೀಗೆ ತೋಟದಲ್ಲಿ ಹರಿದುಹೋದದ್ದೇ ಆಗಿದ್ದಲ್ಲಿ ತೋಟವು ಸಂಪೂರ್ಣ ನಾಶವಾಗುತ್ತದೆ ಎಂದು ಸಂತ್ರಸ್ತರು ತಮ್ಮ ಅಲಳನ್ನು ತೊಡಿಕೊಂಡಿದ್ದಾರೆ.ಸಂಬಂಧ ಪಟ್ಟ ಇಲಾಖೆಯೂ ಸೂಕ್ತ ಪರಿಹಾರ ನೀಡುಬೇಕೆಂದು ಆಗ್ರಹಿಸಿದ್ದಾರೆ.
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ನಡುವೆ ಕೋಮು ವೈಷಮ್ಯ ದ ಪೋಸ್ಟ್ ಪ್ರಕರಣ ದಾಖಲು
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಬ್ಯಾರಿ ವಾರಿಯರ್ 03 ಎಂಬ ಇನ್ ಸ್ಟ್ರಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಭಾವಚಿತ್ರವನ್ನು ಹೊಂದಿರುವ ಪೋಸ್ಟ್ ಹಾಕಿ ಅದರೊಂದಿಗೆ ವಿವಿಧ ಸಮುದಾಯಗಳ ನಡುವೆ ವೈಮನಸ್ಯವುಂಟುಮಾಡುವ ಹಾಗೂ ಈ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಯುಂಟುಮಾಡುವ ಸಾಧ್ಯತೆಗಳಿರುವ ಸಂದೇಶವನ್ನು ಬರೆದಿದ್ದು ಈ ಹಿನ್ನಲೆಯಲ್ಲಿ ಆರೋಪಿಯ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 55, 103, 353(2) ರಂತೆ ಪ್ರಕರಣವನ್ನು ದಾಖಲಿಸಲಾಗಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನ
ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಳೆಂಜ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಆಗಿರುವ ನವೀನ್ ಸಿ.ಕೆ ಎಂಬವರು ಬೈಕ್ ಅನ್ನು ಕಳೆದುಕೊಂಡವರಾಗಿದ್ದಾರೆ ಇವರು ಮೇ 31ರಂದು ಮದ್ಯಾಹ್ನ 12.30 ಅಸಹಜರ ಸುಮಾರಿಗೆಉಜಿರೆಯ ಎಫ್ ಎಂ ಲಾಡ್ಜ್ ನ ಸಮೀಪ ಕೆ.ಎ 19 ಇ. ಹೆಚ್ 2516 ನಂಬರಿನ ಬುಲೆಟ್ ಬೈಕ್ ಅನ್ನು ನಿಲ್ಲಿಸಿ ಹೀಗಿದ್ದರು. ಕಚೇರಿ ಕೆಲಸ ಮುಗಿಸಿಕೊಂಡು 6 ಗಂಟೆಯ ಸುಮಾರಿಗೆ...
ಬೆಳ್ತಂಗಡಿ : ವಿಪರೀತ ಮಳೆಯಾಗುತ್ತಿರುವ ಕಾರಣ ಈ ಪ್ರವಾಸಿ ತಾಣಗಳಿಗೆ ನಿಷೇಧ
ಬೆಳ್ತಂಗಡಿ : ತಾಲೂಕಿನ ಗಡಾಯಿಕಲ್ಲು ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಪ್ರವೇಶವನ್ನು ನಿಷೇದಿಸಿದ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಆದೇಶ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹವಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಒಳ ಹರಿವು ಜಾಸ್ತಿ ಇರುವುದರಿಂದ ಪ್ರವಾಸಿಗರ ಚಾರಣಕ್ಕೆ ಅನಾನುಕೂಲ ಪರಿಸ್ಥಿತಿ ಉಂಟಾಗುತ್ತದೆ. ಈ...















