ವಿಧಾನ ಪರಿಷತ್ ಚುನಾವಣೆಗೆ ಸಿದ್ದತೆಗಳು ಪೂರ್ಣ; ತಹಶೀಲ್ದಾರ್ ಮಾಹಿತಿ

0

ಬೆಳ್ತಂಗಡಿ ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಉಪ ಚುನಾವಣೆಯು ಅಕ್ಟೋಬರ್ 21 ರ ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ, ಎಂದು ಚುನಾವಣಾಧಿಕಾರಿ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಮಾಹಿತಿ ನೀಡಿದರು. ಅವರು ಅ 20 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಚುನಾವಣಾ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದು ಕೊಂಡಿದೆ.ಬೆಳ್ತಂಗಡಿ ತಾಲೂಕಿನಲ್ಲಿ...

ಮದ್ದಡ್ಕ ಅಕ್ರಮ ದನ ಸಾಗಾಟ ಇಬ್ಬರ ಬಂಧನ

0

ಬೆಳ್ತಂಗಡಿ; ಸಮರ್ಪಕವಾದ ದಾಖಲೆಗಳಿಲ್ಲದೆ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನ‌ಸಾಗಾಟವನ್ನು ಪತ್ತೆಹಚ್ಚಿದ್ದು ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು ದನಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳು ಕೊಟ್ಟಿಗೆಹಾರ ನಿವಾಸಿಗಳಾದ ಅಶ್ವಥ್ (34)ಹಾಗೂ ಸಚಿನ್ (27) ಎಂಬವ ರಾಗಿದ್ದಾರೆ. ಯಾವುದೇ ಪರವಾನಿಗೆಯಿಲ್ಲದೆ ಗೋ ಸಾಗಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಮಧ್ದಡ್ಕದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ.ಕೆ.ಎ 16 ಡಿ 6960 ನಂಬರಿನ ಗೂಡ್ಸ್ ವಾಹನದಲ್ಲಿ ಎರಡು ದನಗಳು, ಒಂದು ಕರು, ಹಾಗೂ ಒಂದು ಹೋರಿಯನ್ನು ಹಿಂಸಾತ್ಮಕವಾಗಿ ಸಗಾಟ...

ಪ್ರಾಮಾಣಿಕತೆ, ಪೂರ್ವ ಸಿದ್ಧತೆಯೊಂದಿಗೆ ಅವಕಾಶಗಳನ್ನು ಬಳಸಿ; ಅಲೆಕ್ಸ್‌ ಸಿಕ್ವೆರಾ

0

ಬೆಳ್ತಂಗಡಿ; ಶಿಬಿರ ಮತ್ತು ತರಬೇತಿಗಳು ಸಾಕಷ್ಟು ನಡೆಯುತ್ತದೆ. ಆದರೆ ಅದರ ಕೊನೆಯಲ್ಲಿ ತರಬೇತಿಯ ಮೌಲ್ಯ ಮಾಪನ ಮಾಡಿದರೆ ಅದರ ಪರಿಣಾಮವನ್ನು ತಿಳಿಸುತ್ತದೆ. ರುಡ್‌ ಸೆಟ್‌ ಸಂಸ್ಥೆಯಲ್ಲಿ ನಡೆಯುವ. ನಿಮ್ಮ ತರಬೇತಿಯ ಶಿಬಿರಾರ್ಥಿಗಳ ಅನುಭವ ಕೇಳಿದರೆ ಇಲ್ಲಿಯ ತರಬೇತಿಯ ಗುಣಮಟ್ಟ ಎಷ್ಟು ವೈಶಿಷ್ಠಪೂರ್ಣ ಎಂಬುದು ತಿಳಿಯುತ್ತದೆ ಎಂದು ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಪ್ರಾಶುಂಪಾಲರಾದ ಪ್ರೋ. ಅಲೆಕ್ಸ್‌ ಸಿಕ್ವೆರಾ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದೆ * ಕಂಪ್ಯೂಟರ್‌ ಡಿಸೈನ್‌- ಡಿಟಿಪಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ,...

ಧರ್ಮಸ್ಥಳದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

0

ಬೆಳ್ತಂಗಡಿ; ಧರ್ಮಸ್ಥಳ ನೇತ್ರಾವತಿ ನದಿಯ ಸೇತುವೆಯ ಬಳಿ ದೊಂಡೋಲೆ ಕ್ರಾಸ್ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ಅ.18 ರಂದು ಬೆಳಿಗ್ಗೆ ನಡೆದಿದೆ. ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಹೆಂಗಸಿನ ಮೃತದೇಹವಾಗಿದ್ದು, ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ವಾರೀಸುದಾರರ ಪತ್ತೆಗಾಗಿ ಧರ್ಮಸ್ಥಳ ಠಾಣೆಯ ನ್ನು ಸಂಪರ್ಕಿಸಲು ಕೋರಲಾಗಿದೆ.

ವಿಧಾನ ಪರಿಷತ್ ಚುನಾವಣೆ ಪಕ್ಷದ ಗೆಲುವಿಗೆ ಶ್ರಮಿಸಿ ಮಂಜುನಾಥ ಭಂಡಾರಿ

0

ಬೆಳ್ತಂಗಡಿ; ಮುಂದಿನ ವಿಧನಾ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.ಬೆಳ್ತಂಗಡಿಯ ಸಿ.ವಿ.ಸಿ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಸಮಿತಿಗಳ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಚುನಾಯಿತ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಬರುತ್ತಿದ್ದು ಅದನ್ನು ಎದುರಿಸಲು ಪಕ್ಷ ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂದರು.ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಬಗ್ಗೆ ಸಮಗ್ರವಾದ ಅನುಭವವಿರುವ ಅಭ್ಯರ್ಥಿ...

ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಯಿಂದ ಮತಯಾಚನೆ

0

ಬೆಳ್ತಂಗಡಿ; ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಇವರ ಪರವಾಗಿ ಬೆಳ್ತಂಗಡಿ ಮಂಡಲದಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜರವರು ಚುನಾಯಿತ ಜನಪ್ರತಿನಿಧಿಗಳಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾಜಿ ಕಿಯೋನಿಕ್ಸ್ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷರಾದ ಶ್ರೀನಿವಾಸ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಜಿಲ್ಲಾ ಕಾರ್ಯದರ್ಶಿ ಸೀತರಾಮ್ ಬೆಳಾಲು, ಮಂಡಲ‌ ಉಪಾಧ್ಯಕ್ಷರುಗಳಾದ ಚೆನ್ನಕೇಶವ ಮುಂಡಾಜೆ, ಕೊರಗಪ್ಪ ಗೌಡ, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಂಚಾಯತ್...

ಬೆನ್ನಮೂಳೆ ಮುರಿತಾಕ್ಕೊಳಗಾದವರಿಗೆ ಆಸರೆಯಾದ ರಾಜ ಕೇಸರಿ

0

ಬೆಳ್ತಂಗಡಿ; ಸದಾ ನಿರಂತರವಾಗಿ ಸಾಮಾಜಿಕ. ಆರೋಗ್ಯ. ಸೇವಾ ಯೋಜನೆ ಗಳೊಂದಿಗೆ ಹೆಸರು ವಾಸಿಯಾಗಿರುವ ಸದಾ ಸಮಾಜದೊಂದಿಗೆ ಬೆರೆತು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವ ಸಂಘಟನೆ ಯಾದ ರಾಜ ಕೇಸರಿ ವತಿಯಿಂದ ಯಿಂದಬೆಳ್ತಂಗಡಿ ತಾಲೂಕಿನ ಪಾರಡ್ಕ ಮನೆ, ಇಳಂತಿಲ ಗ್ರಾಮ, ನಿವಾಸಿಯಾದ ಪದ್ಮನಾಭ ಕುಂಬಾರ ಎಂಬವರು15 ವರ್ಷದಿಂದ ಬೆನ್ನುಮೂಳೆ ಮುರಿತದಿಂದ ಬಳಲಿತ್ತಿದ್ದು ಇವರಿಗೆ ವೀಲ್ ಚರ್ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ . ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ..ಬೆಳ್ತಂಗಡಿ ತಾಲೂಕು ರಾಜ ಕೇಸರಿ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ.ವಿಪುಲ್...

ವೇಣೂರಿನಲ್ಲಿ ಬೈಕಿನಲ್ಲಿ ಬಂದು ಬಾಲಕಿಗೆ ತೊಂದರೆ ಪೋಕ್ಸೋ ಪ್ರಕರಣ ದಾಖಲು

0

ಬೆಳ್ತಂಗಡಿ; ವೇಣೂರಿನಲ್ಲಿ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಬೈಕ್ ನಲ್ಲಿ ಹಿಂಬಾಲಿಸಿ ತೊಂದರೆ ನೀಡಿದ ಘಟನೆ ಸಂಭವಿಸಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ಆರೋಪಿ ಜುಮಾರ್ (24) ಎಂಬಾತನಾಗಿದ್ದಾನೆ ಈತ ಕಳೆದ ಕೆಲವು ದಿನಗಳಿಂದ ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ರಸ್ತೆಯಲ್ಲಿ ತನ್ನ ಬೈಕ್ ನಲ್ಲಿ ಬಂದು ಬಾಲಕಿಯನ್ನು ಹಿಂಬಾಲಿಸಿ ಬೈಕ್ ನಲ್ಲಿ ಬರುತ್ತೀಯಾ ನಂಬರ್ ಕೊಡಿ ಎಂದು ಕೇಳುತ್ತಾ ತೊಂದರೆ ನೀಡಿದ್ದು ಈ ಬಗ್ಗೆ ನೊಂದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಘಟನೆಯ...

ಕುವೆಟ್ಟು; ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು

0

ಬೆಳ್ತಂಗಡಿ; ತಾಲೂಕಿನ ಕುವೆಟ್ಟು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಒಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಿದ ಘಟನೆ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮನೆಯಿಂದ 80,000 ಸಾವಿರ ನಗದು ಹಾಗೂ ಸುಮಾರು 66,000 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿರುವುದಾಗಿಲಲಿತ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅ 13 ರಾತ್ರಿಯ ವೇಳೆ ಮನೆಯ ಹಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಗೋಡ್ರೇಜಿನ ಬೀಗ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ...

ಸಿ.ಪಿ.ಐ.ಎಂ ಪಕ್ಷದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆ

0

ಬೆಳ್ತಂಗಡಿ; ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷ್ವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೂತನ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಎಂ.ಭಟ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಪಕ್ಷದ ತಾಲೂಕು ಸಮ್ಮೇಳನ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದು ಇವರನ್ನು ಮುಂದಿನ 3 ವರ್ಷದ ಅವದಿಗೆ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು 1990 ರಿಂದ ಸಿಪಿಐ(ಎಂ) ಮೂಲಕ ರಾಜಕೀಯ ಪ್ರವೇಶಿಸಿ ಕಳೆದ 34 ವರ್ಷಗಳಿಂದ ಕಾರ್ಮಿಕರ, ರೈತರ, ಸಂಘಟನೆ ಮಾಡಿ ಅವರ ಪರ ಕಾರ್ಯನಿರ್ವಹಿಸುತ್ತಿರುವ ಇವರು ಬೀಡಿ ಕಾರ್ಮಿಕರ, ಅಂಗನವಾಡಿ, ಬಿಸಿಯೂಟ, ಆಶಾ, ಅಟೋ ಮೊದಲಾದ ಕಾರ್ಮಿಕ...