

ಬೆಳ್ತಂಗಡಿ: ಗ್ರಾಮ ಆಡಳಿತಾಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹಿಸಿ 10.02.2025 ರಿಂದ ಹೋರಾಟ ನಡಸುತ್ತಿದ್ದರೂ, ಸರಕಾರ ತನ್ನ ಜಾಣ ಮೌನವನ್ನು ಅನುಸರಿಸುತ್ತಿರವುದು ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಅಭಿಪ್ರಾಯ ಪಡಿಸಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ
ಗ್ರಾಮ ಆಡಳಿತಾದಿಕಾರಿಗಳ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡಿದ ಅವರು ಕಂದಾಯ ಇಲಾಖೆಯ ಬಹುಮುಖ್ಯ ಅಂಗವಾದ ಗ್ರಾಮ ಆಡಳಿತಾದಿಕಾರಿಗಳು ಮುಷ್ಕರ ನಡೆಸುತ್ತಿರುವುದರಿಂದ ಜನರ ದಿನ ನಿತ್ಯದ ಅಗತ್ಯ ಸೇವೆಗಳಿಗೆ ಸಮಸ್ಯೆಗಳಾಗಿವೆ. ಜನರ ಈ ಸಮಸಗಯೆಗಳಿಗೆ ಸರಕಾರದ ನಿರ್ಲಕ್ಷತನವೇ ಕಾರಣವಾಗಿದೆ ಎಂದವರು ಸರಕಾರವನ್ನು ಟೀಕಿಸಿದರು. ಇಂದು ಗ್ರಾಮ ಆಢಳಿತಾದಿಕಾರಿಗಳ ಹೊರೆಯೂ ಹೆಚ್ಚಾಗಿದ್ದು, ಐದಾರು ಗ್ರಾಮಗಳನ್ನು ಓರ್ವ ಸಿಬ್ಬಂದಿ ನಿರ್ವಹಿಸಬೇಕಾದ ದುಸ್ತಿತಿ ಇರುವುದು ವಿಷಾಧನೀಯ. ಹೊಸ ನೇಮಕಾತಿಗಳನ್ನು ಮಾಡಿ ಪ್ರತಿ ಗ್ರಾಮಕ್ಕೊಬ್ಬ, ದೊಡ್ಡ ಗ್ರಾಮಗಳಾದರೆ ಇಬ್ಬರು ಗ್ರಾಮ ಆಡಳಿತಾದಿಕಾರಿ ನೇಮಕ ಮಾಡುವುದರ ಮೂಲಕ ಅವರ ಹೊರೆಯನ್ನು ಇಳಿಸುವುದರಿಂದ ಯುವಕರಿಗೆ ಉದ್ಯೋಗ ಒದಗಸಿದಂತೆ ಕೂಡಾ ಆಗುತ್ತದೆ ಎಂದವರು ಹೇಳಿದರು. ಜೊತೆಗೆ ಕಂದಾಯ ಇಲಾಖೆಯ ಒಳಗೆ ಇರುವ ಗುತ್ತಿಗೆ ಪದ್ದತಿಯನ್ನು ನಿಷೇದಿಸಿ, ಅವರನ್ನೆಲ್ಲಾ ಖಾಯಂ ನೌಕರರನ್ನಾಗಿ ಮಾನ್ಯ ಮಾಡಿ ಕಂದಾಯ ಇಲಾಖೆಯಲ್ಲಿ ಖಾಯಂ ನೌಕರರೇ ಇರುವಂತೆ ಮಾಡಬೇಕಾದ್ದು ಸರಕಾರದ ಆದ್ಯ ಕರ್ತವ್ಯ ಆಗಬೇಕು ಎಂದರು. ಗ್ರಾಮ ಆಡಳಿತಾದಿಕಾರಿಗಳ ಬೇಡಿಕೆಗಳಾದ ವರ್ಗಾವಣೆ ವಿಚಾರವಾಗಲಿ, ಸುಸಜ್ಜತ ಪೀಟೋಪಕರಣಗಳ ಜೊತೆಗೆ ಒಳ್ಳೆಯ ಸೌಲಭ್ಯಗಳ ಹೊಂದಿದ ಕಚೇರಿ ಒದಗಿಸುವ ಬಗ್ಗೆಯಾಗಲಿ, ಹೈಸ್ಕಿಲ್ಡ್ ನೌಕರರನ್ನಾಗಿ ಮಾನ್ಯ ಮಾಡುವ ವಿಚಾರವಾಗಲಿ, ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವ ವಿಚಾರವಾಗಲಿ, ಪ್ರಯಾಣ ವೆಚ್ಚಗಳಾಗಲಿ, ಭಡ್ತಿಯ ಬೇಡಿಕೆಯಾಗಲಿ, ಸೇವಾ ಭದ್ರತೆಯಂತಹ ಅತೀ ಅಗತ್ಯವಾದ ನೌಕರರ ಕೆಲವು ಪ್ರಮುಖ ಬೇಡಿಕೆಗಳ ಬಗ್ಗೆ ಸರಕಾರ ಗಮನ ನೀಡಿ ಪರಿಹರಿಸುವುದರ ಮೂಲಕ ಮುಷ್ಕರದಿಂದ ಜನರಿಗಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
