Home ರಾಜಕೀಯ ಸಮಾಚಾರ ತಾಲೂಕಿನ ರಸ್ತೆಗಳಿಗೆ ಅನುದಾನ ಒದಗಿಸುವಂತೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಂದ ಲೋಕೋಪಯೋಗಿ ಸಚಿವರಿಗೆ  ಮನವಿ

ತಾಲೂಕಿನ ರಸ್ತೆಗಳಿಗೆ ಅನುದಾನ ಒದಗಿಸುವಂತೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಂದ ಲೋಕೋಪಯೋಗಿ ಸಚಿವರಿಗೆ  ಮನವಿ

38
0

ಬೆಳ್ತಂಗಡಿ; ಜಿಲ್ಲೆಗೆ ಆಗಮಿಸಿದ ರಾಜ್ಯ‌ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಪುತ್ತೂರಿನಲ್ಲಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ಮಾಡಿ ಬೆಳ್ತಂಗಡಿ ತಾಲೂಕಿನ ಅತೀ ಅಗತ್ಯವಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು. ಈ ಮನವಿಗೆ ಸಚಿವರು ಸಕಾರಾತ್ಮಕ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಸಕರು ಅಶೋಕ ರೈ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಸಾಹುಲ್ ಹಮೀದ್ , ಬೆಳ್ತಂಗಡಿ ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಬೆಳ್ತಂಗಡಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಅರೋಗ್ಯ ರಕ್ಷಾ ಸಮಿತಿ ಸದಸ್ಯ ಕರೀಂ ಗೇರುಕಟ್ಟೆ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ , ಅಕ್ರಮ – ಸಕ್ರಮ ಸಮಿತಿ ಸದಸ್ಯ ಅಯೂಬ್ ಕಾಣಿಯೂರು ,ಬೆಳ್ತಂಗಡಿ ವಿ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ ಪ್ರಮುಖರಾದ ಹನೀಫ್ ಉಜಿರೆ , ವಿಜಯ ವಿಕ್ರಮ್, ಬಾಲಕೃಷ್ಣ ಶೆಟ್ಟಿ ಬಾರ್ಯ ,ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here