ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿ, ಕಬಡ್ಡಿ ಆಟಗಾರ ಚಿನ್ಮಯ ಗೌಡ ನಿಧನ

0

ಬೆಳ್ತಂಗಡಿ: ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಚಿನ್ಮಯ ಗೌಡ ಪಿ.ಕೆ. (18) ಅಲ್ಪಕಾಲದ ಅಸೌಖ್ಯದಿಂದ ನ.12 ರಂದು ನಿಧನ ಹೊಂದಿದರು.ಮಂಡ್ಯ ಮೂಲದವರಾದ ಇವರು ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದು ಕಾಲೇಜಿಗೆ ತೆರಳುತ್ತಿದ್ದರು.ಉತ್ತಮ ಕಬಡ್ಡಿ ಪಟುವಾಗಿದ್ದ ಅವರು ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಬಂದಾರು ಗ್ರಾಮ ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಹಿಳಾ ಸಮಿತಿಯ ವತಿಯಿಂದ ಮಹಿಳಾ ಸಿರಿ ಕಾರ್ಯಕ್ರಮ

0

ಬಂದಾರು : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನವೆಂಬರ್ 11 ರಂದು ಶ್ರೀ ಕ್ಷೇತ್ರ ವಠಾರದಲ್ಲಿ ಮಹಿಳಾ ಸಮಿತಿ ವತಿಯಿಂದ ಮಹಿಳಾ ಸೇವಾ ಸಿರಿ ಕಾರ್ಯಕ್ರಮ ನಡೆಯಿತು.ಶ್ರೀ ಕ್ಷೇತ್ರದಲ್ಲಿ ಜನವರಿ 07 ರಿಂದ 12 ರ ವರೆಗೆ ನಡೆಯುವಬ್ರಹ್ಮಕಲಶೋತ್ಸವ ತಯಾರಿ ಬಗ್ಗೆ ದಿಕ್ಸೂಚಿ ಭಾಷಣಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥರಾದ ಬಜಗುತ್ತು ಬಾಲಕೃಷ್ಣ ಪೂಜಾರಿಯವರು ಮಾತನಾಡುತ್ತ ಬ್ರಹ್ಮಕಲಶೋತ್ಸವದ ತಯಾರಿಯಲ್ಲಿ ಮಹಿಳಾ ಸಮಿತಿಯ ಎಲ್ಲಾ ಸದಸ್ಯರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ದೇವರ ಪುಣ್ಯ ದ ಕಾರ್ಯದಲ್ಲಿ ಭಾಗಿಯಾಗುವುದು ಮುಖ್ಯ....

ಉರುವಾಲು; ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿಗೆ 3 ವರ್ಷ ಜೈಲು ಶಿಕ್ಷೆ

0

ಬೆಳ್ತಂಗಡಿ; ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್ಸಿ-2 ಪೊಕ್ಸ್‌ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್. ಅವರು 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಸಂಜೀವ ನಾಯ್ಕ (57) ಶಿಕ್ಷೆಗೊಳಗಾದವನು. ಈತ ಜ.23ರಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು....

ನ.15 ಗುಂಡ್ಯದಲ್ಲಿ ನಡೆಯುವ ಕಸ್ತೂರಿ ರಂಗನ್ ವರದಿ ವಿರುದ್ದದ ಹೋರಾಟಕ್ಕೆ ಕೆ.ಎಸ್.ಎಂ.ಸಿ ಎ ಬೆಂಬಲ

0

ಬೆಳ್ತಂಗಡಿ; ಗುಂಡ್ಯದಲ್ಲಿ ನ15ರಂದು ಮಲೆನಾಡು ಹಿತರಕ್ಷಣಾ ವೇದಿಕೆ ಹಾಗೂ ಬೇರೆ ಬೇರೆ ಸಂಘಟನೆಗಳ ಒಡಗೂಡಿಕೆಯಿಂದ ನಡೆಯಲಿರುವ ಕಸ್ತೂರಿರಂಗನ್ ವರದಿ ವಿರುದ್ಧ ಕಾರ್ಯಕ್ರಮಕ್ಕೆ ಕರ್ಣಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ರಿ)ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಹಾಗೂ ನಿರ್ದೇಶಕ ವಂ. ಫಾ. ಆದರ್ಶ್ ಜೋಸೆಫ್ ತಿಳಿಸಿದ್ದಾರೆ. ನಾಡಿನ ಜನರನ್ನು ಕಾಡುತ್ತಿರುವ ಈ ಸಮಸ್ಯೆಯ ಬಗ್ಗೆ ಸರಕಾರದ ನ ಸೆಳೆಯಲು ನಡೆಸುತ್ತಿರುವ ಈ ಹೋರಾಟದಲ್ಲಿ ನಮ್ಮ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಕಸ್ತೂರಿ...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ರಕ್ಷಿತ್ ಶಿವರಾಂ ಅವರಿಗೆ ದಯಾ ಸಂಸ್ಥೆಯಿಂದ ಅಭಿನಂದನೆ

0

ಬೆಳ್ತಂಗಡಿ; ಅಂಧ ,ವಾಕ್ ಮತ್ತು ಶ್ರವಣ ದೋಷ ಹೊಂದಿರುವ ಹಾಗೂ ಹಲವು ನ್ಯೂನತೆಗಳಿಂದ ಕೂಡಿದ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ 150 ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತ ಬರುತ್ತಿರುವ ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯೂರು ಇವರ ಸೇವೆಯನ್ನು ಗುರುತಿಸಿ ಸರ್ಕಾರ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು.ಪ್ರಶಸ್ತಿಗೆ ಆಯ್ಕೆಯಾಗಲು ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಇಂದು ಕಛೇರಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಫಾದರ್ ವಿನೋದ ಮಸ್ಕರೇನ್ಸ್ , ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಿತ್...

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿ ವಿರುದ್ದ ಪ್ರತಿಭಟನೆ ವರದಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ; ಹರೀಶ್ ಪೂಂಜ

0

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ ಅದರಲ್ಲಿರುವ ವಿಚಾರಗಳು ವಾಸ್ತವದಿಂದ ದೂರವಾಗಿದೆ ಮೆಲೆನಾಡಿನ ಜನರ ಜೀವನವನ್ನು ಕಸಿದುಕೊಳ್ಳುವ ಈ ವರದಿಯನ್ನು ಸರಕಾರ ತಿರಸ್ಕರಿಸಬೇಕು ಎಂದುಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒತ್ತಾಯಿಸಿದರು.ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ವತಿಯಿಂದಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಸರಕಾರ ಯಾವುದೇ ಇರಲಿ ಅದು ಜನರ ಹಿತಕಾಯಬೇಕು ಕಾಂಗ್ರೆಸ್ ಸರಕಾರ ಇರಲಿ ಬಿಜೆಪಿ ಸರಕಾರ ಇರಲಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಕಾರ್ಯ ಮಾಡಿದರೆ ಅದನ್ನು ಜನರೊಂದಿಗೆ ನಿಂತು ವಿರೋಧಿಸುತ್ತೇನೆ....

ನೆರಿಯ, ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

0

ಬೆಳ್ತಂಗಡಿ; ನೆರಿಯ ಗ್ರಾಮದ ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ನೆರಿಯ ಗ್ರಾಮದ ಆಶ್ರಮ ಶಾಲೆಯ ಹಾಸ್ಟೆಲ್ ನ ಎಂಟನೇ ತರಗತಿಯಲ್ಲಿ ಕಲಿಯುತಿದ್ದ ವಿಜಯಪುರದ ವಿದ್ಯಾರ್ಥಿನಿ ಬೆಳಿಗ್ಗೆ ಸ್ಯಾನಿಟೈಸರ್ ಸೇವಿಸಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದು ತಕ್ಷಣ ಅವಳನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕಳೆದ ಕೆಲವು ದಿನಗಳಿಂದ ಮನೆಗೆ ಹೋಗುತ್ತೇನೆ ಇಲ್ಲಿ ಇರುವುದಿಲ್ಲ ಎಂದು ಹೇಳುತಿದ್ದಳು ಎನ್ನಲಾಗಿದ್ದು , ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದಳು ಎಂದು ತಿಳಿದು ಬರಬೇಕಾಗಿದೆ.

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ

0

ಬೆಳ್ತಂಗಡಿ: ತುಮಕೂರಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸ್ ನಲ್ಲಿ ನಲ್ಲಿ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮುಂಡಾಜೆ ನಿವಾಸಿಯಾದ ತೇಜಲ್ ಕೆ.ಆರ್ ಇವರು ಆಯ್ಕೆಯಾಗಿರುತ್ತಾರೆ.ಇವರು ಈವರೆಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಹಲವುಬಾರಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆದು ಗ್ರಾಮೀಣ ಜನರಿಗೆ ಸ್ಪೂರ್ತಿ ನೀಡುತ್ತಿರುವ ಉತ್ತಮ ಪ್ರತಿಭೆ ಆಗಿರುತ್ತಾರೆ. ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುವ 39 ನೆಯ ಕಿರಿಯರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೂ ಈಗಾಗಲೇ ಆಯ್ಕೆಯಾಗಿರುವ ಇವರು ಮುಂಬರುವ ದಿನಗಳಲ್ಲಿ 2 ರಾಷ್ಟ್ರ ಮಟ್ಟದ...

ಮುಂಡಾಜೆ: ಆಟೋರಿಕ್ಷಾಕ್ಕೆ ಕಾರುಡಿಕ್ಕಿ, ರಿಕ್ಷಾ ಚಾಲಕನಿಗೆ ಗಾಯ

0

ಬೆಳ್ತಂಗಡಿ; ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾರು ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿಯಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ಚಾರ್ಮಾಡಿ ಕಡೆಯಿಂದ ಉಜಿರೆಯತ್ತ ತೆರಳುತ್ತಿದ್ದ ದಾವಣಗೆರೆ ಮೂಲದ ಕಾರು ಹಾಗೂ ಉಜಿರೆಯಿಂದ ಮುಂಡಾಜೆ ಕಡೆ ತೆರಳುತ್ತಿದ್ದ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿವೆ.ಘಟನೆಯಲ್ಲಿ ರಿಕ್ಷಾ ಚಾಲಕ ದಿಡುಪೆಯ ಸತೀಶ್( 39) ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ...

ಉಪ್ಪಿನಂಗಡಿ: ಜಾಗದ ವಿವಾದ ಕೃಷಿಕನ ಕೊಲೆ

0

ಉಪ್ಪಿನಂಗಡಿ: ಜಾಗದ ವಿವಾದಕ್ಕೆ ಸಂಬಂಧಿಸಿ ಪ್ರಗತಿಪರ ಕೃಷಿಕರೋರ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಗೋಳಿತೊಟ್ಟು ಸಮೀಪದ ಆಲಂತಾಯದ ಪೆರ್ಲ ಎಂಬಲ್ಲಿ ನ.8ರ ರಾತ್ರಿ ನಡೆದಿದೆ. ಪೆರ್ಲ ನಿವಾಸಿ, ಪ್ರಗತಿಪರ ಕೃಷಿಕ ರಮೇಶ್ ಗೌಡ (50) ಕೊಲೆಯಾದ ವ್ಯಕ್ತಿ. ಅವರನ್ನು ಸಮೀಪದ ಸಂಬಂಧಿ ಹರೀಶ್ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಇಲ್ಲಿನ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.