
ಬೆಳ್ತಂಗಡಿ; ಗುಂಡ್ಯದಲ್ಲಿ ನ15ರಂದು ಮಲೆನಾಡು ಹಿತರಕ್ಷಣಾ ವೇದಿಕೆ ಹಾಗೂ ಬೇರೆ ಬೇರೆ ಸಂಘಟನೆಗಳ ಒಡಗೂಡಿಕೆಯಿಂದ ನಡೆಯಲಿರುವ ಕಸ್ತೂರಿರಂಗನ್ ವರದಿ ವಿರುದ್ಧ ಕಾರ್ಯಕ್ರಮಕ್ಕೆ ಕರ್ಣಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ರಿ)ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಹಾಗೂ ನಿರ್ದೇಶಕ ವಂ. ಫಾ. ಆದರ್ಶ್ ಜೋಸೆಫ್ ತಿಳಿಸಿದ್ದಾರೆ. ನಾಡಿನ ಜನರನ್ನು ಕಾಡುತ್ತಿರುವ ಈ ಸಮಸ್ಯೆಯ ಬಗ್ಗೆ ಸರಕಾರದ ನ ಸೆಳೆಯಲು ನಡೆಸುತ್ತಿರುವ ಈ ಹೋರಾಟದಲ್ಲಿ ನಮ್ಮ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಕಸ್ತೂರಿ ರಂಗನ್ ವರದಿ ಹಾಗೂ ಇನ್ನೂ ಕೆಲವು, ಕೃಷಿಕರಿಗೆ ಹಾನಿ ಆಗುವ ಜ್ವಲಂತ ಸಮಸ್ಯೆಗಳಾದ ಅರಣ್ಯ ಕಂದಾಯ ಗಡಿಗುರುತು, ಕೆಲವು ಸರ್ವೆ ನಂಬರ್ ಗಳ ಸಮಸ್ಯೆ ಇತ್ಯಾದಿ ವಿಚಾರಗಳನ್ನು ಸರಿಪಡಿಸಿ ಅನ್ನದಾತರು ನೆಮ್ಮದಿಯಿಂದ ಬದುಕಲು ಬೇಕಾಗಿ ಹೋರಾಡುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದೇವೆ. ಎಂದು ಸಂಘಟನೆಯ ಅಧ್ಯಕ್ಷರು ನಿರ್ದೇಶಕರು ಹಾಗೂ ಕೇಂದ್ರ ಸಮಿತಿ ಸದಸ್ಯರು ತಿಳಿಸಿದರು.
