
ಬೆಳ್ತಂಗಡಿ; ಅಂಧ ,ವಾಕ್ ಮತ್ತು ಶ್ರವಣ ದೋಷ ಹೊಂದಿರುವ ಹಾಗೂ ಹಲವು ನ್ಯೂನತೆಗಳಿಂದ ಕೂಡಿದ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ 150 ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತ ಬರುತ್ತಿರುವ ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯೂರು ಇವರ ಸೇವೆಯನ್ನು ಗುರುತಿಸಿ ಸರ್ಕಾರ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು.
ಪ್ರಶಸ್ತಿಗೆ ಆಯ್ಕೆಯಾಗಲು ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಇಂದು ಕಛೇರಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಫಾದರ್ ವಿನೋದ ಮಸ್ಕರೇನ್ಸ್ , ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಿತ್ ಶಿವರಾಂ ಅವರು ಫಾ. ವಿನೋದ್ ಅವರನ್ನು ಅಭಿನಂದಿಸಿದರು.

ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಪಿ ಟಿ ಸೆಬಾಸ್ಟಿಯನ್ ,ಹಾಗೂ ಪ್ರಮುಖರಾದ ಮಹಮ್ಮದ್ ಹನಿಫ್ ಉಜಿರೆ ,ಕುಶಾಲಪ್ಪ ಗೌಡಶಿರ್ಲಾಲು ಮಹಮ್ಮದ್ ಸಿದ್ದಿಕ್ ಕೊಯ್ಯೂರು, ಕೊರಗಪ್ಪ ಪೂಜಾರಿ ಸುಲ್ಕೇರಿ
ಉಪಸ್ಥಿತರಿದ್ದರು.
