Home ಸ್ಥಳೀಯ ಸಮಾಚಾರ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿ, ಕಬಡ್ಡಿ ಆಟಗಾರ ಚಿನ್ಮಯ ಗೌಡ ನಿಧನ

ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿ, ಕಬಡ್ಡಿ ಆಟಗಾರ ಚಿನ್ಮಯ ಗೌಡ ನಿಧನ

61
0


ಬೆಳ್ತಂಗಡಿ: ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಚಿನ್ಮಯ ಗೌಡ ಪಿ.ಕೆ. (18) ಅಲ್ಪಕಾಲದ ಅಸೌಖ್ಯದಿಂದ ನ.12 ರಂದು ನಿಧನ ಹೊಂದಿದರು.
ಮಂಡ್ಯ ಮೂಲದವರಾದ ಇವರು ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದು ಕಾಲೇಜಿಗೆ ತೆರಳುತ್ತಿದ್ದರು.ಉತ್ತಮ ಕಬಡ್ಡಿ ಪಟುವಾಗಿದ್ದ ಅವರು ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

LEAVE A REPLY

Please enter your comment!
Please enter your name here