ಗೇರುಕಟ್ಟೆ; ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಗೇರುಕಟ್ಟೆ ಜನತಾ ಕಾಲೊನಿ ಸಮೀಪ ಗೇರು ತೋಟದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.ಮೃತ ವ್ಯಕ್ತಿ ತಣ್ಣೀರು ಪಂತ ಗ್ರಾಮದ ಕಲ್ಲೇರಿ ನಿವಾಸಿ ರವಿ ಯಾನೆ ವಾಸುದೇವ ನಾಯ್ಕ (44)ಎಂದು ಗುರುತಿಸಲಾಗಿದೆ.ಈತ ರಸ್ತೆ ಬದಿಯಲ್ಲಿ ಹಣ್ಣುಗಳ ವ್ಯಾಪಾರ ನಡೆಸುತ್ತಿದ್ದು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಸ್ಥಳೀಯ ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ಅವರಿಗೆ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾರೆ. ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ...

ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಹಾಗೂ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0

ಬೆಳ್ತಂಗಡಿ; ಮಹಿಳಾ ಶಕ್ತಿ ದೇಶದ ಶಕ್ತಿ, ಮಹಿಳೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬೆಳೆಸಿ ಮುಂದೆ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.ಅವರು ಬೆಳ್ತಂಗಡಿಯಲ್ಲಿ ಡಿ.ಕೆ ಆರ್. ಡಿ.ಎಸ್ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ವಲ್ಸಮ್ಮ ಎ.ಜೆ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಅನ್ನಮ್ಮ ಡೆಪ್ಯೂಟಿ ಕಮಾಂಡಂಟ್...

ಬೆಳ್ತಂಗಡಿ; ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಸುರಿದ ಭಾರೀ ಮಳೆ

0

ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಸಂಜೆಯ ವೇಳೆಗೆ ಸಿಡಿಲು ಗುಡುಗು, ಗಾಳಿಯೊಂದಿಗೆ ಅಬ್ಬರದಿಂದ ಮಳೆ ಸುರಿದಿದ್ದು ಕಳೆದ ಒಂದುವಾರದಿಂದ ಇದ್ದ ಬಿಸಿಯೇರಿದ ವಾತಾತವರಣವನ್ನು ತಂಪಾಗಿಸಿದೆ.ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದುತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಅಸ್ತ ವ್ಯಸ್ತಗೊಂಡಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.ಸಂಜೆ ಸುಮಾರು 5.30 ಗಂಟೆಯಿಂದ 6-30 ರವರೆಗೆ ಮಳೆ ಗುಡುಗು-ಸಿಡಿಲು, ಗಾಳಿ ಸಹಿತ ಸುರಿಯತೊಡಗಿತ್ತು. ತಾಲೂಕಿನ ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಬಳಂಜ, ಅಳದಂಗಡಿ, ಫಂಡಿಜೆ, ನಾರಾವಿ, ವೇಣೂರು ಪರಿಸರದಲ್ಲಿ...

ಬೆಳ್ತಂಗಡಿ ಉದಯವಾಣಿ ವರದಿಗಾರರಾಗಿದ್ದ ಅಶೋಕ್ ಶೆಟ್ಟಿ ಅವರ ಪತ್ನಿ ಶಕುಂತಲ ಶೆಟ್ಟಿ ನಿಧನ

0

ಬೆಳ್ತಂಗಡಿ; ಬೆಳ್ತಂಗಡಿಯ ಉದಯವಾಣಿ ಪತ್ರಿಕೆಯ, ಅರೆಕಾಲಿಕ ವರದಿಗಾರರಾಗಿ, ಪತ್ರಿಕಾ ವಿತರಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಅಶೋಕ್ ಶೆಟ್ಟಿಯವರ ಪತ್ನಿ ಭುಡ್ಡಾರು ಶಕುಂತಲಾ ಶೆಟ್ಟಿ(68ವ)ರವರು ಇಂದು(ಮಾ.12) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಚಿನ್ನ / ನಿಧಿಯ ಹೆಸರಿನಲ್ಲಿ ನಿರಂತರ ಕರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

0

ಬೆಳ್ತಂಗಡಿ;  ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬೆಳ್ತಂಗಡಿ ತಾಲೂಕಿನ ನಾಗರಿಕರಿಗೆ ಚಿನ್ನ/ ಹಳೆಯ ಕಾಲದ ನಿಧಿ ಇದೆ ಬನ್ನಿ ಎಂಬ ಕರೆಗಳು ಹಲವು ದಿನಗಳಿಂದ ಬರುತ್ತಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯು ಇಂತಹ ಕರೆ ಮಾಡುವವರ ವಿರುದ್ಧವಾಗಿ ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಲಾಯಿತು. ತಾಲೂಕಿನ ಹಲವು ವ್ಯಕ್ತಿಗಳಿಗೆ ಇಂತಹ ಕರೆಗಳು ನಿರಂತರವಾಗಿ ಬರುತ್ತಿದ್ದು, ಇದರ ಹಿಂದೆ ದೊಡ್ಡ...

ನಿಡಿಗಲ್ ಹೊಸ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಮುಂಡಾಜೆ ಗ್ರಾಪಂ

0

ಬೆಳ್ತಂಗಡಿ; ಕಳೆದ ವಾರವಷ್ಟೇ ನಿಡಿಗಲ್ ಹಳೇಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ 2000ರೂ. ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತೆ ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.ಮಂಗಳವಾರ ಬೆಳಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ.ಈ ಕಸದ ಚೀಲ, ಹಾಗೂ ಸೇತುವೆಯ ಇಕ್ಕೆಲಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅದು ಉಜಿರೆಯ ವ್ಯಕ್ತಿಗಳದ್ದೆoದು ತಿಳಿದುಬಂತು. ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ...

ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಬಂಗಾರ ಪಲಿಕೆ ಪ್ರದೇಶದಲ್ಲಿ ಭಾರೀ ಬೆಂಕಿ; ನೂರಾರು ಎಕ್ರೆ ಪ್ರದೇಶ ಬೆಂಕಿಗೆ ಆಹುತಿ

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ಮಲವಂತಿಗೆ ಗ್ರಾಮದ ಬಂಗಾರಪಲಿಕೆ ಪರಿಸರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.ಇಲ್ಲಿನ ಬಂಡೆಕಲ್ಲುಗಳು ಮತ್ತು ಕಡಿದಾದ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಅತ್ಯಂತ ದುರ್ಗಮ ಪ್ರದೇಶವಾದ ಇಲ್ಲಿ ಬೆಂಕಿ ಹತೋಟಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದವರು ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಲವು ಕಿ.ಮೀ ದೂರದವರೆಗೂ ಕಂಡು ಬರುತ್ತಿದ್ದು ಹತ್ತಾರು ಎಕ್ರೆ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ಹೊರ ನೋಟಕ್ಕೆ ಕಂಡು ಬರುತ್ತಿದೆ. ಇದೀಗ ಬೆಂಕಿ ಹುಲ್ಲುಗಾವಲನ್ನು...

ದ.ಕ ಜಿಲ್ಲೆಯಲ್ಲಿ ಬಿಸಿ ಗಾಳಿ,  ಹವಾಮಾನ ಇಲಾಖೆ ಮಾಹಿತಿ: ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ‌. 41 ಡಿಗ್ರಿಸೆಲ್ಸಿಯಸ್ ದಾಖಲಾಗಿರುವ ಉಷ್ಣಾಂಶ.

0

ಮಂಗಳೂರು: ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು ಬಿಸಿಗಾಳಿ(ಹೀಟ್ ವೇವ್) ಎಚ್ಚರಿಕೆಯನ್ನು ನೀಡಲಾಗಿದೆ.ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಮುಂದುವರೆಯುವ ಮುನ್ಸೂಚನೆ ಇರುತ್ತದೆ. ಇದರಿಂದ ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಬಿಸಿಗಾಳಿ/ ಹೀಟ್ ವೇವ್‌ಗೆ ಸಲಹೆಗಳು: ವಿಶೇಷವಾಗಿ ಮಧ್ಯಾಹ್ನ 12 ರಿಂದ...

ದಿಡುಪೆಯಲ್ಲಿ ಗುಡ್ಡಕ್ಕೆ ಬೆಂಕಿ:ಅಗ್ನಿಶಾಮಕ ವಾಹನಕ್ಕಾಗಿ ಪರದಾಟ

0

ದಿಡುಪೆಯ ಗೋಡೌನ್ ಗುಡ್ಡ ಎಂಬಲ್ಲಿ ಗುಡ್ಡ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಹರಡಿ ಹತ್ತಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.ಸ್ಥಳೀಯರ ಖಾಸಗಿ ಜಾಗದಿಂದ ಆರಂಭವಾದ ಬೆಂಕಿ ಕಂದಾಯ ಜಾಗವನ್ನು ಪ್ರವೇಶಿಸಿತು. ಬೆಂಕಿಯಿಂದ ಕೆಲವು ಮರ ಗಿಡಗಳಿಗೆ ಹಾನಿಯಾಗಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿ ಉರಿಬಿಸಿಲಿನ ವಾತಾವರಣದಲ್ಲಿ ತ್ವರಿತವಾಗಿ ವ್ಯಾಪಿಸಿ ರಸ್ತೆ ಬದಿಯನ್ನು ಸುಟ್ಟುಕೊಂಡು ಹೋಗಿ ಗುಡ್ಡ ಪ್ರದೇಶಕ್ಕೆ ನುಗ್ಗಿದೆ. ಗುಡ್ಡದ ಆಸು ಪಾಸು ಮನೆಗಳು ಇದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಬೆಂಕಿ ಮನೆಗಳಿರುವ ಪ್ರದೇಶಕ್ಕೆ ಹರಡದಂತೆ ಸಾಕಷ್ಟು ಶ್ರಮವಹಿಸಿದರು.-ಅಗ್ನಿಶಾಮಕಕ್ಕೆ ಪರದಾಟ-ಬೆಂಕಿಯನ್ನು...

ಶ್ರೀ ರಾಘವೇಂದ್ರ ಸ್ವಾಮಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ.

0

ಬೆಳ್ತಂಗಡಿ; ಲೈಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 20ರಿಂದ 23ರ ವರೆಗೆ ನಡೆಯುವ ಬ್ರಹ್ಮ ಕಳಶೋತ್ಸವದ ಪೂರ್ವಭಾವಿ ಸಭೆ ಈ ದಿನ ಆದಿತ್ಯವಾರ ಸಾಯಂಕಾಲ ಶ್ರೀಮಠದಲ್ಲಿ ನಡೆದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರಕ್ಷಿತ್ ಶಿವರಾಮ್ ರವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಬ್ರಹ್ಮಕಲಶೋತ್ಸವದ ಉಳಿದ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಲು ಸಭೆ ರಕ್ಷಿತ್ ಶಿವರಾಂ ರವರಿಗೆ ಅಧಿಕಾರ ನೀಡಿತು. ಪ್ರೊಫೆಸರ್ ಎ ಕೃಷ್ಣಪ್ಪ ಪೂಜಾರಿಯವರು ಪ್ರಸ್ತಾವಿಸಿ ಶ್ರೀ ರಾಘವೇಂದ್ರ ಮಠ 24 ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಅಧ್ಯಕ್ಷತೆ...