Home ಅಪಘಾತ ದಿಡುಪೆಯಲ್ಲಿ ಗುಡ್ಡಕ್ಕೆ ಬೆಂಕಿ:ಅಗ್ನಿಶಾಮಕ ವಾಹನಕ್ಕಾಗಿ ಪರದಾಟ

ದಿಡುಪೆಯಲ್ಲಿ ಗುಡ್ಡಕ್ಕೆ ಬೆಂಕಿ:ಅಗ್ನಿಶಾಮಕ ವಾಹನಕ್ಕಾಗಿ ಪರದಾಟ

10
0

ದಿಡುಪೆಯ ಗೋಡೌನ್ ಗುಡ್ಡ ಎಂಬಲ್ಲಿ ಗುಡ್ಡ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಹರಡಿ ಹತ್ತಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯರ ಖಾಸಗಿ ಜಾಗದಿಂದ ಆರಂಭವಾದ ಬೆಂಕಿ ಕಂದಾಯ ಜಾಗವನ್ನು ಪ್ರವೇಶಿಸಿತು. ಬೆಂಕಿಯಿಂದ ಕೆಲವು ಮರ ಗಿಡಗಳಿಗೆ ಹಾನಿಯಾಗಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿ ಉರಿಬಿಸಿಲಿನ ವಾತಾವರಣದಲ್ಲಿ ತ್ವರಿತವಾಗಿ ವ್ಯಾಪಿಸಿ ರಸ್ತೆ ಬದಿಯನ್ನು ಸುಟ್ಟುಕೊಂಡು ಹೋಗಿ ಗುಡ್ಡ ಪ್ರದೇಶಕ್ಕೆ ನುಗ್ಗಿದೆ. ಗುಡ್ಡದ ಆಸು ಪಾಸು ಮನೆಗಳು ಇದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಬೆಂಕಿ ಮನೆಗಳಿರುವ ಪ್ರದೇಶಕ್ಕೆ ಹರಡದಂತೆ ಸಾಕಷ್ಟು ಶ್ರಮವಹಿಸಿದರು.
-ಅಗ್ನಿಶಾಮಕಕ್ಕೆ ಪರದಾಟ-
ಬೆಂಕಿಯನ್ನು ಹತೋಟಿಗೆ ತರಲು ಮೂಡಬಿದರೆಯಿಂದ ಅಗ್ನಿಶಾಮಕ ವಾಹನ ಆಗಮಿಸಬೇಕಾಯಿತು. ಬೆಂಕಿ ಪ್ರಕರಣದ ಬಗ್ಗೆ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ದೂರನ್ನು ನೀಡಿದ ಕೂಡಲೇ ಅವರು ಪುತ್ತೂರು,ಬಂಟ್ವಾಳ ಅಗ್ನಿಶಾಮಕ ಠಾಣೆಗಳನ್ನು ಸಂಪರ್ಕಿಸಿದಾಗ ಅಲ್ಲಿ ವಾಹನಗಳು ಲಭ್ಯವಿರಲಿಲ್ಲ.ಬಳಿಕ ದಿಡುಪೆಯಿಂದ 70 ಕಿಮೀ ದೂರದ ಮೂಡುಬಿದಿರೆಯಿಂದ ವಾಹನ ಆಗಮಿಸಿತು. ಮಧ್ಯಾಹ್ನ 12ಲ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು 3 ಗಂಟೆ ವೇಳೆಗೆ ಅಗ್ನಿಶಾಮಕ ವಾಹನ ಆಗಮಿಸಿತು.ಈ ವೇಳೆ ಸಾಕಷ್ಟು ಪ್ರದೇಶಕ್ಕೆ ಬೆಂಕಿ ಆವರಿಸಿತ್ತು. ಕೊನೆಗೂ ಎಲ್ಲರ ಪ್ರಯತ್ನದಿಂದ ಬೆಂಕಿ ನಂದಿಸಲಾಗಿದೆ

LEAVE A REPLY

Please enter your comment!
Please enter your name here