ಬೆಳ್ತಂಗಡಿ; ಜೆ.ಎಂ.ಎಸ್. ವತಿಯಿಂದ ಮಹಿಳಾ ದಿನಾಚರಣೆ
ಬೆಳ್ತಂಗಡಿ; ಅಖಿಲಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಮಂಗಳೂರಿನ ಸಮಾಜಿಕ ಕಾರ್ಯ ಕರ್ತೆ ವತ್ಸಲ ನಾಯಕ್ ಮಾತನಾಡಿ ಮಹಿಳೆಯರ ಶೋಷಣೆ, ಲಿಂಗತಾರತಮ್ಯ ಸಮಾಜದಲ್ಲಿ,ಕುಟುಂಬದಲ್ಲಿ ನಮಗೆ ಅರಿವಿಲ್ಲದ ಹಾಗೇ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕಾಗಿದೆಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತರಾಗಿಸುವ ಕಾರ್ಯ ಮಾಡಬೇಕು. ಲಿಂಗತಾರತಮ್ಯವನ್ನು ನಮ್ಮ ಮನೆಯಿಂದಲೇ ಮೊದಲು ಹೋಗಲಾಡಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಮಹಿಳಾ ರಿಕ್ಷಾ ಚಾಲಕರಾದ ಕೆಮ್ಮಟೆಯ ಹರಿಣಾಕ್ಷಿ ರತ್ನಾಕರ ಗೌಡ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು...
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಬಿ.ಕೆ.ವಸಂತ್ ಆಯ್ಕೆ
ಬೆಳ್ತಂಗಡಿ; ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗಮಟ್ಟದ ಸರ್ವ ಸದಸ್ಯರ ಸಭೆ ಮೈಸೂರಿನಲ್ಲಿ ನಡೆಯಿತು. ಸಭೆಯಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿಎರಡನೇ ಬಾರಿಗೆ ಬಿ.ಕೆ.ವಸಂತ್ ಬೆಳ್ತಂಗಡಿ ಇವರು ಸರ್ವಾನುಮತದಿಂದಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದು ಮೂರು ವಿದ್ಯುತ್ ಕಂಬಕ್ಕೆ ಹಾನಿ; ಮೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಕ್ಕೆ ದಂಪತಿಗಳಿಗೆ ಹಲ್ಲೆ ಆರೋಪ
ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದ ಪರಿಣಾಮ ವಿದ್ಯುತ್ ವೈಯರ್ ಗೆ ಬಿದ್ದು ಮೂರು ಕಂಬ ಹಾನಿಯಾಗಿದೆ .ಇದರಿಂದ ಪಕ್ಕದ ಮನೆಯ ನಿವಾಸಿ ಮನೆಯ ಮೇಲೂ ವಿದ್ಯುತ್ ವೈಯರ್ ಬಿದ್ದಿತ್ತು. ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ನೀಡದ್ದಕ್ಕೆ ಮೂವರು ಸೇರಿ ದಂಪತಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗೆ.ಇದೀಗ ದಂಪತಿಗಳು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತಾರ ಬಳಿಯ ಹಂಡಾಲು ನಿವಾಸಿ ಅಬುಬಕ್ಕರ್ ಮನೆಯ ಅಂಗಳದಲ್ಲಿದ್ದ ಹಳೆಯ ಮರವನ್ನು ಕಡಿಯಲ್ಲಿ ಮೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡಿದ್ದರು...
ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಭೇಟಿ
ಬೆಳ್ತಂಗಡಿ; ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದಂತಹ ಅತೀ ವಂದನೀಯ ಡಾ||ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಷಪ್ ಅವರು ವಿಶೇಷ ಮಕ್ಕಳಲ್ಲಿ ವಿಶೇಷವಾದ ಪ್ರೀತಿ ಕಾಣುತ್ತದೆ, ಈ ಮಕ್ಕಳ ನಗು ನಮ್ಮಲ್ಲಿರುವ ಎಲ್ಲಾ ನೋವುಗಳನ್ನು ಮರೆಸುತ್ತದೆ ಹಾಗೆಯೇ ವಿಶೇಷ ಚೇತನ ಮಕ್ಕಳ ಮನಸ್ಸಿನಲ್ಲಿ ಕಪಟವಿಲ್ಲ ಅವರ ಹೃದಯದಲ್ಲಿ ನೈರ್ಮಲ್ಯತೆ ಹೆಚ್ಚಿರುತ್ತದೆ ಎಂದರು. ಇಂತಹ ವಿಶೇಷ ಚೇತನ ಮಕ್ಕಳಿಗೆ ಸೇವೆ ಮಾಡುವುದೆಂದರೆ ಅದೊಂದು ದೊಡ್ಡ ಕಾರ್ಯ ಅಂತನಹ ಸೇವೆ ನೀಡುತ್ತಿರುವ ದಯಾ...
ಅರಸಿನ ಮಕ್ಕಿ; 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ
ಅರಸಿನಮಕ್ಕಿ; ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ ಗ್ರಾಮ ಪಂಚಾಯತ್ ಅರಸಿನಮಕ್ಕಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಅರಸಿನಮಕ್ಕಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 31ನೇ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಅರಸಿನಮಕ್ಕಿಯ ಹತ್ಯಡ್ಕ ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಅರಸಿನಮಕ್ಕಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಶ್ರೀಮತಿ ಸ್ವರ್ಣಗೌರಿ...
ಕಳೆಂಜ; ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬೆಳ್ತಂಗಡಿ; ಕಳೆಂಜ ಗ್ರಾಮದ ಕಾಂಗ್ರೇಸ್ ಗ್ರಾಮ ಸಮಿತಿಯ ಸಭೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಗ್ರಾಮೀಣ ಬ್ಲಾಕ್ ಕಾಂಗೇಸ್ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಕೆಪಿಸಿಸಿ ಸದಸ್ಯರಾದ ಕೇಶವ ಪಿ ಬೆಳಾಲು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೆಬಾಸ್ಟಿನ್ ಪಿ.ಟಿ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಶ್ರೀದರ್ ಕಳೆಂಜ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗೇಸ್ ಅದಕ್ಷರಾದ ಹಕಿಂ...
ಬಜೆಟ್ ನಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಕ್ಕೆ 200 ಕೋಟಿ ಅನುದಾನ ಅಭಿನಂದನೀಯ : ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಹರೀಶ್ ಎಳನೀರು
ಬೆಳ್ತಂಗಡಿ; ಮಲೆಕುಡಿಯ ಸಮುದಾಯ ಸೇರಿದಂತೆ 12 ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಗಳು ಬಜೆಟ್ ನಲ್ಲಿ 200 ಕೋಟಿ ಅನುದಾನ ಮೀಸಲಿಟ್ಟುರುವುದು ಹಾಗೂ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳಿಗೆ ಸಿವಿಲ್ ಸರ್ವೀಸ್ ಸೇವೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಲು ನೇರ ನೇಮಕಾತಿಯನ್ನು ಕೈಗೊಳ್ಳುವ ಘೋಷನೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಹರೀಶ್ ಎಳನೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯೇಂದ್ರ ನಿಡ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸರಕಾರದ ಈ ಯೋಜನೆಗಳನ್ನು ಸಂಬಂಧ ಪಟ್ಟ ಇಲಾಖೆಗಳು ಸಮುದಾಯದ ಸಹಭಾಗಿತ್ವದಲ್ಲಿ...
ಶಾಸಕ ಹರೀಶ್ ಪೂಂಜ ಅವರಿಂದ ಮೈಪಾಲ ಸೇತುವೆ ಕಾಮಗಾರಿ ವೀಕ್ಷಣೆ
ಕೊಕ್ಕಡ; ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಬಂದಾರು ಗ್ರಾಮವನ್ನು ಸಂಪರ್ಕಿಸಲು ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ರೂ.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೈಪಾಲ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಕೊಕ್ಕಡ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯೋಗೀಶ್ ಆಳಂಬಿಲ, ಕೊಕ್ಕಡ ಪಂಚಾಯತ್ ಸದಸ್ಯರಾದ ವಿಶ್ವನಾಥ, ಬಿಜೆಪಿ ಮಂಡಲ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ...
ಬಂಟ್ವಾಳ; ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ
ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು. ಈತ ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಫೆ. 25ರ...
ಉಜಿರೆ; ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ; ಸ್ಕೂಟರ್ ಸವಾರ ಮೃತ್ಯು
ಬೆಳ್ತಂಗಡಿ; ಉಜಿರೆಯಲ್ಲಿ ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಉಜಿರೆ ನಿವಾಸಿ ಜಯಂತ್ (56) ಎಂಬವರಾಗಿದ್ದಾರೆ.ಇವರು ಮಾ.7ರಂದು ರಾತ್ರಿಯ ವೇಳೆ ಉಜಿರೆಯಿಂದ ಬಂದು ಭಾರತ್ ಶೋರೂಮ್ ಬಳಿ ಅಜಿತ್ ನಗರದ ರಸ್ತೆಗೆ ತಿರುಗಿಸುವ ವೇಳೆ ಉಜಿರೆ ಕಡೆಗೆ ಬರುತ್ತಿದ್ದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಜಯಂತ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಣ್ಣ...















