ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ
ಉಜಿರೆ, ಮಾರ್ಚ್ 25: ಉಜಿರೆಯ ಎಸ್.ಡಿ.ಎಂ ಕಾಲೇಜು ಡಿ.ರತ್ನವರ್ಮ ಹೆಗಡೆ ಸ್ಮರಣಾರ್ಥ 'ಆಧುನಿಕತಂತ್ರಜ್ಞಾನ ಸಾಂಸ್ಕೃತಿಕ ಪರಂಪರೆಗೆ ಪೂರಕ/ಮಾರಕ' ಕುರಿತು ಮಂಗಳವಾರ ಆಯೋಜಿಸಿದ್ದ ಮಂಗಳೂರು ವಿಶ್ವದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತಾ ಹಾಗೂ ನವ್ಯಶ್ರೀ ಯು ಪ್ರಥಮ ಸ್ಥಾನ ಗಳಿಸಿದ್ದಾರೆ.ಉಜಿರೆ ಎಸ್ ಡಿ ಎಮ್ ಬಿ.ಎಡ್ ಕಾಲೇಜಿನ ಫಾತಿಮತ್ ರಜಿಯಾ ಹಾಗೂ ಯಶಸ್ ದ್ವಿತೀಯ ಸ್ಥಾನ ಪಡೆದರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂದೀಪ್ ಜೆ ಸಮೈ ಅವರು ಉತ್ತಮ ಚರ್ಚೆಗೆ ವೈಯಕ್ತಿಕ ಬಹುಮಾನ...
ಶ್ರೀ ಕ್ಷೇತ್ರ ಧರ್ಮಸ್ಥಳ, ಹಾಗೂ ಡಾ.ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ದ ನ್ಯಾಯಾಲಯದಿಂದ ನಿರ್ಬಂಧ ಆದೇಶ
ಬೆಳ್ತಂಗಡಿ;ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಧರ್ಮಸ್ಥಳ ಕ್ಷೇತ್ರ ಹಾ್ಊ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಅವಹೇಳನ. ಅಪಪ್ರಚಾರ ಮಾಡುವವರ ವಿರುದ್ದ OS 2145/2025 ಪ್ರಕರಣದಲ್ಲಿ ಜಾನ್ ಡೋ (ಅಶೋಕಕುಮಾರ್) ಆದೇಶ ನೀಡಿದೆ. ಈ ಆದೇಶದಂತೆ, ಯಾರೇ ಆಗಿದ್ದರೂ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ಮತ್ತು ಅಪಪ್ರಚಾರ ಮಾಡುವ ಮಾಹಿತಿಯನ್ನು ಪ್ರಕಟಿಸಲು ಅಥವಾ ಹರಡಲು ಆವಕಾಶವಿರುವುದಿಲ್ಲ. ಜಾನ್ ಡೋ (ಅಶೋಕಕುಮಾರ್) ಆದೇಶ ಎಂದರೇನು? -ಜಾನ್ ಡೋ...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ನೀಡಬೇಕು; ಜಯಾನಂದ ಪಿಲಿಕಲ ಒತ್ತಾಯ
ಬೆಳ್ತಂಗಡಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರ ವಾಗಿ ನಾಡಿನಲ್ಲೆಡೆ ಚಿರಪರಿಚಿತವಾಗಿದೆ. ನಾಗದೇವರ ಮೂಲ ಆರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ. ಮಲೆಕುಡಿಯ ವಂಶಸ್ಥರಾದ ಕುಕ್ಕೆ ಮತ್ತು ಲಿಂಗ ಅನ್ನುವ ಇಬ್ಬರು ದೈವೀ ಪುರುಷರು ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕಾಲ ನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತಕ್ಕೆ ಒಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ಸಂಬಂಧ ಇರುವುದನ್ನು ನಾವು ಕಾಣಬಹುದು. ದೇವಸ್ಥಾನದ ವ್ಯವಸ್ಥಾಪನಾ...
ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಎಪ್ರಿಲ್ 12 ರಂದು ನಡೆಯುವ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೂರ್ವಭಾವಿ ಸಭೆ.
ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಬರುವ 2025 ನೇ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯು ಗೌಸಿಯಾ ಮಸೀದಿಯಲ್ಲಿ ನಡೆಯಿತು.ಅಧ್ಯಕ್ಷರಾದ ಮಹಮ್ಮದ್ ರಫೀ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ದಿನಾಂಕ:29:03:2025 ರಂದು ಗೌಸಿಯಾ ಮಸೀದಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಎಲ್ಲಾ ಸುನ್ನೀ ಸಂಘಟನೆಗಳ ಪಿಎಸ್.ಟಿ PST ಮತ್ತು ಸುನ್ನೀ ಮುಖಂಡರ ಸಭೆ ಕರೆಯುವುದೆಂದು ತೀರ್ಮಾನಿಸಲಾಯಿತು. ಸತ್ತಾರ್ ಸಖಾಫಿ,ಸಂಶೀರ್ ಸಖಾಫಿ,ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು,ಜುಬೈರ್ ಸಅದಿ,ರಶೀದ್ ಮದನಿ,ಅಬ್ದುಲ್...
ಬೆಳ್ತಂಗಡಿ;ಅಪಘಾತಗಳಿಗೆ ಕಾರಣವಾಗುತ್ತಿದೆ ಸುರಕ್ಷತಾ ಕ್ರಮಗಳಿಲ್ಲದೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ
ಬೆಳ್ತಂಗಡಿ; ಪೂಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭಾರದಿಂದ ನಡೆಯುತ್ತಿದೆ. ಆದರೆ ಕಾಮಗಾರಿಯ ವೇಳೆ ಸುರಕ್ಷಾ ಕ್ರಮಗಳನ್ನೂ ಸಮರ್ಪಕವಾಗಿ ಕೈಗೊಳ್ಳದೆ ಕಾಮಗಾರಿಗಳು ನಡೆಯುತ್ತಿದ್ದು ವಾಹನಗಳ ಅಪಘಾತಗಳಿಗೆ ಕಾರಣವಾಗುತ್ತಿದೆ.ರಸ್ತೆಬದಿಯಲ್ಲಿ ನಿರ್ಮಿಸುತ್ತಿರುವ ಬೃಹತ್ ಕಾಂಕ್ರೀಟ್ ಚರಂಡಿಗಳೇ ಅಪಘಾತಗಳ ಕೇಂದ್ರಗಳಾಗುತ್ತಿದೆ. ರಸ್ತೆಯ ಬದಿಯಲ್ಲಿ ಹಲವೆಡೆ ಅಗೆದು ಹಾಕಲಾಗಿದೆ ಹಲವೆಡೆ ತೆರೆದ ಚರಂಡಿ ಇದೆ ಇನ್ನೂ ಹಲವೆಡೆ ಕಬ್ಬಿಣದ ರಾಡ್ ಗಳನ್ನು ಕಟ್ಟಿ ಬಿಡಲಾಗಿದೆ. ಇದು ಕಾಮಗಾರಿ ನಡೆಯುವಾಗ ಸಹಜ ಆದರೆ ಕಿರಿದಾದ ತಾತ್ಕಾಲಿಕ ರಸ್ತೆಗಳ ಬದಿಯಲ್ಲಿ ಈ ರೀತಿ ಚರಂಡಿಗಳಿದ್ದು ಒಂದಿಷ್ಟು ಕಣ್ಣು ತಪ್ಪಿದರೂ ಅಪಾಯ...
ವೇಣೂರು; ಅಕ್ರಮ ಮರಳು ಸಾಗಾಟ ಪತ್ತೆ, ಪಿಕಪ್ ವಶಕ್ಕೆ,
ಬೆಳ್ತಂಗಡಿ: ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಜಲು ಸೂಳಬೆಟ್ಟು ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದನ್ನು ವೇಣೂರು ಪೊಲೀಸರು ಪತ್ತೆ ಹಚ್ಚಿರುವ ಘಟನೆ ಮಾ.22 ರಂದು ಸಂಜೆ ನಡೆದಿದೆ. ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ವೇಣೂರು ಠಾಣಾ ಪಿ ಎಸ್ ಐ ಶ್ರೀಶೈಲಾ ಡಿ ಮತ್ತು ಸಿಬ್ಬಂದಿಗಳಾದ ರವೀಂದ್ರ ಬಸವರಾಜ್ ಸತ್ಯ ಪ್ರಕಾಶ್ ಜತೆ ದಾಳಿ ಮಾಡಿದ್ದು ಪಿಕಪ್ ವಾಹನಕ್ಕೆ ಮರಳು ತುಂಬಿಸುವ ಸಂದರ್ಭದಲ್ಲಿ ದಾಳಿ ನಡೆದಿದೆ. ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೀಕೃತಗೊಳ್ಳಲಿರುವ ಉಜಿರೆ ಸಂತ ಅಂತೋಣಿ ಚರ್ಚ್ ಮುಖ್ಯ ಗೋಪುರದ ಶಿಲಾನ್ಯಾಸ
ಉಜಿರೆ: ಉಜಿರೆ ಸಂತ ಅಂತೋಣಿ ಚರ್ಚ್ ನವೀಕರಣಕ್ಕೆ ಚಾಲನೆ ನೀಡಲಾಗಿದ್ದು ಇದರ ಮುಖ್ಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮವು ಮಾ.23ರಂದು ನೆರವೇರಿಸಲಾಯಿತು. ಚರ್ಚ್ ನಲ್ಲಿ ಸ್ಥಳಾವಕಾಶ ನೀಗಿಸಲು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚ್ ನಲ್ಲಿ ನಿರ್ಮಾಣಗೊಂಡ ಕಟ್ಟಡದ ಆಶೀರ್ವಚನ ಮತ್ತು ಶಿಲಾನ್ಯಾಸವನ್ನು ಚರ್ಚ್ ಪ್ರಧಾನ ಧರ್ಮ ಗುರು ಫಾ. ಅಬೆಲ್ ಲೋಬೊ ನೆರವೇರಿಸಿದರು. ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಫಾ.ವಲೇರಿಯನ್ ಸಿಕ್ವೇರಾ, ಪಾಲನ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡೀಸ್, ಸಿ. ನ್ಯಾನ್ಸಿ ಡಯಸ್, ಕಾರ್ಯದರ್ಶಿ ಲೀಗೋರಿ...
ವೇಣೂರು ಠಾಣಾ ಎ.ಎಸ್.ಐ ಆಗಿ ಬೆನ್ನಿಚ್ಚನ್ ವಿಜೆ ಅಧಿಕಾರ ಸ್ವೀಕಾರ
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆಯ ಎಎಸ್‌ಐ ಆಗಿ ಬೆನ್ನಿಚ್ಛನ್ ವಿ.ಜೆ. ಮಾ. 24 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಬೆಳ್ತಂಗಡಿ ಠಾಣೆಯ ಹೆಡ್ ಕಾನ್ಸೆಬಲ್ ಆಗಿದ್ದ ಅವರು ಪದೋನ್ನತಿ ಹೊಂದಿ ವೇಣೂರು ಠಾಣೆಗೆ ವರ್ಗವಾಣೆಗೊಂಡಿದ್ದಾರೆ. ಇವರು 28 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದು, ಕಡಬ, ಪಣಂಬೂರು ಅಪಾರದ ಪತ್ತೆ ವಿಭಾಗ, ಧರ್ಮಸ್ಥಳ, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ, ಕಳೆದ ಮೂರು ವರ್ಷಗಳಿಂದ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅಳದಂಗಡಿ; ಮಳೆಯಿಂದ ಮನೆಗೆ ಹಾನಿ, ರಕ್ಷಿತ್ ಶಿವರಾಂ ಭೇಟಿ
ಬೆಳ್ತಂಗಡಿ; ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ಇತ್ತೀಚೆಗೆ ಬಾರಿ ಗಾಳಿ , ಮಳೆಗೆ ಮನೆಯೊಂದು ಸಂಪೂರ್ಣ ಕುಸಿದಿದ್ದು , ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಸಹಾಯಹಸ್ತ ನೀಡಿ ತಾತ್ಕಾಲಿಕ ಮನೆ ದುರಸ್ತಿಗೆ ನೆರವಾದರು. ಇತ್ತೀಚೆಗೆ ಅಳದಂಗಡಿ ಸಮೀಪದ ಪಿಲ್ಯದ ವಿಮಲ ಮಡಿವಾಳ ಎಂಬವರ ಮನೆ ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿತ್ತು. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕ ಸಂತೋಷ್ ಪೂಜಾರಿ ನಿನ್ನಿಕಲ್ಲು ರವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್...
ಶಾಸಕ ಹರೀಶ್ ಪೂಂಜ ಅವರಿಂದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಗೆ ಸನ್ಮಾನ
ಬೆಳ್ತಂಗಡಿ; ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಶಾಸಕರ ಕಚೇರಿ ಶ್ರಮಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜರವರು ಸನ್ಮಾನಿಸಿ ಗೌರವಿಸಿದರು.















