ಬೆಳ್ತಂಗಡಿ; ಕುತ್ಲೂರು ಗ್ರಮದ ಅಲಂಬ ಕುತ್ಲೂರು ರಸ್ತೆಯ ಕಾಡಬಾಗಿಲು ಸೇತುವೆಯ ಫಿಲ್ಲರ್ ಕುಸಿದಿದ್ದು ಸೇತುವೆಯ ಮೂಲಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನುಷೇದಿಸಲಾಗಿದೆ.
ಕಳೆದ ವರ್ಷವೇ ಈ ಸೇತುವೆಯ ಪಿಲ್ಲರ್ ಕುಸಿಯಲಾರಂಭಿಸಿತ್ತು ಇದೀಗ ಕಳೆದ ಎರಡು ದಿನ ಸುರಿದ ಭಾರೀ ಮಳೆಗೆ ನದಿಯಲ್ಲಿ ಭಾರೀಪ್ರಮಾಣದ ನೀರು ಹರಿದಿದ್ದು ಸೇತುವೆಯ ಫಿಲ್ಲರ್ ಕುಸಿದಿದೆ. ಸೇತುವೆ ಸಂಪೂರ್ಣವಾಗಿ ಕುಸಿದು ಬೀಳುವ ಅಒಅಯ ಎದುರಾಗಿದ್ದು ಗ್ರಾಮಪಂಚಾಯತು ಆಡಳಿತ ರಸ್ತೆಯನ್ನು ಬ್ಯಾರಿಕೇಡ್ ಗಳನ್ನು ಉಪಯೋಗಿಸಿ ಸಂಪೂರ್ಣವಾಗಿ ಮುಚ್ವಿದ್ದಾರೆ.

ಈ ಪರಿಸರದಲ್ಲಿ ಆದಿವಾಸಿಗಳು ಸೇರಿದಂತೆ ನೂರಾರು ಜನರು ವಾಸಿಸುತ್ತಿದ್ದು ಇದೃ ರಸ್ತೆ ಅವರಿಗೆ ಸಂಪರ್ಕ ರಸ್ತೆಯಾಗಿದೆ. ರಸ್ತೆ ಸಂಪೂರ್ಣವಾಗಿ ಮುಚ್ಚಿರುವುದರಿಂದ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

