ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ

0

ನವದೆಹಲಿ : ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ (92) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ. ಮನ್‌ಮೋಹನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ ಗೆ ದಾಖಲು ಮಾಡಲಾಗಿತ್ತು.

ಆಶಾ ಕಾರ್ಯಕರ್ತೆ ಯರಿಂದ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸರಕಾರಕ್ಕೆ ಮನವಿ

0

ಬೆಳ್ತಂಗಡಿ; ಆಶಾ ಕಾರ್ಯಕರ್ತೆಯರು ಇಂದು ಜನರ ಆರೋಗ್ಯ ರಕ್ಷಣೆಗಾಗಿ ಕಷ್ಟ ಪಡುತ್ತಿದ್ದರೂ ಅವರಿಗೆ ಕನಿಷ್ಟ ವೇತನ ಜಾರಿ ಮಾಡದಿರುವುದು ವಿಷಾಧನೀಯ ಎಂದು ಸಿಐಟಿಯು ಮುಖಂಡರಾದ ಬಿ.ಎಂ.ಭಟ್ ಹೇಳಿದರು.ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆ ಯರ ಸಮಾವೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಸರಕಾರ ಆಶಾ ಕಾರ್ಯಕರ್ತೆಯರಿಗೆ ಕೆಲಸದ ಭದ್ರತೆ ನೀಡಿ ರಕ್ಷಣೆ ಮಾಡಬೇಕಾಗಿದೆ ಎಂದರು. ಸಿಐಟಿಯು ನೇತೃತ್ವದಲ್ಲಿ ಬಲಿಷ್ಟ ಸಂಘಟೆನೆ ಕಟ್ಟಿ ಬೆಳೆಸಬೇಕು ಮತ್ತು ಸಿಐಟಿಯುನ ರಾಜಿ ಇಲ್ಲದ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಸಿಐಟಿಯುನಿಂದ ಮಾತ್ರವೇ ದುಡಿಯುವ ವರ್ಗದ...

ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್  

0

ಬೆಳ್ತಂಗಡಿ; ಕ್ರಿಸ್ಮಸ್ ಸಂದರ್ಭದಲ್ಲಿ ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಚೆಯರ್ಮಾನ್ ಸುಮಂತ್ ಕುಮಾರ್ ಜೈನ್ ಅವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ ವಂ ಲಾರೆನ್ಸ್ ಮುಕ್ಕುಯು ಅವರನ್ನು ಬೇಟಿಯಾಗಿ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನವೀನ್ ಹಾಗೂ ಇತರರು ಇದ್ದರು.

ಬೆಳ್ತಂಗಡಿ; ಡಿ.29ರಂದು  ಹೋಲಿ ರೆಡಿಮರ್ ಚರ್ಚ್ ವಠಾರದಲ್ಲಿ ದಯಾ ಫಿಯಸ್ತಾ-2024

0

ಬೆಳ್ತಂಗಡಿ: ದಯಾ ಅಭಿಮಾನಿಗಳು, ಹೋಲಿ ರಿಡೀಮರ್ ಚರ್ಚ್, ಬೆಳ್ತಂಗಡಿ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ಘಟಕ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ವಲಯ, ಕಥೋಲಿಕ ಸಭೆ ಬೆಳ್ತಂಗಡಿ ವಲಯ, ಕಥೋಲಿಕ ಸ್ತ್ರೀ ಸಂಘಟನೆ ಬೆಳ್ತಂಗಡಿ ವಲಯ, ಬೆಳ್ತಂಗಡಿ ವಲಯದ ಎಲ್ಲಾ ಚರ್ಚುಗಳು ಹಾಗೂ ಸಮಾನ ಮನಸ್ಕ ಜನರು, ಶಾಲಾ ಕಾಲೇಜುಗಳು ಮುಂತಾದವರ ಸಹಭಾಗಿತ್ವದಲ್ಲಿ ದಯಾ ವಿಶೇಷ ಮಕ್ಕಳ ಜೀವನಾಧಾರಕ್ಕಾಗಿ ಹಾಗೂ ಅವರಿಗೆ ಪುನರ್ವಸತಿಯನ್ನು ಒದಗಿಸುವ ನಿಟ್ಟಿನಲ್ಲಿ ದಯಾ ಫಿಯೆಸ್ತಾ ಎಂಬ ಹಬ್ಬವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಬೆಳ್ತಂಗಡಿ ಚರ್ಚ್...

ಬೆಳ್ತಂಗಡಿ : ಗುರುವಾಯನಕೆರೆಯ ‘ಕೆರೆ’ ಗೆ ಲೋಕಾಯುಕ್ತ ನ್ಯಾಯಾಮೂರ್ತಿ ದಿಢೀರ್ ಭೇಟಿ,ಪರಿಶೀಲನೆ

0

ಬೆಳ್ತಂಗಡಿ : ವಿಶಾಲವಾಗಿ ತೆರೆದುಕೊಂಡಿರುವ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನ‘ಕೆರೆಗೆ’ ಡಿ.26ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯ ಅವ್ಯವಸ್ಥೆ ಹಾಗೂ ಒತ್ತುವರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಬಂದಿದ್ದ ಹಿನ್ನಲೆ ಬಿ.ಎಸ್.ಪಾಟೀಲ್ ಅವರು ಕುವೆಟ್ಟು ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ್ದು.‌ಈ ವೇಳೆ ಕೆರೆಯ ಸುತ್ತಮುತ್ತಲಿನ ಪ್ರದೇಶದ ವಾತಾವರಣ ನೋಡಿ ಅಧಿಕಾರಿಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದು. ಕೆರೆಯ ಸುತ್ತ ಕಾರಿಡಾರ್ ನಿರ್ಮಿಸಿ ಸರಿಯಾದ ಕ್ರಮ ಕೈಗೊಳ್ಳುವಂತೆ...

ಸಫರೇ ತಕ್‌ರೀಮ್ ; ಕಾಜೂರಿನಲ್ಲಿ ಚಾಲನೆ

0

ಕಾಜೂರು : ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ 'ಅತ್ತಕ್‌ರೀಮ್' ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ 'ಸಫರೇ ತಕ್‌ರೀಮ್' ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು. ಕಾಜೂರು ಮುದರ್ರಿಸ್ ತೌಸೀಫ್ ಸ‌ಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ...

ಬೆಳ್ತಂಗಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟ

0

ಬೆಳ್ತಂಗಡಿ: ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟವಾಗಿದೆ.ದಿನಾಂಕ: 20-12-2022 ರಂದು ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ವಿಜಯ್ ಎಂಬವರು ತನ್ನ ಬೈಕ್ ನಲ್ಲಿ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನಾ ಎಂಬಲ್ಲಿ ಎದುರಿನಿಂದ ಬಂದ ಕೆಎಸ್ ಆರ್ಟಿಸಿ ಬಸ್ ಡಿಕ್ಕಿಯಾಗಿ ವಿಜಯ್ ಅವರಿಗೆ ಗಂಭೀರ ಗಾಯವಾಗಿತ್ತು. ವಿಜಯ್ ಅವರ ತಲೆಗೆ, ಮುಖಕ್ಕೆ, ತೀವ್ರ ಗಾಯವಾಗಿದ್ದರಿಂದ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ...

ಕುತ್ಲೂರು;ಆದಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ

0

ಬೆಳ್ತಂಗಡಿ; ಕಳೆದ 2 ವರ್ಷಗಳ ಹಿಂದೆ ಆದಿವಾಸಿಗಳಿಗಿದ್ದ ಏಕೈಕ ಸಂಪರ್ಕ ರಸ್ತೆಯ ಮದ್ಯದ ಸೇತುವೆ ಮುರಿದು ಬಿದ್ದರೂ ಹೊಸ ಸೇತುವೆ ನಿರ್ಮಿಸದೆ ಇರುವ ಸರಕಾರದ ನಿರ್ಲಕ್ಷ ಅತ್ಯಂತ ಖಂಡನೀಯವಾಗಿದೆ, ಅದನ್ನು ತಕ್ಷಣ ಪುನರ್ನಿರ್ಮಿಸಿಕೊಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದರುಅವರು ನಾರಾವಿ ಗ್ರಾಮ ಪಂಚಾಯತು ಎದುರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಅರಣ್ಯವನ್ನೂ ರಕ್ಷಿಸುತ್ತಾ, ಪರಿಸರ ಸಂರಕ್ಷಿಸುತ್ತಾ ತಮ್ಮ ಕಾಡಲ್ಲೆ ತಮ್ಮ ಬದುಕು ಕಟ್ಟಿಕೊಂಡ ಆದಿವಾಸಿಗಳು ಇಂದು ಅರಣ್ಯದಲ್ಲಿ ವಾಸಿಸುವುದೇ ಸರಕಾರಕ್ಕೆ...

ಡಿ. ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

0

ಬೆಳ್ತಂಗಡಿ;ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಡಿಸೆಂಬರ್ 21 ರಂದು ಕ್ರಿಸ್ಮಸ್ ಆಚರಣೆಯನ್ನು ಬೆಳ್ತಂಗಡಿ, ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.ಸೈಂಟ್ ಥೋಮಸ್ ಚರ್ಚ್ಗಂಡಿಬಾಗಿಲು ಧರ್ಮಗುರುಗಳಾದ ವಂದನೀಯ ಫಾ. ಜೋಸ್ ಆಯಾಂಕುಡಿ ಇವರು ಈ ಕಾರ್ಯಕ್ರಮದ ಪ್ರಾರಂಭದ ಸವಿನೆಪುಗಳನ್ನು ನೆನಪಿಸಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಸಂದೇಶ ನೀಡಿದರು. ಸೈಂಟ್ ತೋಮಸ್ ಪ್ರೌಡಶಾಲೆ ಗಂಡಿಬಾಗಿಲು ಇಲ್ಲಿಯ ಪ್ರಾಧ್ಯಾಪಕಾರದ ಥೋಮಸ್ಪಿ. ಎ ಹಾಗೂ ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದಏಲೀಯಮ್ಮ ತೋಮಸ್ ಇವರು ಆಹಾರ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸಿಸ್ಟರ್ ಸೆಲಿನ್ ಮದರ್...

ಮಹಿಳಾ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

0

ಬೆಳ್ತಂಗಡಿ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿ ರವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಪಿಂಟೋ ಇವರು ನೇಮಕ ಮಾಡಿದ್ದಾರೆ. ಶ್ರೀಮತಿ ಝೀನತ್ ಉಜಿರೆ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಕಾರ್ಯದರ್ಶಿಯಾಗಿ ಪ್ರಸ್ತುತ ಅಧ್ಯಕ್ಷರಾಗಿ ಮತ್ತು ಉಜಿರೆ ವರ್ತಕರ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.