ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ
ಬೆಳ್ತಂಗಡಿ; ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಅನುದಾನ ಮಂಜೂರುಗೊಳಿಸುವಂತೆ ಬೆಳ್ತಂಗಡಿ ವಕೀಲರ ಸಂಘದ ನಿಯೋಗ ಈ ದಿನ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಹೈಕೋರ್ಟ್ ನ್ಯಾಯವಾದಿ, ಕೆ ಪೀ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೊ, ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ,...
ಗ್ರಾಮ ಆಡಳಿತಾ ಧಿಕಾರಿಗಳ ಬೇಡಿಕೆಗಳನ್ನು ಸರಕಾರ ಕೂಡಲೇ ಸ್ಪಂದಿಸಬೇಕು; ಬಿ.ಎಂ ಭಟ್
ಬೆಳ್ತಂಗಡಿ: ಗ್ರಾಮ ಆಡಳಿತಾಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹಿಸಿ 10.02.2025 ರಿಂದ ಹೋರಾಟ ನಡಸುತ್ತಿದ್ದರೂ, ಸರಕಾರ ತನ್ನ ಜಾಣ ಮೌನವನ್ನು ಅನುಸರಿಸುತ್ತಿರವುದು ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಅಭಿಪ್ರಾಯ ಪಡಿಸಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆಗ್ರಾಮ ಆಡಳಿತಾದಿಕಾರಿಗಳ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡಿದ ಅವರು ಕಂದಾಯ ಇಲಾಖೆಯ ಬಹುಮುಖ್ಯ ಅಂಗವಾದ ಗ್ರಾಮ ಆಡಳಿತಾದಿಕಾರಿಗಳು ಮುಷ್ಕರ ನಡೆಸುತ್ತಿರುವುದರಿಂದ ಜನರ ದಿನ ನಿತ್ಯದ ಅಗತ್ಯ ಸೇವೆಗಳಿಗೆ ಸಮಸ್ಯೆಗಳಾಗಿವೆ. ಜನರ ಈ ಸಮಸಗಯೆಗಳಿಗೆ ಸರಕಾರದ ನಿರ್ಲಕ್ಷತನವೇ ಕಾರಣವಾಗಿದೆ ಎಂದವರು...
ಫೆ.19 ಬೆಳ್ತಂಗಡಿಯಲ್ಲಿ ಸುವರ್ಣ ಸಾಂಸ್ಕೃತಿಕ ವೈಭವ; ಮೂವರು ಸಾಧಕರಿಗೆ ಸುವರ್ಣ ರಂಗ ಸನ್ಮಾನ. ಯಕ್ಷಗಾನ ವೈಭವ
ಬೆಳ್ತಂಗಡಿ; ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ,ಸಾಂಸ್ಕೃತಿಕ ಚಿಂತಕ ಸಂಪತ್ ಬಿ. ಸುವರ್ಣ ಅವರ ಸಾರಥ್ಯದ ಈ ಪ್ರತಿಷ್ಠಾನ 14 ವರ್ಷಗಳಿಂದ ನಿರಂತರವಾಗಿ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನದಲ್ಲಿ ಸ್ಥಾನ ಪಡೆದಿದೆ.ಸಾಂಸ್ಕೃತಿಕ ಕ್ಷೇತ್ರದ ಮೇರು ಸಾಧಕರನ್ನು ಗುರುತಿಸಿ ಅವರ ಕಲಾಸೇವೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ರಂಗ ಸಮ್ಮಾನ್ ಗೌರವ ಪುರಸ್ಕಾರವನ್ನು ನೀಡುತ್ತಿದೆ.ಪ್ರತಿಷ್ಠಾನದ 15ನೇ ವರ್ಷದ ಸಾಂಸ್ಕೃತಿಕ ಕಲಾ ವೈಭವ...
ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ಮರುಡಾಮರೀಕರಣ ಕಾಮಗಾರಿಗೆ ಸಂಸದ ಬ್ರಿಜೇಶ್ ಚೌಟರಿಂದ ಚಾಲನೆ
ಬೆಳ್ತಂಗಡಿ : ಗುರುವಾಯನಕೆರೆ ಉಪ್ಪಿನಂಗಡಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ರೂ.6 ಕೋಟಿ ವೆಚ್ಚದಲ್ಲಿ ಮರು ಡಾಮರೀಕಣವಾಗಲಿದ್ದು, ಕಾಮಗಾರಿಗೆ ಫೆ.18ರಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರ ಪ್ರಯತ್ನದಿಂದ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿ( CRIF) ನಿಂದ ಆರು ಕೋಟಿ...
ಸಮಸಮಾಜದ ಕಲ್ಪನೆಯ ಪರ್ಯಾಯ ರಾಜಕೀಯ ಶಕ್ತಿ ಅನಿವಾರ್ಯ; ಅಂಬೆಡ್ಕರ್ ವಾದಿ ಚೇತನ್ ಅಹಿಂಸಾ ಪ್ರತಿಪಾದನೆ;ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರೊಂದಿಗೆ ಸಂವಾದ
ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರೊಂದಿಗೆ ಸಂವಾದ ಬೆಳ್ತಂಗಡಿ: ಕಾನ್ಶಿರಾಮ್, ಪೆರಿಯಾರ್, ಅಂಬೇಡ್ಕರ್ ಅವರ ಆಶಯಗಳನ್ನೊತ್ತ 'ಸಮ ಸಮಾಜದ' ಕಲ್ಪನೆಯ ಪರ್ಯಾಯ ರಾಜಕೀಯ ಚಿಂತನೆ, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಟಕ್ಕಾಗಿ ಪ್ರತ್ಯೇಕವಾದ ಒಂದು ರಾಜಕೀಯ ಶಕ್ತಿಯ ಅನಿವಾರ್ಯತೆ ಇದೆ ಎಂದು ಚಲನಚಿತ್ರ ನಟ, ಅಂಬೇಡ್ಕರ್ ವಾದಿ, ಚಳವಳಿಗಾರ ಚೇತನ್ ಅಹಿಂಸಾ ಪ್ರತಿಪಾದಿಸಿದರು.ರಾಜ್ಯಾದ್ಯಂತ ಸಮಾನ ಮನಸ್ಕರ ಜೊತೆ ಸಂವಾದ ಹಾಗೂ ಸುತ್ತು ಚರ್ಚೆ ನಡೆಸುತ್ತಿರುವ ಅವರು ಫೆ.17 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಸಂಘ ಸಂಸ್ಥೆ ಹಾಗೂ ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಿದರು.ಸಂವಾದಕ್ಕೂ ಮುನ್ನ ಪಿಪಿಟಿ ಮೂಲಕ...
ಮಡoತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವನ್ನೂ ಹಿಡಿದ ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ
ಮಾಲಾಡಿ: ಮಡoತ್ಯಾರು ಬಸವನಗುಡಿ ಬಳಿ ಸನತ್ ಕುಮಾರ್ ಮತ್ತು ನಾರಾಯಣ ಪೂಜಾರಿ ನಿವಾಸದ ಬಳಿ ಬೃಹತ್ ಹೆಬ್ಬಾವೊoದು ಪ್ರತ್ಯಕ್ಷ ಗೊಂಡಿತ್ತು.ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಸಾಹಸಿಕವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆಈ ಸಂದರ್ಭದಲ್ಲಿ ಪದ್ಮನಾಭ ಸಾಲಿಯಾನ್, ಪದ್ಮಪ್ರಸಾದ್ ಜೈನ್, ನಾರಾಯಣ ಪೂಜಾರಿ, ಮಿಥುನ್, ಶಂಕರ ಪೂಜಾರಿ, ಶರತ್ ಸಹಕರಿಸಿದರು.
ಕಕ್ಕಿಂಜೆ; ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ
ಬೆಳ್ತಂಗಡಿ; ಕಕ್ಕಿಂಜೆ ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹಜ್ಜೆನು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು ಸುಮಾರು 10ಮಕ್ಕಳು ಹೆಜ್ಜೇನುದಾಳಿಯಿಂದ ಅಸ್ವಸ್ಥರಾಗಿದ್ದು ,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ,ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹಜ್ಜೇನು ಕಚ್ಷಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಮಕ್ಕಳು ಅಸ್ವಸ್ಥರಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಶಾಲೆಯ ಸುತ್ತ ಹೆಜ್ಜೇನುಗಳು ಸುತ್ತಾಡುತ್ತಿದ್ದು...
ತಾಲೂಕಿನ ರಸ್ತೆಗಳಿಗೆ ಅನುದಾನ ಒದಗಿಸುವಂತೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಂದ ಲೋಕೋಪಯೋಗಿ ಸಚಿವರಿಗೆ ಮನವಿ
ಬೆಳ್ತಂಗಡಿ; ಜಿಲ್ಲೆಗೆ ಆಗಮಿಸಿದ ರಾಜ್ಯಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಪುತ್ತೂರಿನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ಮಾಡಿ ಬೆಳ್ತಂಗಡಿ ತಾಲೂಕಿನ ಅತೀ ಅಗತ್ಯವಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು. ಈ ಮನವಿಗೆ ಸಚಿವರು ಸಕಾರಾತ್ಮಕ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಸಕರು ಅಶೋಕ ರೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಸಾಹುಲ್ ಹಮೀದ್ , ಬೆಳ್ತಂಗಡಿ ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ , ಜಿಲ್ಲಾ...
ವಿಟ್ಲ; ಅಧಿಕಾರಿಗಳ ಸೋಗಿನಲ್ಲಿ ದರೋಡೆ; ಕೇರಳದ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರ ಬಂಧನ
ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಉದ್ಯಮಿಯ ಮನೆಗೆ ಈ ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ನಗದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಪೊಲೀಸ್ ಅಧಿಕಾರಿಯೊಬ್ಬ ಸೇರಿದಂತೆ ಸ್ಥಳೀಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ಆರೋಪಿ ಕೊಳ್ಳಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬಂದಿದೆ. ಆತ ನೀಡಿದ ಮಾಹಿತಿಯ ಅಧಾರದಲ್ಲಿ ಬಂಟ್ವಾಳ ನಿವಾಸಿ ಮೊಹಮ್ಮದ್ ಇಟ್ಬಾಲ್...
ಗುರವಾಯನಕೆರೆ; ಅಕ್ರಮ ಕಸಾಯಿಖಾನೆಗೆ ದಾಳಿ; ಇಬ್ಬರ ಬಂಧನ
ಬೆಳ್ತಂಗಡಿ ಗುರುವಾಯನಕೆರೆಯಲ್ಲಿರುವ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.ಕಳೆದ ಹಲವು ಸಮಯದಿಂದ ಇಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು ಈ ಬಗ್ಗೆ ದೂರುಗಳು ಕೇಳಿ ಬಂದಿದ್ದವು ಈ ಹಿನ್ನಲೆಯಲ್ಲಿ ಪೊಲೀಸರು ಇಲ್ಲಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಇಬ್ಬರು ಆರೋಪಿಗಳಾದ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಉಮ್ಮರಬ್ಬ(42) ಮತ್ತು ಪಡಂಗಡಿ ಗ್ರಾಮದ ಪೆರ್ಣಮಂಜ ನಿವಾಸಿ ಕರೀಂ(34) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿಸ್ದು ವಿಚಾರಣೆ ನಡೆಸುತ್ತಿದ್ದಾರೆ.ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿರುವ ಅನ್ವರ್...















