ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ವಿವಿದೆಡೆ ಭೂಕುಸಿತಗಳು ಸಂಭವಿಸಿ ಮನೆಗಳಿಗೆ ಹಾನಿ ಸಂಭವಿಸಿದೆ.
ಮೇಲಂತಬೆಟ್ಟು ಗ್ರಮಪಂಚಾಯತಿನ ಸವಣಾಲು ಗ್ರಾಮದ ನಡ್ತಿಕಲ್ಲು ಎಂಬಲ್ಲಿ ರವಿಚಂದ್ರ ಭಂಡಾರಿ ಎಂಬವರ ಜಾಗದಲ್ಲಿ ಭಾರೀಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಸ್ಥಳೀಯ ನಿವಾಸಿ ವಸಂತ ಎಂಬವರ ಮನೆಗೆ ಮಣ್ಣು ನೀರು ನುಗ್ಗಿದೆ. ಸಂಜೆಯ ವೇಳೆ ಗುಡ್ಡಕುಸಿತವಾಗಿದ್ದು ಮನೆ ಅಪಾಯದಲ್ಲಿದ್ದು ಮನೆಯವರನ್ನು ಸ್ಥಳಾಂತರಿಸಲಾಗಿದೆ.


ಗುರುವಾಯನಕೆರೆ ಮಸೀದಿಯ ಸಮೀಪ ಭೂಕುಸಿತವಾಗಿದ್ದು ಮಸೀದಿಯ ಆವರಣದ ವರೆಗೂ ಕುಸಿದು ಬಿದ್ದಿದೆ. ಬೆಳ್ತಂಗಡಿ ನಗರದ ಚರ್ಚ್ ರೋಡ್ ಸಮೀಪ ನಿವಾಸಿ ವಿನ್ಸೆಂಟ್ ಎಂಬವರ ಮನೆಯ ಸಮೀಪ ಗುಡ್ಡ ಕುಸಿತವಾಗಿದ್ದು ಮನೆಯೊಳಗೆ ಮಣ್ಣು ನುಗ್ಗಿದೆ, ಕಣಿಯೂರು ಗ್ರಾಮದ ಭದ್ರೊಟ್ಟು ತಿಮ್ಮಪ್ಪ ಶೆಟ್ಟಿ ಎಂಬವರ ತೋಟದ ಬಳಿ ದೊಡ್ಡ ಪ್ರಮಾಣದಲ್ಲು ಭೂಕುಸಿತವಾಗಿದ್ದು ಬೃಹತ್ ಗಾತ್ರದ ಮರಗಳು ತೋಟಕ್ಕೆ ಉರುಳಿ ಬಿದ್ದಿದೆ ತೋಡು ಬಂದ್ ಆಗಿದ್ದು ತೋಟ ಸಂಪೂರ್ಣವಾಗಿ ಜಲಾವೃತವಾಗಿದೆ.
ಬಾರ್ಯ ಗ್ರಾಮಪಂಚಾಯತಿನ ಕಜೆಮಾರು ಎಂಬಲ್ಲಿ ಭೂಮಿ ಕುಸಿಯುವ ಅಪಾಯ ಎದುರಾಗಿದ್ದು ಮೂರು ಮನೆಗಳು ಅಪಾಯದಲ್ಲಿದ್ದು ಮನೆಯವರನ್ನು ಸ್ಥಳಾಂತರಿಸಲಾಗಿದೆ.
ನಾವೂರು ಗ್ರಾಮದಲ್ಲಿ ಅಲ್ಲಲ್ಲಿ ಗುಡಗಡ ಕುಸಿತವಾಗಿದ್ದು ಹಲವೆಡೆ ರಸ್ತೆಗಳಿಗೆ ತೋಟಗಳಿಗೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಲಾಯಿಲ ಘರಾಮದಲ್ಲಿಯೂ ಹಲವೆಡೆ ಭೂಕುಸಿತವಾಗಿದೆ. ಬುಧವಾರ ರಾತ್ರಿಯ ವೇಳೆಯೂ ನದಿ ನೀರು ತೋಟಗಳಿಗೆ ಮನೆಗಳಿಗೆ ನೀರು ನುಗ್ಗಿದೆ. ಅಂಕಾಜೆ ಎಂಬಲ್ಲಿ ಗುಡ್ಡ ಕುಸಿತವಾಗುವ ಹಿನ್ಬಲೆಯಲ್ಲಿ ಅಂಕಾಜೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಮಳೆಯ ಅಬ್ಬರ ಒಂದಿಷ್ಟು ಕಡಿಮೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.


