Home ಸ್ಥಳೀಯ ಸಮಾಚಾರ ಕೊಯ್ಯೂರು ಉಣ್ಣಾಲು ಸಮೀಪ ರಸ್ತೆಗೆ ಉರುಳಿದ ಹೆಮ್ಮರ ವಾಹನ ಸಂಚಾರ ಅಸ್ತವ್ಯಸ್ತ

ಕೊಯ್ಯೂರು ಉಣ್ಣಾಲು ಸಮೀಪ ರಸ್ತೆಗೆ ಉರುಳಿದ ಹೆಮ್ಮರ ವಾಹನ ಸಂಚಾರ ಅಸ್ತವ್ಯಸ್ತ

326
0

ಬೆಳ್ತಂಗಡಿ; ಕೊಯ್ಯೂರು ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬೆಳ್ತಂಗಡಿ ಕೊಯ್ಯೂರು ರಸ್ತೆಯ ಉಣ್ಣಾಲು ಸಮೀಪ ಮರ ರಸ್ತೆಗೆ ಉರುಳಿ ಬಿದ್ದಿದೆ. ಮರಬಿದ್ದಾಗ ರಸ್ತೆಯಲ್ಲಿ ಯಾವುದೇ ವಾಹನಗಳು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಕೊಯ್ಯೂರು ರಸ್ತೆಯ ಬದಿಯಲ್ಲಿ ಭಾರೀ ಗಾತ್ರದ ಮರಗಳು‌ ಇದ್ದು ಈ ಹದೆಯೂ ಹೆಮ್ಮರವೊಂದು ರಸ್ತೆಗೆ ಉರುಳಿ ಸ್ವಲ್ಪದಲ್ಲಿಯೇ ಅಪಾಯ ತಪ್ಪಿತ್ತು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಅರಣ್ಯ ಇಲಾಖೆ ಇದಕ್ಕೆ ಮುಂದಾಗುತ್ತಿಲ್ಲ ಎಂದು ಜನರು ತಮಗಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು ಅರ್ಥ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು
ಸ್ಥಳೀಯ ಜನರೇ ಸೇರಿ ಮರವನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ

LEAVE A REPLY

Please enter your comment!
Please enter your name here