ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ವೈರಲ್

0

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಹೇಳಿಕೆ ಕೋರ್ಟ್ ಗೆ ಬರುವಾಗ ತಂದಿದ್ದ ಬರುಡೆಯ ಫೋಟೋ ಇದೀಗ ವೈರಲ್ ಅಗಿದೆ. ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಹೇಳಿ ದೂರು ನೀಡಿದ್ದ ಚಿನ್ನಯ್ಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ವೇಳೆ ತೆಗೆದ ಫೋಟೋ ಇದೀಗ ವೈರಲ್ ಅಗಿದೆ.

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಡ್ರೈವಿಂಗ್ ಲೈಸನ್ಸ್ ಮೂಲಕ ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ

0

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ‌.17 ಮತ್ತು 18 ರಂದು ಎಸ್.ಐ.ಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಎರಡನೇ ದಿನದಲ್ಲಿ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲಾಗಿತ್ತು. ಇದೀಗ ಮತ್ತೊಬ್ಬನ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಎಸ್.ಐ.ಟಿ ಪತ್ತೆ ಹಚ್ಚಿ ಕಚೇರಿಗೆ ಕರೆದು ಮಾಹಿತಿ ಕಲೆ ಹಾಕಿದೆ. 2-10-2013 ರಂದು ಬೆಂಗಳೂರು ಬಾರ್ ಕೆಲಸಕ್ಕೆ ಹೋಗುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಬೋಜಪ್ಪ ಮತ್ತು ಚೆನ್ನಮ್ಮ ಮೂರನೇ ಮಗ ಆದಿಶೇಷ ನಾರಾಯಣ(27)...

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ  ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

0

ಬೆಳ್ತಂಗಡಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಅಪ್ರತಿಮ ಸಂಘಟಕ, ಏಕಾತ್ಮ ಮಾನವತೆಯ ಪ್ರತಿಪಾದಕರು, ಅಗ್ರಪಂಕ್ತಿಯ ಲೇಖಕರು, ರಾಷ್ಟ್ರವಾದಿ, ದಾರ್ಶನಿಕರು, ಮಾರ್ಗದರ್ಶಕರು ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಸೆ 25 ರಂದು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ದೀನ್ ದಯಾಳ್ ಉಪಾಧ್ಯಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಿಹಿ ಹಂಚಲಾಯಿತು. ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ ಇವರು ದೀನ್ ದಯಾಳ್ ಉಪಾಧ್ಯಾಯರ ವ್ಯಕ್ತಿತ್ವ, ಸಾಧನೆಗಳ ಬಗ್ಗೆ ಸಂದರ್ಭೋಚಿತವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ...

ಬೆಳ್ತಂಗಡಿ :ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಹೇಳಿಕೆ ದಾಖಲು ಪ್ರಕ್ರಿಯೆಗೆ ಚಾಲನೆ

0

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ್ನು BNSS 183 ಹೇಳಿಕೆ ನೀಡಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೆ.25 ರಂದು 11 ಗಂಟೆಗೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬಂದಿದ್ದು 12 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಈತನ ಹೇಳಿಕೆ ದಾಖಲಿಸುವ ಕಾರ್ಯ ಆಭಿಸಿದ್ದಾರೆ.ಇಂದು ನ್ಯಾಯಾಲಯದಲ್ಲಿ ಸಂಜೆಯವರೆಗೆ ಚಿನ್ನಯ್ಯನ ಹೇಳಿಕೆಯನ್ನು ನ್ಯಾಯಾಧೀಶರು ದಾಖಲು ಮಾಡಲಿದ್ದಾರೆ. ಏನಿದು ಹೇಳಿಕೆ ಇದಕ್ಕಿರುವ ಮಹತ್ವವೇನು?ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯ ಪ್ರಕರಣದಲ್ಲಿ ಆರೋಪಿಯಾಗಿ ಬದಲಾಗಿದ್ದಾನೆ.ಆರಂಭದಲ್ಲಿ ತನ್ನ ನ್ಯಾಯವಾದಿಗಳೊಂದಿಗೆ ಬಂದಿದ್ದ ಚಿನ್ನಯ್ಯ ತಾನು ಧರ್ಮಸ್ಥಳ ಗ್ರಾಮದ ವಿವಿದೆಡೆ ನೂರಾರು ಮೃತದೇಹಗಳನ್ನು ಕಾನೂನುಬಾಹಿರವಾಗಿ...

ಬೆಳ್ತಂಗಡಿ; ಹೆದ್ದಾರಿಯಲ್ಲಿ  ಚರಂಡಿಗೆ ಉರುಳಿದ ಕಾರು

0

ಬೆಳ್ತಂಗಡಿ;  ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಡಾಜೆಯ ತಿರುವಿನ ಬಳಿ ಚಾರ್ಮಾಡಿ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಉರುಳಿದ ಘಟನೆ ಗುರುವಾರ (ಸೆ.25) ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಮೆಸ್ಕಾಂ ನಿಗಮದ ಅಧ್ಯಕ್ಷರಾಗಿ ಕೆ ಹರೀಶ್ ಕುಮಾರ್

0

ಬೆಳ್ತಂಗಡಿ; ರಾಜ್ಯ ಸರಕಾರ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿದ್ದು ಬೆಳ್ತಂಗಡಿಯ ಹಿರಿಯ ಕಾಂಗ್ರೆಸ್ ಮುಂಖಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‌ಅವರು ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ( ಮೆಸ್ಕಾಂ) ನಿಗಮದ ಅಧ್ಯಕ್ಷರಾಗಿ ನೇಮಕಗೊಳ್ಳಲಿರುವುದಾಗಿ ತಿಳಿದು ಬಂದಿದೆ.ಕಾಂಗ್ರೆಸ್ ಹೈಕಮಾಂಡ್ 39ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರುಗಳ ಈ ಪಟ್ಟಿಯನ್ನು ಅಂತಿಮಗೊಳಿಸಿದ್ದು ಈ ಪಟ್ಟಿ ಇದೀಗ ರಾಜ್ಯದ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿಗಳ ಕೈ ಸೇರಿದ್ದು ರಾಜ್ಯ ಸರಕಾರದಿಂದ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ಘೋಷಣೆ ಹೊರಡಿಸುವ ಸಾಧ್ಯತೆಯಿದೆ. ಅದೇರೀತಿ ಮಂಗಳೂರಿನ ಶಾಲೆಟ್ ಪಿಂಟೋ...

ಸುನ್ನೀ ಕೋ ಆರ್ಡಿನೇಶ‌ನ್ ಸಮಿತಿಯಿಂದ “ಗ್ರ್ಯಾಂಡ್ ಹುಬ್ಬರ್ರಸೂಲ್ ಮಜ್ಲಿಸ್” ಅದ್ದೂರಿ ಯಾಗಿ ಸಂಪನ್ನ; ಸಯ್ಯಿದರುಗಳ ಅಪೂರ್ವ ಸಂಗಮ

0

ಬೆಳ್ತಂಗಡಿ; ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಪ್ರವಾದಿ ಪೈಗಂಬರ್ ಅವರ 1500 ನೇ ಜನ್ಮ ದಿನಾಚರಣೆಯ ಪ್ರಯುಕ್ತ "ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌" ಎನ್ನುವ ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಧಾರ್ಮಿಕ ಕಾರ್ಯಕ್ರಮ ಸೆ.23 ರಂದು ಗುರುವಾಯನಕೆರೆ ಮಂಜುಬೆಟ್ಟು ಎಫ್.ಎಮ್ ಗಾರ್ಡನ್ ನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಸಭಾ ಕಾರ್ಯಕ್ರಮ ಹೊರತುಪಡಿಸಿದ ಆಧ್ಯಾತ್ಮಿಕ ಅನುಭೂತಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿಪ್ರವಾದಿಯವರ ನಾಮಸಂಕೀರ್ತನೆಯ ಬುರ್ದಾ ಆಲಾಪನೆ, ನ‌ಅತ್ ಶರೀಫ್ ಆಲಾಪನೆ, ಮದ್‌ಹ್ ಗೀತೆಗಳ ಗಾಯನ, ಮೌಲಿದ್ ಪಾರಾಯಣ ಇತ್ಯಾದಿಗಳು ಕ್ರಮಬದ್ಧವಾಗಿ ನಡೆಯಿತು.ತಾಲೂಕಿನಲ್ಲಿ ಇದೇ ಮೊದಲ...

ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಅಕ್ಟೋಬರ್ ನಲ್ಲಿ ಉದ್ಘಾಟನೆ; ಇಂದಿರಾ ಕ್ಯಾಂಟೀನ್ ಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ. ಕರ್ನಾಟಕ ಸರ್ಕಾರವು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅಗ್ಗದ ದರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವ ಯೋಜನೆ ಇಂದಿರಾ ಕ್ಯಾಂಟೀನ್ ಬೆಳ್ತಂಗಡಿಯಲ್ಲಿ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಉದ್ಘಾಟನೆ ಮಾಡಲಿದ್ದಾರೆ.ಇಂದಿರಾ ಕ್ಯಾಂಟೀನ್ ಗೆ ಇಂದು ಕೆಪಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಅಲ್ಲಿನ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದರು ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಟಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ...

ಧರ್ಮಸ್ಥಳ ಪ್ರಕರಣ ನ್ಯಾಯಾಲಯದಲ್ಲಿ   ಚಿನ್ನಯ್ಯನ ಹೇಳಿಕೆ ದಾಖಲು

0

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಹೇಳಿಕೆ ನೀಡಲು ಸೆ.23 ರಂದು ಶಿವಮೊಗ್ಗ ಜೈಲಿನಿಂದ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದಾರೆ. ಕೋರ್ಟ್ ನಲ್ಲಿ ಚಿನ್ನಯ್ಯ ಪ್ರಕರಣದ ಬಗ್ಗೆ ವಿವರವಾಗಿ ನ್ಯಾಯಾಲಧೀಶರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆರೋಪಿ ಚಿನ್ನಯ್ಯ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾ ವಿಜಯೇಂದ್ರ ಹೆಚ್.ಟಿ ಮುಂದೆ ಹಜರು ಪಟಿಸಿ ಹೇಳಿಕೆ ದಾಖಲಿಸುವ ಕಾರ್ಯ ಆರಂಭಿಸಲಾಗಿತ್ತು ಸಂಜೆ 6:30 ಗಂಟೆಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮುಗಿಸಿ ಆತನನ್ನುವಾಪಸ್ ಶಿವಮೊಗ್ಗ...

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಜಿಲ್ಲೆಯಿಂದ ಒಂದು ವರ್ಷ ಗಡಿಪಾರು ಮಾಡಿ ಆದೇಶ

0

ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ಪುತ್ತೂರು ಎಸಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಸಹಾಯಕ ಆಯುಕ್ತರಾದ(ಎಸಿ) ಸ್ಟೆಲ್ಲಾ ವರ್ಗಿಸ್ ಗೆ ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.18 ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು...