ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮನ
ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಹೇಳಿಕೆ ನೀಡಲು ಸೆ.23 ರಂದು 2 ಗಂಟೆಗೆ ಶಿವಮೊಗ್ಗ ಜಿಲ್ಲಾ ಪೊಲೀಸರು ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಆರೋಪಿ ಚಿನ್ನಯ್ಯ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು ಮುಚ್ಚಿದ ಕೋಣೆಯಲ್ಲಿ ಆತ ಬುರುಡೆ ಪ್ರಕರಣದ ಬಗ್ಗೆ ಹೇಳಿಕೆ ನೀಡಲಿದ್ದಾನೆ.
ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್ ರಾಮಸ್ವಾಮಿಯವರ ಹುಟ್ಟು ಹಬ್ಬದ ಪ್ರಯುಕ್ತ ಕ್ರಕೆಟ್ ಪಂದ್ಯಾಟ
ಬೆಳ್ತಂಗಡಿ; ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಮಾಜ ಪರಿವರ್ತನಾ ಚಿಂತಕರುಗಳಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್ ರಾಮಸ್ವಾಮಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಸೆ 21 ರಂದು ಮಾಲಾಡಿಯ ಶ್ರೀ ರಾಮಾಂಜನೆಯ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಒಂದೇ ಜಾತಿ ಒಂದೇ ಕುಲ ಎಂದು ಸಾರಿದ ನಾರಾಯಣ ಗುರುಗಳ ಜನ್ಮ ಜಯಂತಿಯನ್ನು ಎಲ್ಲಾ ಜಾತಿಯವರನ್ನು...
ಬೆಳ್ತಂಗಡಿ ವಲಯ ಕಥೋಲಿಕ್ ಸಭಾದಿಂದ ಭಾಷಣ ಕೌಶಲ್ಯದ ಬಗ್ಗೆ ತರಬೇತಿ
ಬೆಳ್ತಂಗಡಿ; ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಬೆಳ್ತಂಗಡಿ ವಲಯದ ಮೇಲ್ ಉಸ್ತುವಾರಿಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿ ಕಾರ್ಯ ಕ್ರಮ ಬೆಳ್ತಂಗಡಿ ಚರ್ಚಿನ ಹೋಲಿ ರಿಡೀಮರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ಚರ್ಚಿನ ಧರ್ಮ ಗುರುಗಳಾದ ಫಾದರ್ ವಾಲ್ಡರ್ ಡಿ ಮಿಲ್ಲೋ ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಅಲ್ಬರ್ಟ್ ಸುನಿಲ್ ಮೋನಿಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಭಾಷಣ ತರಬೇತಿಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ ಮ್ಯುರಲ್...
ಧರ್ಮಸ್ಥಳ; ಹದಗೆಟ್ಟ ನೇರ್ತನೆ ರಸ್ತೆ ಶ್ರಮದಾನದ ಮೂಲಕ ದುರಸ್ತಿ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇರ್ತನೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಸೆ 21ಭಾನುವಾರ ದಂದು ಸ್ಥಳೀಯರು ಒಟ್ಟು ಸೇರಿ ಶ್ರಮದಾನದ ಮೂಲಕ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದಾರೆ.ಕಳೆದ ಮಳೆಗಾಲದಲ್ಲಿ ದೊಡ್ಡ ಗಾತ್ರಗಳ ಹೊಂಡಗಳು ಬಿದ್ದಿದ್ದು ವಾಹನಗಳ ಸಂಚಾರ ಅಸಾಧ್ಯವಾದ ಹಿನ್ನಲೆಯಲ್ಲಿ ಸ್ಥಳೀಯರು ಈ ಬಗ್ಗೆ ವಾರ್ಡ್ ಸಭೆಯಲ್ಲಿ ಗಮನಸೆಳೆದಿದ್ದರು . ಒಂದೇ ವಾರದಲ್ಲಿ ದುರಸ್ತಿ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಆದರೆ ಈ ವೆರಗೂ ಯಾವುದೇ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾಜಿ ಗ್ರಾಮಪಂಚಾಯತು ಸದಸ್ಯ ಟಿ.ವಿ ದೇವಸ್ಯ ಅವರ ನೇತೃತ್ವದಲ್ಲಿ ಸ್ಥಳೀಯರು ಶ್ರಮದಾನ...
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನಿಗೆ ಹಣ ವರ್ಗಾವಣೆ ಪ್ರಕರಣ; ತಿಮರೋಡಿಯ 11 ಮಂದಿ ಆಪ್ತರಿಗೆ ಎಸ್.ಐ.ಟಿ ನೊಟೀಸ್
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಮತ್ತು ಪತ್ನಿಯ ಖಾತೆಗೆ ಹಣ ವರ್ಗಾವಣೆ(ಫಂಡಿಂಗ್) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಯ 11 ಮಂದಿ ಆಪ್ತರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ತಿಮರೋಡಿ 11 ಮಂದಿ ಆಪ್ತರಲ್ಲಿ ಈಗಾಗಲೇ 6 ಮಂದಿಯನ್ನು ಎಸ್.ಐ.ಟಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಉಳಿದ ಐದು ಮಂದಿಯನ್ನು ವಿಚಾರಣೆ ಮಾಡಲು ಬಾಕಿ ಇದ್ದು ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಬ್ಯಾಂಕ್ ಖಾತೆಗಳ ಮೂಲಕವಾಗಿಯೇ ಹಣ ವರ್ಗಾವಣೆ ಮಾಡಲಾಗಿರುವುದಾಗಿ ತಿಳಿದು...
ಚಾರ್ಮಾಡಿ ಘಾಟಿಯಲ್ಲಿ ಕಾರುಗಳ ನಡುವೆ ಅಪಘಾತ
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎರಡನೆಯ ತಿರುವಿನಲ್ಲಿ ಎರಡು ಕಾರುಗಳ ನಡುವೆ ಮಂಗಳವಾರ ಅಪಘಾತ ಸಂಭವಿಸಿದೆ. ಕಾರುಗಳೆರಡು ಎದುರು ಬದುರಾಗಿ ಡಿಕ್ಕಿ ಹೊಡೆದಿದ್ದು ಕಾರುಗಳ ಮಂಭಾಗ ನುಜ್ಜುಗುಜ್ಜಾಗಿದೆ ಎರಡೂ ಕಾರುಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಜಾಗಮಾರಾಟದ ಅಗ್ರಿಮೆಂಟ್ ಮಾಡಿ 45ಲಕ್ಷ ರೂ ವಂಚನೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲು
ಬೆಳ್ತಂಗಡಿ; ನಿವೇಶನ ಮಾರಾಟದ ಬಗ್ಗೆ ಅಗ್ರಿಮೆಂಟ್ ಮಾಡಿ ರೂ 45ಲಕ್ಷ ಹಣ ಪಡೆದುಕೊಂಡು ವಂಚಿಸಿರುವ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರವೀಣ್ ಭಂಡಾರಿ ಅವರ ವಿರುದ್ದ ಬೆಳ್ತಂಗಡಿ ನಿವಾಸಿ ವಿಶ್ವನಾಥ ರೈ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಶ್ವನಾಥ್ ರೈ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಆರೋಪಿ ಪ್ರವೀಣ್ ಭಂಡಾರಿ ಎಂಬಾತನು ಮಹಿಳೆಯಿಬ್ಬರಿಂದ ಒಟ್ಟು 40 ಸೆನ್ಸ್ ಜಾಗವನ್ನು ಖರೀದಿ ಮಾಡಿ ಬಳಿಕ ಅದನ್ನು ವಿಶ್ವನಾಥ ರೈ ಅವರಿಗೆ ಮಾರಾಟ ಮಾಡುವುದಾಗಿ ಹೇಳಿ ರೂ 45 ಲಕ್ಷ ಹಣವನ್ನು...
ಚಿನ್ನಯ್ಯ ಹಾಗೂ ಪತ್ನಿಗೆ ಹಣ ವರ್ಗಾವಣೆ ಉಜಿರೆಯ ವ್ಯಕ್ತಿಯ ವಿಚಾರಣೆ ನಡೆಸಿದ ಎಸ್.ಐ.ಟಿ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯ ಮತ್ತು ಆತನ ಪತ್ನಿ ಮಲ್ಲಿಕಾ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಸೆ.22 ರಂದು ಉಜಿರೆ ನಿವಾಸಿ ಯೊಬ್ಬನನ್ಮು ಎಸ್.ಐ.ಟಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಉಜಿರೆ ನಿವಾಸಿ ನಿತಿನ್ ಎಂಬಾತನನ್ನು ಎಸ್.ಐ.ಟಿ ನೋಟಿಸ್ ನೀಡಿ ವಿಚಾರಣೆ ಕರೆಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮಹೇಶ್ ಶೆಟ್ಟಿ ಅವರೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಎಸ್.ಐ.ಟಿ ಬ್ಯಾಂಕ್ ದಾಖಲೆಗಳನ್ನು ತೆಗೆದುಕೊಂಡಿದ್ದು ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ....
ಬೆಳ್ತಂಗಡಿ: ತಾಲೂಕಿನ ವಿವಿದೆಡೆ ಕಾಡಾನೆ ದಾಳಿ ಕೃಷಿ ಹಾನಿ, ಹೆದ್ದಾರಿ ಬದಿಯಲ್ಲಿ ಒಂಟಿ ಸಲಗ
ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಅಟ್ಟಹಾಸ ನಿರಂತರವಾಗಿ ಹೆಚ್ಚಾಗಿದೆ. ಶಿಶಿಲ, ಧರ್ಮಸ್ಥಳ, ಪುದುವೆಟ್ಟು, ಚಿಬಿದ್ರೆ ಗ್ರಾಮದ ವಿವಿದೆಡೆ ಕೃಷಿಗೆ ವ್ಯಾಪಕವಾಗಿ ಹಾನಿಯುಂಟು ಮಾಡಿದೆ. ಪುದುವೆಟ್ಟು ಗ್ರಾಮದ ನಿವಾಸಿ ಯದುಪತಿ ಗೌಡ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ, ಚಿಬಿದ್ರೆ ಗ್ರಾಮದ ನಿವಾಸಿ ಸತೀಶ್ ರಾವ್, ಹಾಗೂ ಶ್ರೀಕಾಂತ ಅಚಾರ್ಯ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿದ್ದು ವ್ಯಾಪಕ ಕೃಷಿಹಾನಿಯುಂಟುಮಾಡಿದೆ. ಅದೇರೀತಿ ಶಿಶಿಲ ಹಾಗೂ ಧರ್ಮಸ್ಥಳ ಗ್ರಾಮದಲ್ಲಿಯೂ ವಿವಿದೆಡೆ ಕಾಡಾನೆ ಹಾವಳಿ ಮುಂದು ವರಿದಿದೆ. ಮರಿಯಾನೆ...
ಅರಸಿನಮಕ್ಕಿ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ
ಬೆಳ್ತಂಗಡಿ; ಅರಸಿನಮಕ್ಕಿ ಕಾಪಿನಡ್ಕ ಬಳಿ ಬೈಕ್ ಹಾಗೂ ಅಟೋ ರಿಕ್ಷಾ ನಡೆವೆ ಸಂಭವಿಸಿದ ಅಒಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೆ21ರಂದು ಸಂಭವಿಸಿದೆ.ಅರಸಿನಮಕ್ಕಿಯಿಂದ ಎಂಜಿರ ಕಡೆಗೆ ಬರುತ್ತಿದ್ದ ಬೈಕ್ ಅರಸಿನ ಮಕ್ಕಿ ಕಡೆಗೆ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಎರಡೂ ವಾಹನಗಳು ನುಜ್ಜುಗುಜ್ಜಾಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.














