ಮಹಾವೀರ ಜಯಂತಿ ಹಿನ್ನಲೆ ಎಸ್.ಎಸ್. ಎಲ್.ಸಿ ಮಾ 30ರ ಪರೀಕ್ಷೆ ಮಾ31 ಕ್ಕೆ ಮುಂದೂಡಿಕೆ
ಬೆಳ್ತಂಗಡಿ: ಮಾ.30ರಂದು ಮಹಾವೀರ ಜಯಂತಿ ರಜೆಯನ್ನು ಸರಕಾರ ಘೋಷಿಸಿರುವ ಹಿನ್ನಲೆಯಲ್ಲಿ ಅಂದು ನಡೆಯಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಪರೀಕ್ಷೆಯನ್ನು ಮರುದಿನ ಮಾ.31ರಂದು ನಡೆಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶನ ನೀಡಿದೆ. 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ನ್ನು ಮಾ. 18 ರಿಂದ ಎ.2ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿದ್ದು, ಅದರಂತೆ ಈಗಾಗಲೇ ಪರೀಕ್ಷೆ ನಡೆಯುತ್ತಿದೆ. ಸದರಿ ವೇಳಾಪಟ್ಟಿಯನ್ವಯ ತೃತೀಯ ಭಾಷೆ ಪರೀಕ್ಷೆಯನ್ನು ಮಾ. 30ರಂದು ನಿಗಧಿಪಡಿಸಲಾಗಿತ್ತು. ಆದರೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ...
ತಾಲೂಕು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಪಿ ವೆಂಕಟರಮಣ ಭಟ್ ನಿಧನ
ಬೆಳ್ತಂಗಡಿ; ತಾಲೂಕು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ, ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಪಿ ವೆಂಕಟ್ರಮಣ ಭಟ್ (ಕೊಂಚ ಭಟ್) (88) ಅವರು ಅಲ್ಪ ಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಮಾ.26 ರಂದು ನಿಧನರಾಗಿದ್ದಾರೆ.ಪ್ರಗತಿಪರ ಕೃಷಿಕರಾಗಿದ್ದ ಅವರು ಹವ್ಯಕ ಸಂಘಟನೆಯಲ್ಲಿಯೂ ತೆಡಗಿಸಿಕೊಂಡಿದ್ದರು. ಮೃತರು ಲಕ್ಷ್ಮಿ ಅಮ್ಮ ಐವರು ಹೆಣ್ಣು ಮಕ್ಕಳನ್ನು ಚಲನಚಿತ್ರ ನಿರ್ದೇಶಕ ಜಿ.ಕೃಷ್ಣ, ಹಾಗೂ ಶಂಕರ ವಿಠಲ್ ಅವರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಪ್ರಕರಣ; ಎರಡನೇ ಆರೋಪಿ ಪ್ರಶಾಂತ್ ಬಂಧನ
ಬೆಳ್ತಂಗಡಿ: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬ್ಯಾಂಕಿನ ಮಾಜಿ ಸಿಬ್ಬಂದಿ ಪ್ರಶಾಂತ್(36) ಬಂಧಿತ ಎರಡನೇ ಆರೋಪಿಯಾಗಿದ್ದಾರೆ. 2025ರ ಮೇ. 31 ರಂದು ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಈತನನ್ನು ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಾ.25 ರಂದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿನಲ್ಲಿ ಸುಮಾರು...
ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದ ಸೌಖ್ಯ ಅವರಿಗೆ ಸನ್ಮಾನ
ಬೆಳ್ತಂಗಡಿ; ಶೈಕ್ಷಣಿಕ ಸಂಶೋಧನೆ ಮತ್ತು ಸಂಶೋಧನಾ ಲೇಖನಗಳ ಪ್ರಸ್ತುತೀಕರಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ತೋರಿದ ಕುಮಾರಿ ಸೌಖ್ಯಳಿಗೆ ಸನ್ಮಾನ ಧರ್ಮಸ್ಥಳದ ಶ್ರೀ ಸುರೇಂದ್ರ ಶೆಟ್ಟಿ ಹಾಗೂ ಸೌಮ್ಯ ಇವರ ಸುಪುತ್ರಿಯಾದ ಕುಮಾರಿ ಸೌಖ್ಯ ಅವರು ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರು ಸಂಶೋಧನಾ ಲೇಖನಗಳನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾನ್ಯತೆ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಚಿವರ್ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಕುಮಾರಿ ಸೌಖ್ಯ ಅವರನ್ನು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ...
ಬೆಳ್ತಂಗಡಿ; ಪಣಕಜೆ ಟೋಲ್ ಗೇಟ್ ನಿರ್ಮಾಣ ಸ್ಥಳಕ್ಕೆ ಜಿಲ್ಲಾ ಮಟ್ಟದ ಟೋಲ್ ಗೇಟ್ ತೆರವು ಹೋರಾಟ ಸಮಿತಿ ನಿಯೋಗ ಭೇಟಿ
ಬೆಳ್ತಂಗಡಿ; ಭೂ ಸಾರಿಗೆ ಇಲಾಖೆಗೆ ಒಳಪಡುವ ಬಿಸಿ ರೋಡ್ - ಚಾರ್ಮಾಡಿ ರಸ್ತೆಯ ಪಣಕಜೆ ಎಂಬಲ್ಲಿ ನಿರ್ಮಾಣವಾಗುವ ಟೋಲ್ ಗೇಟ್ ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿರುವ ಅಕ್ರಮ ಟೋಲ್ ಗೇಟ್ ಗಳ ವಿರುದ್ಧ ಎಪ್ರಿಲ್ ನಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಸಿಪಿಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ , ಹಿರಿಯ ಹೋರಾಟಗಾರ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು. ಅವರು ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ ಟೋಲ್ ಗೇಟ್ ನಿರ್ಮಾಣ ಸ್ಥಳಕ್ಕೆ ಜಿಲ್ಲಾ ಮಟ್ಟದ ಟೋಲ್ ಗೇಟ್ ತೆರವು ಹೋರಾಟ ಸಮಿತಿ ನಿಯೋಗದಲ್ಲಿ ಭೇಟಿ ನೀಡಿ , ಪರಿಶೀಲನೆ...
ಬೆಳ್ತಂಗಡಿ; ಕೇಶವ ಬಂಗೇರ ಗೇರುಕಟ್ಟೆ ಅವರಿಗೆ ಪಿಎಚ್ ಡಿ ಪದವಿ
ಬೆಳ್ತಂಗಡಿ: ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ ಬಿ. ಗೇರುಕಟ್ಟೆ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಲಭಿಸಿದೆ. ತುಳು ರಂಗಭೂಮಿ ಮತ್ತು ಸಿನೆಮಾ: ಪ್ರೇರಣೆ ಮತ್ತು ಅನನ್ಯತೆ ಕುರಿತು ಮಹಾ ಪ್ರಬಂಧ ಮಂಡಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಅಧ್ಯಯನ ನಡೆಸಿದ್ದರು.ಪ್ರಸ್ತುತ ಅವರು ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಉತ್ತಮ ವಾಗ್ಮಿಯಾದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,...
ರಾಜ ಕೇಸರಿ ಸೇವಾ ಟ್ರಸ್ಟ್ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಅಂಬೇಡ್ಕರ್ ಸೇವರತ್ನ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ಬೆಳ್ತಂಗಡಿ; ಅಂತರಾಷ್ಟ್ರೀಯ ಹಿಂದೂ ಮಹಾಸಭಾ ವತಿಯಿಂದ ಭಾರತ ರತ್ನ. ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ 135 ನೇ ಜಯಂತಿಯ ಅಂಗವಾಗಿ ಅಂತಾರಾಷ್ಟ್ರೀಯ ಹಿಂದೂ ಮಹಾಸಭಾ ಧಾರವಾಡ ಇವರು ನೀಡುವ ಅಂಬೇಡ್ಕರ್ ಸೇವಾ ರತ್ನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷ ಸಾಧನೆ ಗೈದ ಸಾಧಕಾರಿಗೆ ಪ್ರಧಾನ ಸಮಾರಂಭ ಏಪ್ರಿಲ್ 15 ರಂದು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ಕಡು ಬಡವರನ್ನು ಆರಿಸಿ ಅವರಿಗೆ ಕೈಲಾದ ಸೇವೆಯ ಮೂಲಕ ಸರಕಾರಿ ಶಾಲೆಗಳ ಸ್ವಚ್ಛಾಲಯದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ ಕೇಸರಿ ಸೇವಾ ಟ್ರಸ್ಟ್...
ಬೆಳ್ತಂಗಡಿ; ಯುವತಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಇಬ್ಬರ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯ ಖಾಸಗಿ ವಿಡಿಯೋವನ್ನು ಪಡೆದುಕೊಂಡು ಅದನ್ನು ಸಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ ಬಗ್ಗೆ ಸುಶಾಂತ್ ಪೂಜಾರಿ ಎಂಬಾತನ ಹಾಗೂ ಆತನ ಸಹೋದರಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಳ್ತಂಗಡಿಯ ಖಾಸಗಿ ಉದ್ಯೋಗಿಯಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಗೆ ಸಮಾಜಿಕ ಜಾಲತಾಣದ ಮೂಲಕ ಸುಶಾಂತ ಪೂಜಾರಿ ಎಂಬ ಯುವಕ ಪರಿಚಯವಾಗಿದ್ದು ಇವರಿಬ್ಬರು ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ಪರಸ್ಪರ ಪ್ರೀತಿಸಿತ್ತಿದ್ದರು. ಈ ಸಂದರ್ಭದಲ್ಲಿ ಆತ ಯುವತಿಯ ಖಾಸಗಿ ವಿಡಿಯೋ ನೀಡುವಂತೆ ನಿರಂತರ ಪೀಡಿಸುತ್ತಿದ್ದ ಒಮ್ಮೆ ಸ್ನಾನ...
ಲಿಂಗ ಸಮಾನತೆ ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅವಶ್ಯಕ; ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್.
ಬೆಳ್ತಂಗಡಿ: ಹೆಣ್ಣು, ಪುರುಷರ ಬಾಳಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸಂಗಾತಿಯಾಗಿ ಅವನ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾಳೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಒರ್ವ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟಕರ. ಆದರೂ ಸಮಾಜದಲ್ಲಿ ಸಾಧನೆಯೊಂದಿಗೆ ಪುರುಷರಷ್ಟೇ ಮಹಿಳೆಯರೂ ಸರಿ ಸಮಾನರು ಎಂದು ಈಗಾಗಲೇ ಹಲವಾರು ಮಹಿಳೆಯರು ನಿರೂಪಿಸಿರುವುದು ಷ್ಲಾಘನೀಯ ಕಾರ್ಯ. ಇಂತಹಾ ಮಹಿಳೆಯರ ಮಹಿಳೆಯರ ಸಾಧನೆಗಳನ್ನು ಕೊಂಡಾಡಲು, ಅವಳ ಕೊಡುಗೆಗಳನ್ನು ಸ್ಮರಿಸಲು, ಲಿಂಗ ಸಮಾನತೆನ್ನು ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅತೀ ಅವಶ್ಯವಾಗಿದೆ ಎಂದು ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ...
ಬೆಳ್ತಂಗಡಿ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಒಟ್ಟು ರೂ.2 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ. ಈ ಅನುದಾನದಡಿ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ–ಪಲ್ಕೆ ರಸ್ತೆ (ರೂ.25.00 ಲಕ್ಷ), ನೈಕುಳಿ–ಕಳೆಂಜಿರೋಡಿ ರಸ್ತೆ (ರೂ.25.00 ಲಕ್ಷ), ಮಿತ್ತೊಟ್ಟು ರಸ್ತೆ (ರೂ.25.00 ಲಕ್ಷ), ಮಲ್ಲಿಪ್ಪಾಡಿ ರಸ್ತೆ (ರೂ.25.00 ಲಕ್ಷ), ಪರಾರಿ ರಸ್ತೆ (ರೂ.25.00 ಲಕ್ಷ), ಪದೆಂಜಿಲ ರಸ್ತೆ (ರೂ.25.00 ಲಕ್ಷ) ಹಾಗೂ ಗರ್ಡಾಡಿ ಗ್ರಾಮದ ಪೈಕರ–ಬಂಗಟ ರಸ್ತೆ (ರೂ.25.00 ಲಕ್ಷ), ಕೆಲ್ಲಾಡಿ–ಉದಲೋಡಿ ರಸ್ತೆ (ರೂ.25.00 ಲಕ್ಷ)ಗಳಿಗೆ ತಲಾ ರೂ.25.00 ಲಕ್ಷ...















