ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ ತನಗೆ ಎಸ್ಐಟಿ ಗೆ ಜೀವಬೆದರಿಕೆ ಇರುವ ಬಗ್ಗೆ ಎಸ್. ಐ.ಟಿ ಗೆ ದೂರು ನೀಡಿದ್ದಾನೆ.
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಜೂ.15 ರಂದು ಚಿನ್ನಯ್ಯ ಮತ್ತು ಪತ್ನಿ ರತ್ನಾ ಜೊತೆಯಲ್ಲಿ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರಿಂದ ಜೀವ ಬೆದರಿಕೆ ಇರುವ ಬಗ್ಗೆ ದೂರು ನೀಡಿದ್ದಾನೆ.
ಹೈಕೋರ್ಟ್ ಗೆ ರಿಟ್ ಪಿಟಿಷನ್ ಹಾಕಿರುವ ಬಗ್ಗೆ ಆಳಿಯ ಪುರುಷೋತ್ತಮ ಹಾಗೂ ಕೆಲವರಿಗೆ ಗಿರೀಶ್ ಮಟ್ಟಣ್ಣವರ್ , ಯುನೈಟೆಡ್ ಮೀಡಿಯಾ ಅಭಿಷೇಕ್ ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದು ಇದರಿಂದ ಜೀವಬೆದರಿಕೆ ಇದ್ದು ಪೊಲೀಸ್ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ.
ಇನ್ನೂ ಚಿನ್ನಯ್ಯ ಎಸ್ಐಟಿ ಕವೇರಿಗೆ ಬಂದು ದೂರು ನೀಡಿದ‌್ದು ದೂರಿನ ಮೂರು ಪುಟಗಳ ಪ್ರತಿ ಮಾದ್ಯಮಗಳಿಗೆ ಲಭ್ಯವಾಗಿದೆ.









