ಬೆಳ್ತಂಗಡಿ; ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮಿತಿಗಳ ನೇತೃತ್ವದಲ್ಲಿಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಬೂತ್ ಗಳಲ್ಲಿ ಎ 21ಭಾನುವಾರದಂದು “ನನ್ನ ಬೂತ್ ನನ್ನ ಜವಾಬ್ದಾರಿ” ಎಂಬ ಶಿರ್ಷಿಕೆಯೊಂದಿಗೆ ಮನೆ ಬೇಟಿ ಮತ್ತು ಬೂತ್ ಸಭೆಗಳು ನಡೆಯಲಿದೆ. ಪಕ್ಷದ ಎಲ್ಲ ಮುಖಂಡರು ,
ಕಾರ್ಯಕರ್ತರು ತಮ್ಮ ತಮ್ಮ ಬೂತ್ ನಲ್ಲಿ ಬೂತ್ ಪದಾಧಿಕಾರಿಗಳೊಂದಿಗೆ ಒಟ್ಟಿಗೆ ಸೇರಿಕೊಂಡು ತಮ್ಮ ಬೂತ್ ನಲ್ಲಿ ಮತಯಾಚನೆ ಮಾಡಲಿದ್ದಾರೆ.
ಒಂದೇ ದಿನದಲ್ಲಿ ತಾಲೂಕಿನ ಎಲ್ಲ ಬೂತ್ ಗಳಲ್ಲಿ ಎಲ್ಲ ಮನೆಗಳನ್ನೂ ತಲುಪುವ ಹಾಗೂ ಪಕ್ಷದ ಮುಖಂಡರುಗಳೇ ಸ್ವತಹ ಮನೆಮನೆಗೆ ತೆರಳಿ ಜನರೊಂದಿಗೆ ಮತಯಾಚನೆ ಮಾಡುವ ಕಾರ್ಯ ನಡೆಯಲಿದೆ. ಅಭಿಯಾನದ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಯಲಿದೆ. ಪಕ್ಷದ ಎಲ್ಲ ಮುಖಂಡರುಗಳು ಇದರಲ್ಲಿ ಭಾಗಿಗಳಾಗಲಿದ್ದಾರೆ
ಎಂದು ಪಕ್ಷದ ಬ್ಲಾಕ್ ಸಮಿತಿ ಅಧ್ಯಕ್ಷರುಗಳಾದ ಸತೀಶ್ ಕಾಶೀಪಟ್ಣ ಹಾಗೂ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
