ಧರ್ಮಸ್ಥಳ-ಮಂಗಳೂರು ನಡುವೆ ಇಂದಿನಿಂದ ರಾಜಹಂಸ ಬಸ್ ಸಂಚಾರ ಆರಂಭ
ಬೆಳ್ತಂಗಡಿ: ಧರ್ಮಸ್ಥಳ ಮಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆ.ಎಸ್.ಆರ್ಟಿ.ಸಿ ಸಿಹಿ ಸುದ್ದಿಯನ್ನು ನೀಡಿದೆ ಇಂದಿನಿಂದ (ಜು3) ರಾಜ ಹಂಸ ಬಸ್ಸುಗಳು ಈ ಮಾರ್ಗವಾಗಿ ಸಂಚಾರ ಆರಂಭಿಸಲಿದೆ . ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು- ಧರ್ಮಸ್ಥಳ ಮಾರ್ಗವಾಗಿ ಜು.3 ರಿಂದ ರಾಜಹಂಸ ಸಾರಿಗೆ ಪರಿಚಯಿಸ ಲಾಗುತ್ತಿದೆ. ಈ ಬಸ್ಸು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಗ್ಗೆ 6.30, 7, 8.30, 9, 11.15, 12.15, 2.30, 3.30, 5.30, 6.30ಕ್ಕೆ ಸಂಚರಿಸಲಿದೆ. ಅದೇ ರೀತಿ, ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಗ್ಗೆ 6.30, 7, 9, 9.15, 11.30, 12, 2.45,...
ಜು 3 ಧರ್ಮಸ್ಥಳ ಪರಿಸರದಲ್ಲಿ ವಿದ್ಯುತ್ ನಿಲುಗಡೆ
ಬೆಳ್ತಂಗಡಿ:ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಬೆಳ್ತಂಗಡಿ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಧರ್ಮಸ್ಥಳ 33/11 ವಿದ್ಯುತ್ ಸರಬರಾಜು ಲೈನಿನ 33 ಕೆವಿ ಧರ್ಮಸ್ಥಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಜು.3ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ.ಧರ್ಮಸ್ಥಳ, ಕನ್ಯಾಡಿ ಪುದುವೆಟ್ಟು,ನಿಡ್ಲೆ, ಪಟ್ರಮೆ,ಅರಸಿನಮಕ್ಕಿ 11ಕೆವಿ ಫೀಡರ್ ನಿಂದ ಸರಬರಾಜಾಗುವ ಸ್ಥಳಗಳಲ್ಲಿ ಈ ಸಮಯ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಉಜೆ ಮೆಸ್ಕಾಂ ಉಪ ವಿಭಾಗದ ಪ್ರಕಟಣೆ ತಿಳಿಸಿದೆ.
ಉದಯ ಮಹಾಸಂಘ ಗಂಡಿಬಾಗಿಲು ಇದರ ವತಿಯಿಂದ ಪರಿಸರ ದಿನಾಚರಣೆ
ಬೆಳ್ತಂಗಡಿ; ಉದಯ ಮಹಾಸಂಘ ಗಂಡಿಬಾಗಿಲು ಇದರ ಮಹಾಸಭೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜುಲೈ ಒಂದರಂದು ಸಂತ ಥೋಮಸ್ ಚರ್ಚ್ ಸಭಾಂಗಣ ಗಂಡಿಬಾಗಿಲು ಇಲ್ಲಿ ಆಯೋಜಿಸಲಾಗಿತ್ತು. ಉದಯ ಮಹಾಸಂಘದ ಉಪಾಧ್ಯಕ್ಷರಾದ ಏಲಿಯಾಮ್ಮ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ವಂ.ಫಾ. ಜೋಸ್ ಆಯಾಂಕುಡಿ, ಸ್ಥಳೀಯ ಧರ್ಮಗುರುಗಳು ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇವರು ಮಾತನಾಡಿ ಪರಿಸರವನ್ನು ಉಳಿಸಿಕೊಳ್ಳಲು ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಇವರು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ...
ಕಡಿರುದ್ಯಾವರ ಒಂಟಿ ಸಲಗ ಹಾವಳಿ ಕೃಷಿ ಹಾನಿ
ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ನುಗ್ಗಿದ ಒಂಟಿ ಸಲಗ ಕೃಷಿ ಹಾನಿ ಉಂಟು ಮಾಡಿದೆ.ಮಂಗಳವಾರ ತಡರಾತ್ರಿ ಇಲ್ಲಿನ ಭಾರತಿ ಹೆಬ್ಬಾರ್, ರಮೇಶ್ ಹಾಗೂ ಇತರರ ತೋಟಗಳಿಗೆ ದಾಳಿ ಇಟ್ಟ ಒಂಟಿ ಸಲಗ ಅಡಕೆ ಮರ, ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಒಂಟಿ ಸಲಗ ಮನೆಗಳ ಹತ್ತಿರದ ವರೆಗೂ ಸುಳಿದಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ಮರಳು ಮತ್ತು ಕೆಂಪು ಕಲ್ಲು ಸರಾಗವಾಗಿ ಬಳಕೆದಾರರಿಗೆ ಸಿಗುವಂತೆ ಮರಳು ನೀತಿ ರೂಪಿಸಲು ಸಿಐಟಿಯು ಆಗ್ರಹ
ಬೆಳ್ತಂಗಡಿ; ಮರಳು ಮತ್ತು ಕೆಂಪು ಕಲ್ಲು ಸರಾಗವಾಗಿ ಬಳಕೆದಾರರಿಗೆ ಸಿಗುವಂತೆ ಮರಳು ನೀತಿ ರೂಪಿಸಬೇಕು ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ರಿ. ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಧನಂಜಯ ಗೌಡ ಹೆಳಿದರು.ಅವರು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ರಿ. ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಈ ಬಗ್ಗೆ ತಾಲೂಕಾಡಳಿತಕ್ಕೆ ಮನವಿ ನೀಡಿದಬಳಿಕ ಈ ಹೇಳಿಕೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬೆಳ್ತಂಗಡಿ ತಾಲೂಕಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು...
ಬೆಳ್ತಂಗಡಿ : ಸೌತಡ್ಕ ದೇವಸ್ಥಾನದ ಹುಂಡಿ ಹಣ ಎಣಿಕೆಯಲ್ಲಿ ವಂಚನೆಗೆ ಯತ್ನ; ಕೊಕ್ಕಡ ಕೆನರಾ ಬ್ಯಾಂಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ಮುಜರಾಯಿ ಇಲಾಖೆಗೆ ಸೇರಿದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬ ದೇವಳಕ್ಕೆ ವಂಚಿಸುವ ಮೂಲಕ ಅಪರಾಧ ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿರುವ ಬಗ್ಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಶಬರಾಯ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ BHARATIYA NYAYA SANHITA (BNS), 2023 (U/s-316(5),62) ಅಡಿಯಲ್ಲಿ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಗಣೇಶ್ ನಾಯ್ಕ ವಿರುದ್ಧ ಜೂ.26 ರಂದು ಪ್ರಕರಣ ದಾಖಲಿಸಿ ತನಿಖೆ...
ಕಳೆಂಜ 309ಸರ್ವೆ ನಂಬರ್ ನಲ್ಲಿ ಜಂಟಿ ಸರ್ವೆಗೆ ಗ್ರಾಮಸ್ಥರಿಂದ ಉಸ್ತುವಾರಿ ಸಚಿವರಿಗೆ ಮನವಿ
ಬೆಳ್ತಂಗಡಿ; ಕಳೆಂಜ ಗ್ರಾಮದ 309ಸರ್ವೆ ನಂಬರ್ ನಲ್ಲಿ ಮರು ಜಂಟಿ ಸರ್ವೆ ಕಾರ್ಯವನ್ನು ನಡೆಸಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ವಿಂಗಡಿಸಿ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಮಂಗಳೂರಿನಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರು ಕಳೆಂಜ ಗ್ರಾಮದಲ್ಲಿರುವ 309ಸರ್ವೆ ನಂಬರ್ ನ ಸಮಸ್ಯೆ ಬಗ್ಗೆ ಸಚಿವರಿಗೆ ಹೆಚ್ಚಿನ ಮಾಹಿತಿ ನೀಡಿ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ...
ಪ್ರಧಾನಿ ಹಾಗೂ ಗೃಹ ಸಚಿವರ ಫೊಟೋ ಗಳೊಂದಿಗೆ ಧಾರ್ಮಿಕ ಭಾವನೆಗೆ ದಕ್ಕೆ ತರುವ ವಾಟ್ಸಪ್ ಪೋಸ್ಟ್; ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ: ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಫೊಟೋಗಳೊಂದಿಗೆ ನಗ್ನ ಮಹಿಳೆಯ ಫೊಟೋವನ್ನು ಹಾಕಿ ಹಿಂದೂ ಧರ್ಮದ ದೇವರುಗಳ ಫೊಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರಗಳಿರುವ ಫೊಟೋಗಳನ್ನು ಸಾಮಾಜಿಕ ಜಾಲತಾಣ ವಾಟ್ಸಪ್ ಸ್ಟೇಟಸ್ ಪೋಸ್ಟ್ ಮಾಡಿದ ಅಜಿ.ಎಂ ಜೋಸೆಫ್ ಎಂಬಾತನ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪೋಸ್ಟ್ ನಿಂದ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗುತ್ತದೆ ಹಾಗೂ ದ್ವೇಷ ಭಾವನೆಗೆ ಕಾರಣವಾಗಿದೆ ಎಂದು ದೂರು ನೀಡಲಾಗಿದ್ದು ಅದರಂತೆ ವೇಣೂರು ಠಾಣೆಯಲ್ಲಿ 353(2)BNS 2023 ರಂತೆ ಪ್ರಕರಣ ದಾಖಲಿಸಲಾಗಿದೆ.
ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಪೋಸ್ಟ್ ಹಾಕಿದ ನವೀನ್ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ1 ರಂದು BNS 296 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ನೀಡಿರುವ ದೂರಿನಂತೆ ಪ್ರಕರಣದಾಖಲಿಸಲಾಗಿದೆ.Naveen Gowda (https://facebook.com/naveen.gowda.938621) ಎಂಬ ಫೇಸ್ ಬುಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಮಹೇಶ್ ಶೆಟ್ಟಿ ಎಂತವರನ್ನು ಸಾಕಿಕೊಂಡಿದ್ದಾನೆ ಎಂದು ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಎಲ್ಲರೂ ಬಳಸುವ ಫೇಸ್ ಬುಕ್ ಖಾತೆಗೆ ಅಶ್ಲೀಲ ಪದಗಳನ್ನು ಹಾಕಿರುತ್ತಾರೆ.ಆದ್ದರಿಂದ Naveen...
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹೇಳಿಕೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ; ಅಶ್ಲೀಲ ಶಬ್ದಗಳನ್ನು ಉಪಯೋಗಿಸಿದ್ದಲ್ಲದೆ "ಕಾನೂನನ್ನು ಕೈಗೆತ್ತಿ ಕೊಳ್ಳುವುದೇ ಉಳಿದರುವ ದಾರಿ" ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದಿದ್ದ ವಿಜಯ ವಿಜಿ ಎಂಬ ಫೇಸ್ ಬುಕ್ ಖಾತೆಯ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳ ನಿವಾಸಿ ರಮೇಶ್ ದೊಂಡೋಲೆ ಎಂಬವರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ವಿಜಯ ವಿಜಿ ಎಂಬ ಖಾತೆಯಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿರುವುದಲ್ಲದೆ "ಇನ್ನು ಉಳಿದಿರೋ ದಾರಿ ಒಂದೇ ಕಾನೂನು ನಮ್ಮ ಕೈಗೆ ತೆಗೊಳೋದು ಜೈ ಅಣ್ಣಪ್ಪ ಜೈ ಮಂಜುನಾಥ" ಎಂದು ಬರೆದಿದ್ದಾರೆ....