ಪುತ್ತೂರು 106 ಕಿಲೋ ಗ್ರಾಂ ಗಾಂಜಾ ವಶ; ಚಾರ್ಮಾಡಿಯ ಇಬ್ಬರ ಬಂಧನ
ಬೆಳ್ತಂಗಡಿ; ಕಾರು ಮತ್ತು ಒಂದು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ, ಸದ್ರಿ ಕಾರು ಹಾಗೂ ಗೂಡ್ಸ್ ವಾಹವನ್ನು ತಪಾಸಣೆಗಾಗಿ ನಿಲ್ಲಿಸಲಾಗಿರುತ್ತದೆ. ಕಾರಿನ ಚಾಲಕನಲ್ಲಿ ವಿಚಾರಿಸಲಾಗಿ ಆತನು ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ(37) ಎಂಬುದಾಗಿ ತಿಳಿಸಿದ್ದು ಆತನ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 100 ಗ್ರಾಂ ತೂಕವಿರುವ...
ಬೆಳ್ತಂಗಡಿ; ಮುಂದುವರಿದ ಚಿರತೆ ಹಾವಳಿ ಭಯದಲ್ಲಿ ನಾಗರಿಕರು
ಬೆಳ್ತಂಗಡಿ; ತಾಲೂಕಿನಾದ್ಯಂತ ಚಿರತೆ ಹಾವಳಿ ನಿರಂತರವಾಗಿ ಮುಂದುವರಿದಿದ್ದು ಭಾನುವಾರ ತಡ ರಾತ್ರಿ ನಡ ಕನ್ಯಾಡಿಯಲ್ಲಿ ರಸ್ತೆಬದಿಯಲ್ಲಿ ಚಿರತೆ ನೋಡಲು ಸಿಕ್ಕಿದ್ದು ಜನರಿಗೆ ಭಯ ಮೂಡಿಸಿದೆ. ಕನ್ಯಾಡಿ ಪರಿಸರದಲ್ಲಿ ಚಿರತೆಯ ಓಡಾಟ ಮತ್ತಷ್ಟು ಹೆಚ್ಚಾಗಿದೆ.ನಡ ಗ್ರಾಮದ ಕನ್ಯಾಡಿಯಲ್ಲಿ ಭಾನುವಾರ ಬೆಳಿಗ್ಗೆ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದ ಪ್ರಕರಣ ನಡೆದಿದೆ.ಮಲವಂತಿಗೆ ಗ್ರಾಮದ ದಿಡುಪೆ-ಪರಂಬೇರು ರಸ್ತೆಯ ಕರಿಯಂದೂರು ಕ್ರಾಸ್ ಬಳಿ ಭಾನುವಾರ ಸಂಜೆ ಸ್ಥಳೀಯರಿಗೆ ಚಿರತೆ ಕಾಣಸಿಕ್ಕಿದೆ. ಚಿರತೆಯ ಓಡಾಟ ಜನರಲ್ಲಿ ಭಯ ಹೆಚ್ಚಿಸಿದೆ.
ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು
ಚಾರ್ಮಾಡಿ ಘಾಟಿಯ ಮೂಡಿಗೆರೆ ಅರಣ್ಯ ವಿಭಾಗದ ಮಲಯ ಮಾರುತ ಪ್ರದೇಶದಲ್ಲಿ ಭಾರಿ ಬೆಂಕಿ ಕಂಡುಬಂದಿದೆ.ಭಾನುವಾರ ರಾತ್ರಿ ರಸ್ತೆಯಿಂದ ಸುಮಾರು ಒಂದೆರಡು ಕಿ.ಮೀ. ದೂರದಲ್ಲಿ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದುಬಂದಿಲ್ಲ.
ಧರ್ಮಸ್ಥಳ ಮತ್ತು ಡಾ ಹೆಗ್ಗಡೆಯವರ ವಿರುದ್ಧ ನಿಂದನೆ ಮಾಡದಂತೆ ನ್ಯಾಯಾಲಯದ ಆದೇಶ ಉಲ್ಲಂಘನೆ ಸೌಜನ್ಯ ಮಾವ ವಿಠ್ಠಲ ಗೌಡನಿಗೆ 30 ದಿನಗಳ ಕಾರಾಗ್ರಹ ಶಿಕ್ಷೆ ವಿಧಿಸಿದ ಸಿಟಿ ಸಿವಿಲ್ ಕೋರ್ಟ್
ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು, ಹೆಗ್ಗಡೆಯವರ ಕುಟುಂಬದ ವಿರುದ್ಧ ನಿಂದನೆ ಮಾಡಬಾರದು ಎಂಬ ನ್ಯಾಯಾಲಯದ ಅಧೇಶವನ್ನು ಪದೇ ಪದೇ ಉಲ್ಲಂಘಿಸಿದ ಆರೋಪದಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಮಹತ್ವದ ಅದೇಶ ಮಾಡಿದ್ದು ಸೌಜನ್ಯ ಮಾವ ವಿಠಲ ಗೌಡ ಅವರಿಗೆ ೩೦ ದಿನಗಳ ಸಿವಿಲ್ ಬಂಧನ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಆರೋಪಿಯಾಗಿರುವ ಸೌಜನ್ಯಳ ಮಾವ ವಿಠ್ಠಲ ಗೌಡ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೆಗ್ಗಡೆಯವರ ಕುಟುಂಬದ ಅವಹೇಳನಕಾರಿಯಾಗಿ ಮಾತನಾಡದಂತೆ...
ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಚ ಗುರಿಪಳ್ಳ ಇವರಿಗೆ ವಾಟರ್ ಬೆಡ್ ಹಸ್ತಾಂತರಿಸಿದ ರಕ್ಷಿತ್ ಶಿವರಾಂ
ಬೆಳ್ತಂಗಡಿ. ಉಜಿರೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಬಸ್ಸು ಡಿಕ್ಕಿ ಹೊಡೆದು ಗುರಿಪಳ್ಳ ನಿವಾಸಿ ಮಂಚ ಮುಗೇರ ಇವರಿಗೆ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಭೇಟಿಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಇವರ ಆರೋಗ್ಯ ವಿಚಾರಿಸಿ, ವಾಟರ್ ಬೆಡ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ವೈದ್ಯರಿಂದ ರೋಗಿಯ ಆರೋಗ್ಯದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಈ ಸಂಧರ್ಭದಲ್ಲಿ ಪತ್ನಿ ಗಿರಿಜಾ, ಮಗ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ...
ಕಳಿಯ ಕೊಲೆಯಾದ ಬಾಲಕ ಸುಮಂತ್ ಮನೆಗೆ ರಕ್ಷಿತ್ ಶಿವರಾಂ ಭೇಟಿ
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ,ಸುಮಂತ್ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮುಂಜಾನೆ ಧನುಪೂಜೆಗೆ ತೆರಳಿದ್ದ ಸಂದರ್ಭದಲ್ಲಿ,ಅಸಹಜವಾಗಿರೀತಿಯಲ್ಲಿ ಸಾವನ್ನಪ್ಪಿದ್ದು. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.ಮೃತ ಬಾಲಕನ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಹೆತ್ತವರು, ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು.ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್ ಬಿ, ಶ್ರೀಮತಿ ಶ್ವೇತಾ , ಶ್ರೀಮತಿ ಮರಿಟಾ ಪಿಂಟೋ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್...
ಬೆಳ್ತಂಗಡಿ :ಕೊಲೆಯಾದ ಬಾಲಕ ಸುಮಂತ್ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ
ಬೆಳ್ತಂಗಡಿ : ಕೆರೆಯಲ್ಲಿ ಶವವಾಗಿ ಪತ್ತೆಯಾದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಸುಮಂತ್(15) ಮನೆಗೆ ಜ.17 ರಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆಗಮಿಸಿ ಮನೆಮಂದಿ ಜೊತೆ ಘಟನೆ ಬಗ್ಗೆ ಮಾಹಿತಿ ಪಡೆದು ಬಳಿಕ ಸಾಂತ್ವನ ತಿಳಿಸಿದರು. ಕುಟುಂಬಸ್ಥರ ಜೊತೆ ಮಾತುಕತೆ ವೇಳೆ ಸುಮಂತ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಜೊತೆ ಮಾತಾನಾಡಿರುವುದಾಗಿ ಬ್ರಿಜೇಶ್ ಚೌಟ ಮಾಹಿತಿ ನೀಡಿದರು. ಬಿಜೆಪಿಯ ಜಯಂತ್ ಕೋಟ್ಯಾನ್,ನಿತೇಶ್,ದಿನಕರ್,ವಸಂತ್ ಮಜಲ್, ವಿಜಯ ಕುಮಾರ್,ಲಕ್ಷ್ಮೀಕಾಂತ್,ಶಶಿರಾಜ್ ಶೆಟ್ಟಿ, ವಿನೀತ್ ಕೋಟ್ಯಾನ್ ಉಪಸ್ಥಿತರಿದ್ದರು.
ಅವಧಿ ಮುಗಿದ ಗ್ರಾಮ ಪಂಚಾಯತುಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರಕಾರ ಆದೇಶ
ಬೆಂಗಳೂರು: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರ ಆದೇಶಿಸಿದೆ. ಈ ಮೂಲಕ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿಗಳಲ್ಲಿ ಇನ್ಮುಂದೆ ಆಡಳಿತಾಧಿಕಾರಿಯು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿ ತುರ್ತು ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊರಡಿಸಿದ್ದಾರೆ. ಅದರಲ್ಲಿ ಸಂವಿಧಾನದ ಅನುಚ್ಛೇಧ 243-E ಉಪಬಂಧದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಹಾಗೂ 42 ರಲ್ಲಿ ಉಪಬಂಧಿಸಿರುವಂತೆ ಗ್ರಾಮ ಪಂಚಾಯಿತಿಗಳನ್ನು...
ಬೆಳ್ತಂಗಡಿ ತಾಲೂಕಿನಲ್ಲಿ ಬಂಜೆತನ ನಿವಾರಣೆ ಚಿಕಿತ್ಸೆಗೆ ಮೊದಲ ಐಯುಐ (IUI) ವಿಭಾಗ ಉದ್ಘಾಟನೆ: – ಬೆನಕ ಹೆಲ್ತ್ ಸೆಂಟರ್‌ನಲ್ಲಿ ಹೊಸ ಅಧ್ಯಾಯ
ಉಜಿರೆ: (ಜ.16): ಬೆಳ್ತಂಗಡಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಐಯುಐ (ಐಯುಐ – ಇಂಟ್ರಾ ಯುಟೆರೈನ್ ಇನ್ಸೆಮಿನೇಷನ್) ಚಿಕಿತ್ಸಾ ವಿಭಾಗವನ್ನು ಬೆನಕ ಹೆಲ್ತ್ ಸೆಂಟರ್, ಉಜಿರೆಯಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವಿನಯಾ ಕಿಶೋರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು, “ಇದು ಬೆಳ್ತಂಗಡಿ ತಾಲ್ಲೂಕಿಗೆ ಹೆಮ್ಮೆಯ ಕ್ಷಣ. ಐಯುಐ ವಿಭಾಗವು ಇಲ್ಲಿನ ಜನರಿಗೆ ಅತ್ಯಂತ ಅಗತ್ಯವಾಗಿತ್ತು. ಇದು ಡಾ. ಗೋಪಾಲಕೃಷ್ಣ ಹಾಗೂ ಡಾ. ಭಾರತಿ ಜಿಕೆ ಅವರ ಕನಸಿನ ಫಲಿತಾಂಶವಾಗಿದೆ. ಐಯುಐ...
ಜ17 ಉಸ್ತುವಾರಿ ಸಚಿವರಿಂದ ಕುಕ್ಕೇಡಿ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಹಕ್ಕು ಪತ್ರ ವಿತರಣೆ ರಕ್ಷಿತ್ ಶಿವರಾಂ
ಬೆಳ್ತಂಗಡಿ; ತಾಲೂಕಿನ ಕುಕ್ಕೇಡಿಯಲ್ಲಿ ನವೀಕರಣಗೊಂಡಿರುವ ಅಂಬೇಡ್ಕರ್ ಭವನದ ಉದ್ಘಾಟನೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆಗಮಿಸಲಿರುವುದಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.ಜ. 17 ಶನಿವಾರದಂದು ಬೆಳಗ್ಗೆ ಮಂಗಳೂರಿಗೆ ಆಗಮಿಸುವ ಸಚಿವರು ಬಳಿಕ ಕುಕ್ಕೇಡಿಗೆ ಆಗಮಿಸಿ ಕುಕ್ಕೇಡಿಯ ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಲಿದ್ದು ಬಳಿಕ 94ಸಿ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ















