ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹೇಳಿಕೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ; ಅಶ್ಲೀಲ ಶಬ್ದಗಳನ್ನು ಉಪಯೋಗಿಸಿದ್ದಲ್ಲದೆ "ಕಾನೂನನ್ನು ಕೈಗೆತ್ತಿ ಕೊಳ್ಳುವುದೇ ಉಳಿದರುವ ದಾರಿ" ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದಿದ್ದ ವಿಜಯ ವಿಜಿ ಎಂಬ ಫೇಸ್ ಬುಕ್ ಖಾತೆಯ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳ ನಿವಾಸಿ ರಮೇಶ್ ದೊಂಡೋಲೆ ಎಂಬವರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ವಿಜಯ ವಿಜಿ ಎಂಬ ಖಾತೆಯಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿರುವುದಲ್ಲದೆ "ಇನ್ನು ಉಳಿದಿರೋ ದಾರಿ ಒಂದೇ ಕಾನೂನು ನಮ್ಮ ಕೈಗೆ ತೆಗೊಳೋದು ಜೈ ಅಣ್ಣಪ್ಪ ಜೈ ಮಂಜುನಾಥ" ಎಂದು ಬರೆದಿದ್ದಾರೆ....

ಕೊಲೆಯತ್ನ ಪ್ರಕರಣ; 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳದಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

0

ಬೆಳ್ತಂಗಡಿ; 2011 ನೇ ಸಾಲಿನಲ್ಲಿ ಬಂಟ್ವಾಳ, ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅಕ್ಬರ್ ಸಿದ್ದಿಕ್, ಎಂಬಾತನನ್ನು ಬಂಟ್ವಾಳ ಪೊಲೀಸರು ಧರ್ಮಸ್ಥಳ ದಲ್ಲಿ ಬಂಧಿಸಿದ್ದಾರೆ.ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿ ಅಕ್ಬರ್ ಸಿದ್ದಿಕ್, ವಾಸ: ಬಿ ಮೂಡ ಗ್ರಾಮ, ಬಂಟ್ವಾಳ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜೂನ್ 30 ರಂದು ಧರ್ಮಸ್ಥಳದಲ್ಲಿ...

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ;  ಸಾಧನೆಗೆ ಪ್ರಯತ್ನವೇ ಮುಖ್ಯ; ಮೋಹನ್ ಕುಮಾರ್.

0

ಉಜಿರೆ : ಮೊದಲಿಗೆ ನಾವು ಮಾಡುವ ಕೆಲಸದಲ್ಲಿ ಶೃದ್ದೆ ಇರಬೇಕು. ಬರುವ ಗ್ರಾಹಕರನ್ನು ಗೌರವದಿಂದ ಮತ್ತು ಪ್ರೀತಿಯಿಂದ ನೋಡಿಕೊಂಡಾಗ ಅದೇ ದೊಡ್ಡ ಪ್ರಚಾರಕ್ಕೆ ಕಾರಣವಾಗುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಮಾಡಿಕೊಡುವ ಜಾಣ್ಮೆಯನ್ನು ನಾವು ಬೆಳೆಸಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯತ್ತುಮವಾದ ತರಬೇತಿಯನ್ನು ಪಡೆದುಕೊಂಡಿದ್ದೀರಿ ಅದನ್ನು ಜೀವನದಲ್ಲಿ ಮತ್ತು ಉದ್ಯಮದಲ್ಲಿ ಉಪಯೋಗಿಸಿಕೊಂಡು ಯಶಸ್ವಿಯಾಗಿ ಎಂದು ಉಜಿರೆಯ ಲಕ್ಷ್ಮೀ ಗ್ರೂಪ್ಸ್ ಮತ್ತು...

ಕೆ.ಎಸ್ ಎಂ ಸಿ ಎ ಉಜಿರೆ ಘಟಕ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಎಕ್ಸೆಲ್ ಕಾಲೇಜು ನಿರ್ದೇಶಕರಾದ  ಸುಮಂತ್ ಜೈನ್ ರವರಿಗೆ ಸನ್ಮಾನ

0

ಬೆಳ್ತಂಗಡಿ;  ಕೆ ಎಸ್ ಎಂ ಸಿ ಎ ಉಜಿರೆ ಘಟಕ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಎಕ್ಸೆಲ್ ಕಾಲೇಜು ನಿರ್ದೇಶಕರಾದ  ಸುಮಂತ್ ಜೈನ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಘಟಕದ ನಿರ್ದೇಶಕರಾಧ ಫಾ ಬಿಜು ಮ್ಯಾಥ್ಯೂಅಂಬಟ್  ಅಧ್ಯಕ್ಷರಾದ ಜೋಬಿ ಮುಳವನ ಮಾಚಾರ್ ಸದಸ್ಯರಾದ ಜೇಮ್ಸ್ ನೆಲ್ಲಿಕುನ್ನೆಲ್ ಸಣ್ಣಿ ಬೆಳಾಲ್ ಮತ್ತು ಕೆ ಎಸ್ ಎಂ ಸಿ ಎ ಕೇಂಧ್ರ ಸಮಿತಿಯ ಸದಸ್ಯರು ಸೆಬಾಸ್ಟಿಯನ್ ಪಿ ಸಿ, ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ ಹಾಗೂ ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಯೂತ್ ಕೌನ್ಸಿಲ್ ಕೊಡಿನೇಟರ್...

ಬೆಳ್ತಂಗಡಿ : ಹೃದಯಾಘಾತ ದಿಂದ ವ್ಯಕ್ತಿ ಮೃತ್ಯು

0

ಬೆಳ್ತಂಗಡಿ : ಅರೋಗ್ಯವಾಗಿದ್ದ ವ್ಯಕ್ತಿಗೆ ಏಕಾಏಕಿ ಎದೆನೋವು ಕಾಣಿಸಿದ್ದು ಆಸ್ಪತ್ರೆಗೆ ಹೋದಾಗ ಸಾವನ್ನಪ್ಪಿದ ಘಟನೆ ನಡೆದಿದೆ‌. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ(53) ಎಂಬವರಿಗೆ ಜೂ.30 ರಂದು ರಾತ್ರಿ ಎದೆನೋವು ಕಾಣಿಸಿದೆ ಬಳಿಕ ತನ್ನ ಸ್ಕೂಟರ್ ನಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆಹೋಗಿ ಚಿಕಿತ್ಸೆ ಮುಂದಾದಗ ಸಾವನ್ನಪ್ಪಿದ್ದಾರೆ. ವಜ್ರಾಕ್ಷ ಪೂಜಾರಿ ಆರೋಗ್ಯವಾಗಿದ್ದು ದಿನನಿತ್ಯದಂತೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ ಎದೆನೋವು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಪತ್ನಿ ಮತ್ತು ಒಂದು ಪುತ್ರಿಯನ್ನು ಅಗಲಿದ್ದಾರೆ.

ಕೆಂಪು ಕಲ್ಲು ಮರಳು ಅಭಾವ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಸಮಸ್ಯೆ; ಬಿ.ಎಂ ಎಸ್. ನಿಂದ ಮನವಿ

0

ಬೆಳ್ತಂಗಡಿ; ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು ಬೃಹತ್ ಕಾರ್ಮಿಕ ಜಾಗೃತಿ ಆಂದೋಲನವನ್ನು ಆಯೋಜಿಸುವ ಕುರಿತು ಸಮಾಲೋಚನ ಸಭೆಯನ್ನು ಅಂಬೇಡ್ಕರ್ ಭವನ ಬೆಳ್ತಂಗಡಿದಲ್ಲಿ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ತಾಲೂಕು ಸಮಿತಿ ಅಧ್ಯಕ್ಷರಾದ ವಕೀಲರಾದ ಉದಯ್ ಬಿ.ಕೆ ಅವರು ವಹಿಸಿದ್ದರು ,ಈ ಸಂದರ್ಭದಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ...

ಉಪ್ಪಿನಂಗಡಿ ಕಲ್ಲೇರಿ ಬಳ್ಳಮಂಜ ಮಡಂತ್ಯಾರ್- ಧರ್ಮಸ್ಥಳ ಮತ್ತು ಮಂಗಳೂರು ಮಾರ್ಗವಾಗಿ ಸರ್ಕಾರಿ ಬಸ್ ಪ್ರಾರಂಭಿಸುವಂತೆ ಸಾರಿಗೆ ಸಚಿವರಿಗೆ ಮನವಿ.

0

ಬೆಳ್ತಂಗಡಿ. ಉಪ್ಪಿನಂಗಡಿ ಕಲ್ಲೇರಿ ಬಳ್ಳಮಂಜ ಮಡಂತ್ಯಾರ್- ಧರ್ಮಸ್ಥಳ ಮತ್ತು ಮಂಗಳೂರು ಮಾರ್ಗವಾಗಿ ಸರ್ಕಾರಿ ಬಸ್ ಪ್ರಾರಂಭಿಸುವಂತೆ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿಯವರು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರಮೋದ್ ಕುಮಾರ್, ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ಮಚ್ಚಿನ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ...

ಮಡಂತ್ಯಾರ್‌ನಲ್ಲಿ  ಕಥೋಲಿಕ್ ಸಭಾ ವತಿಯಿಂದ  ಕವಿತಾ ಮತ್ತು ಸಾಂಸ್ಕೃತಿಕ ಸಂಜೆ

0

ಮಡಂತ್ಯಾರ್: ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮಡಂತ್ಯಾರ್ ಘಟಕ, ರಂಗ್ ತರಂಗ್ ನಾಟಕ ತಂಡ ಮತ್ತು ಪೋಯೋಟಿಕಾ ಸಹಯೋಗದಲ್ಲಿ 40ನೇ ಕವಿಗೋಷ್ಠಿಯು ಮಡಂತ್ಯಾರ್ ಸಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು. ಮಡಂತ್ಯಾರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಡಾ. ಸ್ಟ್ಯಾನಿ ಗೋವಿಯಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಾಯಕ ಧರ್ಮಗುರು ಫಾ. ಲ್ಯಾರಿ ಪಿಂಟೋ ಪ್ರಾರ್ಥನೆಯ ನೆರವೇರಿಸಿದರು. ಘಟಕದ ಅಧ್ಯಕ್ಷ ವಿನ್ಸೆಂಟ್ ಡಿಸೋಜಾ ಅವರು ಸ್ವಾಗತ ಭಾಷಣ ನೀಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು....

ಬೆಳ್ತಂಗಡಿ ಮೂರು ಮಾರ್ಗದ ಬಳಿ ನೂರಾ ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ; ನಮ್ಮ ಎಲ್ಲಾ ಅಭಿವೃದ್ದಿಯ ಹಿಂದೆ ನಿಷ್ಕಲ್ಮಶ ಪ್ರಾರ್ಥನೆಯ ಫಲ ಅಡಗಿದೆ; ಸಯ್ಯಿದ್ ಕಡಲುಂಡಿ‌ ತಂಙಳ್ 

0

ಬೆಳ್ತಂಗಡಿ; ಶೂನ್ಯದಿಂದ ಆರಂಭವಾಗುವ ನಮ್ಮ ಜೀವನ, ನಡೆ ನುಡಿ, ವ್ಯಾಪಾರ- ವ್ಯವಹಾರ ಇವುಗಳೆಲ್ಲದರ ಸಮಗ್ರ ಏಳಿಗೆಯು ದೇವರ ಮೇಲಿನ ನಮ್ಮ ನಿಷ್ಕಲ್ಮಶ ಪ್ರಾರ್ಥನೆಯ ಫಲದ ಪ್ರತಿಬಿಂಭವಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕಾರ್ಯದರ್ಶಿ, 'ಮ‌ಅದಿನ್ ಅಕಾಡಮಿ' ಇದರ ಚೇರ್ಮೆನ್ ಬದ್ರುಸ್ಸಾದಾತ್ ಸಯ್ಯಿದ್‌ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಹೇಳಿದರು.ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಆಶಾ ಕಿರಣ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜೂ. 30 ರಂದು ಉದ್ಘಾಟನೆಗೊಂಡ,ಬೆಳೆಯುತ್ತಿರುವ ಬೆಳ್ತಂಗಡಿಗೆ ಇನ್ನೊಂದು ಮೆರುಗು ಎಂಬಂತೆ ವಿಶಾಲ ಸ್ವರ್ಣಾಭರಣ ಮಳಿಗೆ ನೂರಾ...

ಚಾರ್ಮಾಡಿ ಹಲ್ಲೆ ಪ್ರಕರಣ ಇಬ್ಬರ ಬಂಧಿನ; ಆರೋಪಿಗಳಿಗೆ ಜು 11 ರವರೆಗೆ   ನ್ಯಾಯಾಂಗ ಬಂಧನ

0

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದ ಮಹಮ್ಮದ್ ತೌಸಿಫ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿಗಳಾದ ಬಿ.ರಹೀಂ ಮತ್ತು ಮಹಮದ್ ಫಯಾಜ್ ನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್‌.ಆರ್.ಗಾಣಿಗೇರ ನೇತೃತ್ವದ ತಂಡ ಜೂ.29 ರಂದು ಬಂಧಿಸಿದ್ದಾರೆ.ಆರೋಪಿಗಳನ್ನು ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ಜು.11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.