ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆ ಬೆಳಾಲು: ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗೌರವ ರಾಜ್ಯಪಾಲ, ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸರ್ಕಾರ ಸಹಕಾರಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿ ನಾಯಕ ಕಾರ್ತಿಕ್ ಎಂ.ಎನ್ ವಾರ್ಷಿಕ ಯೋಜನೆ ಮಂಡಿಸಿದರು. ಶಿಕ್ಷಕ ಕಿರಣ್ ಕಾರ್ಯಕ್ರಮ ಸಂಘಟಿಸಿದರು. ಇತರ ಶಿಕ್ಷಕರು ಉಪಸ್ಥಿತರಿದ್ದರು.ಉಪನಾಯಕ ರಕ್ಷಿತ್ ಸ್ವಾಗತಿಸಿ, ವಿರೋಧ ಪಕ್ಷದ ನಾಯಕಿ ನೇತ್ರಾವತಿ ವಂದಿಸಿದರು. ಕಾರ್ಯದರ್ಶಿ ಮಹಮ್ಮದ್ ಹಯನ್ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮಾಭಿವೃದ್ದಿ ಯೋಜನೆ ಮೊಗ್ರು ಒಕ್ಕೂಟದಿಂದ ನಿವೃತ್ತ ಸೈನಿಕನಿಗೆ ಸನ್ಮಾನ
ಬೆಳ್ತಂಗಡಿ :ದೇಶದ ಸೈನ್ಯದಲ್ಲಿ 22 ವರ್ಷಗಳ ಕಾಲ ಅನನ್ಯ ಸೇವೆಗೈದು ನಿವೃತ್ತರಾದ ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ಯೋಧ ಎ ಸಿ ಪಿ ಹವಾಲ್ದಾರ್ ದೇವಪ್ರಸಾದ್ ಗೌಡರವರಿಗೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಿ. ಸಿ ಟ್ರಸ್ಟ್ (ರಿ ) ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಉಂತನಾಜೆ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮೊಗ್ರು ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗಂಗಾಧರ ಪೂಜಾರಿ, ಉಪಾಧ್ಯಕ್ಷರಾದ ಕೃಷ್ಣ ಬೆಳ್ಚಡ, ಕಾರ್ಯದರ್ಶಿ ನವೀನ್,...
ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನಾ ದಿನಾಚರಣೆ ಪಕ್ಷದ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯೇ ಪಕ್ಷದ ಬೆಳವಣಿಗೆಗೆ ಕಾರಣ: ಅಲ್ಫೋನ್ಸ್ ಫ್ರಾಂಕೋ
ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 18ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ, ನೂತನ ಬ್ಲಾಕ್ ಕಚೇರಿ ಉದ್ಘಾಟನೆ, ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, “ದಮನಕಾರಿ ಆಡಳಿತ ಹಾಗೂ ಬೆದರಿಕೆಗಳಿಗೆ...
ಧರ್ಮಸ್ಥಳ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಾಮೂಹಿಕ ಯೋಗ ಪ್ರದರ್ಶನ
ಧರ್ಮಸ್ಥಳ: ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ “ಯೋಗ” ಆಗಿದ್ದು ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 12ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಸನೆ ಮಾಡಿದರು.ನಮ್ಮ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಭಾಗ್ಯ ರಕ್ಷಣೆಗೆ ಯೋಗ ಸಹಕಾರಿಯಾಗಿದೆ. ಆಧುನಿಕ ಜೀವನಶೈಲಿ, ಆಹಾರ-ವಿಹಾರ ವಿಧಾನದಿಂದಾಗಿ ನಾವು ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನಕ್ಕೆ...
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಅಡ್ಡ ಮತದಾನದಬಗ್ಗೆ ಕ್ಷೇತ್ರದಲ್ಲಿ ನಿರ್ಧಾರ ವಾಗಲಿ; ವಿಜಯೇಂದ್ರ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ಆರೋಪ ಕುರಿತಂತೆ ಅತಿ ಶೀಘ್ರದಲ್ಲೇ ಧರ್ಮಸ್ಥಳದ ಶ್ರೀ ಕ್ಷೇತ್ರದಲ್ಲಿ ನಮ್ಮ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಿರುವುದಾಗಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಅವರಿಗ ಸಭೆ ಕರೆಯುವ ಸಂಬಂಧ ಮಾತನಾಡುವೆ; ನಾವೆಲ್ಲರೂ ದೇವರನ್ನು ನಂಬುವವರು. ಧರ್ಮಸ್ಥಳದಲ್ಲಿ ಸಭೆ ಕರೆದು ತಾಯಿಗೆ ದ್ರೋಹ ಮಾಡಿದ ಶಾಸಕರ ಮತ್ತು ಸತ್ಯದ ಬಗ್ಗೆ ಗೊತ್ತಾಗಬೇಕಿದೆ. ಶ್ರೀ ಕ್ಷೇತ್ರದಲ್ಲಿ ತೀರ್ಮಾನ ಆಗಬೇಕೆಂದು ನಿರ್ಧಾರ...
ಅಪಘಾತದಲ್ಲಿ ತೀವ್ರ ಗಾಯಗಳೊಂದಿಗೆ ಚಿಕಿತ್ಸೆಯಲ್ಲಿರುವ ಯೋಧ ಮತ್ತು ಮಗುವಿನ ಚೇತರಿಕೆಗಾಗಿ ಸರ್ವಧರ್ಮೀಯ ಕ್ಷೇತ್ರದಲ್ಲಿ ಯೋಧರ ಬಳಗದಿಂದ ಪ್ರಾರ್ಥನೆ
ಬೆಳ್ತಂಗಡಿ; ಆಕಸ್ಮಿಕ ಅಗ್ನಿ ಅವಘಡದಿಂದ ಸ್ಕೂಟರ್ ಹೊತ್ತಿ ಉರಿಯುವ ವೇಳೆ ಅದರಲ್ಲಿ ಪ್ರಯಾಣಿಸುತ್ತಿದ್ದ ಯೋಧ ಹಾಗೂ ಅವರ ಎಳೆಯ ಮಗುವು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಶೀಘ್ರ ಆರೋಗ್ಯ ಚೇತರಿಕೆಗಾಗಿ ಇತರ ಯೋಧರು ಮತ್ತು ಮಾಜಿ ಯೋಧರು ಸರ್ವಧರ್ಮೀಯ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಭಾರತೀಯತೆ ಎತ್ತಿಹಿಡಿದ್ದಿದ್ದಾರೆ. ಬೆಳಾಲು ಗ್ರಾಮದ ಕಾಡಂಡ ನಿವಾಸಿ ಯೋಧ ಮೋಹನ ಗೌಡ ಕೆ ಮತ್ತು ಪುತ್ರ ದಿಯಾನ್ ಅವರು ಪ್ರಯಾಣಿಸುತ್ತಿದ್ದ ಸ್ಕೂಟರ್ ಅಗ್ನಿಗೆ ತುತ್ತಾಗಿ ಹೊತ್ತಿಉರಿದಿತ್ತು. ಈ ವೇಳೆ […]
ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿಯಿಂದ 18ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ
ಬೆಳ್ತಂಗಡಿ (ಜೂನ್-21): ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಪಕ್ಷದ 18ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಪಕ್ಷದ ಕಚೇರಿ ಮುಂಭಾಗದಲ್ಲಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. “ಪರ್ಯಾಯ ರಾಜಕಾರಣದ ಸಕಾರಾತ್ಮಕ ಹೆಜ್ಜೆ” ಎಂಬ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿ, ಪಕ್ಷದ ಹೋರಾಟ, ಜನಸೇವೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬಂದಿರುವ...
ಸುಳ್ಯ ಆಕಸ್ಮಿಕವಾಗಿ ಬಾವಿಗೆ ಬಿದ್ದು ಅವಳಿ ಮಕ್ಕಳಿಬ್ಬರು ಮೃತ್ಯು
ಸುಳ್ಯ; ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಅವಳಿ ಮಕ್ಕಳಿಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.ಸ್ಥಳೀಯ ನಿವಾಸಿ ವಸಂತ್ ಎಂಬವರ ಮಕ್ಕಳಾದ ಜಸ್ವಿತ್ ಹಾಗೂ ಜಾವಿನ್ (5) ಮೃತ ಮಕ್ಕಳಾಗಿದ್ದಾರೆ. ಮನೆಯ ಸಮೀಪದಲ್ಲಿದ್ದ ಸುಮಾರು 15 ಅಡಿ ಆಳದ ಬಾವಿಗೆ ಇವರಿಬ್ಬರೂ ಆಟವಾಡುವ ವೇಳೆ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಕ್ಕಳ ತಂದೆ ವಸಂತ ಅವರು ವೆಲ್ಡಿಂಗ್ ಕೆಲಸಕ್ಕೆ ತೆರಳಿದ್ದರೆ, ತಾಯಿ ಅವರು ಕೂಲಿ ಕೆಲಸಕ್ಕೆ ಹೋಗಿದ್ದರು. ಘಟನೆ ನಡೆದ ವೇಳೆ ಮನೆಯಲ್ಲಿ ಅಜ್ಜ...
ಬೆಳ್ತಂಗಡಿ;ಗುರಿಪಳ್ಳದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಬೆಳ್ತಂಗಡಿ: ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದಗುರಿಪಳ್ಳ ನಿವಾಸಿ ಶ್ರೀಧರ ನಾಯ್ಕ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಗಲು ಹೊತ್ತು ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜೂ. 20ರಂದು ನಡೆದಿದೆ.ಮನೆಯಲ್ಲಿ ಒಟ್ಟು ನಾಲ್ಕು ಮಂದಿ ಇದ್ದುಶ್ರೀಧರ ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.ಇತರರು ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಹಂಚು ತೆಗೆದು ಒಳನುಗ್ಗಿದ್ದು ಮನೆಯಲ್ಲಿ ಇದ್ದ ಕಪಾಟಿನ ಬೀಗ ಮುರಿದು ಸುಮಾರು 6 ಲಕ್ಷ ರೂ.ಗಿಂತ ಅಧಿಕ...
ರಾಜ್ಯಕ್ಕೆ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ. ಸಹಿತ ಇತರ ಸಾಧಕರಿಗೆ ಸಮ್ಮಾನ
ಬೆಳ್ತಂಗಡಿ, ಜೂ.20: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ನಿಶ್ಚಲವಾಗಿ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ.ಯೇ ಒಂದು ಪ್ರತಿಷ್ಠಿತ ಉದಾಹರಣೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ಸಿಇಟಿಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಹಾಗೂ ಬೋರ್ಡ್, ಜೆಇಇ ಸೇರಿದಂತೆ ಇತರೆ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಗಣದಲ್ಲಿ ಜೂ.20 ರಂದು ನಡೆದ ಸಮಾರಂಭದಲ್ಲಿ ಸಮ್ಮಾನಿಸಿ ಮಾತನಾಡಿದರು. ಎರಡು ವರ್ಷಗಳ ಹಿಂದೆ...















