Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ತಾಲೂಕು‌ ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ ಪರಿಶೀಲನೆ

ಬೆಳ್ತಂಗಡಿ: ತಾಲೂಕು‌ ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ ಪರಿಶೀಲನೆ

1
0

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಶ್ರೀ. ರಾಮಲಿಂಗಪ್ಪ ಗೌರವಾನ್ವಿತ ಪ್ರಧಾನ ಸಿವಿಲ್‍ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ಮತ್ತು ಶ್ರೀ. ಶಶಾಂಕ ನಾಗೇಂದ್ರ ಭಟ್‍ ಗೌರವಾನ್ವಿತ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯ, ಬೆಳ್ತಂಗಡಿ ರವರು ದಿಢೀರ್ ಭೇಟಿ ನೀಡಿ ಗಂಡಸರ ಮತ್ತು ಹೆಂಗಸರ ವಾರ್ಡ್ ಗಳಿಗೆ ಇತರ ವೈಧ್ಯಾಧಿಕಾರಿಗಳ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಕುಂದು ಕೋರತೆಗಳ ಕುರಿತು ಖುದ್ದಾಗಿ ವಿಕ್ಷಿಸಿದರು ಹಾಗೂ ಕೋವಿಡ್‍ ನಂತರ ಬಂದ ಆಮ್ಲಜನಿಕ ಘಟಕ, ವೆಂಟಿಲೇಟರ್ ಮಾನಿಟರ್, ಲ್ಯಾಬ್‍, ಮತ್ತು ಇತರ ಉಪಕರಗಳನ್ನು ತರಬೇತಿ ಪಡೆದ ಸಿಬ್ಬಂದಿ ಮತ್ತು ಪಾರದರ್ಶಕ ದಾಖಲೆಗಳ ಮೂಲಕ ಸಾರ್ವಜನಿಕರ ಚಿಕಿತ್ಸೆಗೆ ಬಳಕೆ ಆಗಬೇಕು ಮತ್ತು ರೋಗಿಗಳಿಗೆ ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸಬೇಕು ತಾಲೂಕು ಆಡಳಿತಾಧಿಕಾರಿ, ರವರಿಗೆ ಸದರಿ ಆಸ್ಪತ್ರೆಯ ಕುಂದು ಕೋರತೆಗಳ ಕುರಿತು ವರದಿ ಸಲ್ಲಿಸಲು ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದರು

LEAVE A REPLY

Please enter your comment!
Please enter your name here