ಮಂಗಳೂರು ಲೋಕಸಭಾ ಕ್ಷೇತ್ರದ ಇತಿಹಾಸ, ಒಂದು ಅವಲೋಕನ
MPs from Mangalore, Mangalore's first MP ಮತ್ತೊಂದು ಲೋಕಸಬಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಿದ್ದವಾಗುತ್ತಿದೆ. 1952 ರಲ್ಲಿ ಜಿಲ್ಲೆ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದಾಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು ಅಂದು ಕಾಸರಗೋಡನ್ನು ತನ್ನ ವ್ಯಾಪ್ತಿಗೆ ಒಳಗೊಂಡಿತ್ತು. ಬಳಿಕ ಹಲವು ಬದಲಾವಣೆಗಳನ್ನು ಕಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿ ರೂಪಗೊಂಡಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರ ಬಳಿಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಗೊಂಡಿತ್ತು. ಕಾಂಗ್ರೆಸ್...
ಉಜಿರೆಯಲ್ಲಿ ರಕ್ತದಾನ ಶಿಬಿರ
ಉಜಿರೆ: ರಕ್ತದಾನ ದಾನಗಳಲ್ಲೇ ಅತಿ ಶ್ರೇಷ್ಠವಾದುದು. ರಕ್ತದಾನದಿಂದ ಅಗತ್ಯವುಳ್ಳವರಿಗೆ ಜೀವದಾನ ನೀಡಿದಂತೆ . ಯಾವುದೇ ಜಾತಿ,ಮತ,ಧರ್ಮ ಭೇದವಿಲ್ಲದೆ ಆರೋಗ್ಯವುಳ್ಳವರು ರಕ್ತದಾನ ಮಾಡಿ ಇನ್ನೊಬ್ಬರಿಗೆ ನೆರವಾಗುವುದು ಮಾನವೀಯ ಸೇವೆಯಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು. ಅವರು ಫೆ 25 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ) ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್,ಕನ್ಯಾಡಿಯ ಸೇವಾಭಾರತಿ (ರಿ) ಹಾಗು ಮಂಗಳೂರಿನ ಕೆ. ಎಂ.ಸಿ. ಬ್ಲಡ್...
ತಾಲೂಕಿನ ಮಾಧ್ಯಮ ಕ್ಷೇತ್ರದಲ್ಲೊಂದು ಹೊಸ ಪ್ರಯತ್ನ “ಬೆಳ್ತಂಗಡಿ ಸಮಾಚಾರ”
ಬೆಳ್ತಂಗಡಿ ತಾಲೂಕಿನ ಎಲ್ಲ ಸುದ್ದಿಗಳನ್ನೂ ಹಾಗೂ ಜಿಲ್ಲೆಯ, ಹಾಗೂ ಇತರ ಮಹತ್ವದ ಸುದ್ದಿಗಳನ್ನು ಯಾವುದೇ ರಾಗ ದ್ವೇಷವಿಲ್ಲದೆ ತಾಲೂಕಿನ ಜನರಿಗೆ ತಲುಪಿಸಬೇಕು ಎಂಬ ಗುರಿಯೊಂದಿಗೆ ಇಟ್ಟಿರುವ ಒಂದು ಪುಟ್ಟ ಹೆಜ್ಜೆ 'ಬೆಳ್ತಂಗಡಿ ಸಮಾಚಾರ' ಎಂಬ ಈ ಪ್ರಯತ್ನ.ಮಾಧ್ಯಮ ಕ್ಷೇತ್ರ ಪ್ರತಿನಿತ್ಯ ಒಂದಲ್ಲ ಒಂದು ಹೊಸ ಬೆಳವಣಿಗೆಗಳನ್ನು ಕಾಣುತ್ತಲೇ ಇರುತ್ತದೆ, ಇಂದಿನ ಸುದ್ದಿಯನ್ನು ಇಂದೇ ನೋಡಿ ಎಂಬಲ್ಲಿಂದ ಈ ಕ್ಷಣದ ಸುದ್ದಿಯನ್ನು ಈ ಕ್ಷಣವೇ ನೋಡಿ ಎಂಬ ಹಂತಕ್ಕೆ ನಾವು ಬೆಳೆದಿದ್ದೇವೆ. ಆತುರದ ಕ್ಷಣದ ಸುದ್ದಿಯೇ ಇಂದಿನ ಟ್ರೆಂಡ್ ಆಗಿದೆ ಮೊದಲು ಯಾರು ಸುದ್ದಿಯನ್ನು...
ಮಾರ್ಚ್ 1 ರಂದು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ.
ಬೆಳ್ತಂಗಡಿ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಮಾರ್ಚ್ 1 ಶುಕ್ರವಾರದಂದು ಬೆಳ್ತಂಗಡಿಯ ಗುರು ನಾರಾಯಣ ಸಭಾ ಭವನದಲ್ಲಿ ಪಕ್ಷ ಸಮಾವೇಶ ನಡೆಯಲಿದೆ.ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಶಾಕೀರ್ ಅಳಕೆ ಮಜಲು, ಜಿಲ್ಲಾ ಸಮಿತಿ ಸದಸ್ಯರಾದ ಅಬುಬಕ್ಕರ್ ಮದ್ದ, ವಿಮ್ ರಾಜ್ಯ ಪ್ರಧಾನ...
ಸಂವಿಧಾನ ಉಳಿಸಬೇಕೆಂದು ಪೇಪರ್‌ನಲ್ಲಿ ಜಾಹೀರಾತು ನೀಡಿದರೆ ಸಾಕಾಗದು. ಚಳುವಳಿ ಕಟ್ಟಬೇಕು ಎ.ಬಿ ಇಬ್ರಾಹಿಂ
ಬೆಳ್ತಂಗಡಿ; "ಜನರು ಭ್ರಮಾಲೋಕದಲ್ಲಿದ್ದು ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ," ಎಂದು ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಆದ ಎ.ಬಿ. ಇಬ್ರಾಹಿಂ,ಹೇಳಿದರು.ಅವರು ಮಂಗಳೂರಿನಲ್ಲಿ ಡಿ.ವೈ.ಎಫ್.ಐ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು "ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡ 100 ರಷ್ಟು ಅಕ್ಷರಸ್ಥರು ಇರುವ, ಮಾನವ...
ಡಿವೈಎಫ್.ಐ ರಾಜ್ಯ ಸಮ್ಮೇಳನ; ನಿರುದ್ಯೋಗ ಸಮಸ್ಯೆ ಕೋಮುವಾದಕ್ಕೆ ಲಿಂಕ್ ಇದೆ- ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್
ಬೆಳ್ತಂಗಡಿ; ನಿರುದ್ಯೋಗ ಯುವಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ. ಎಲ್ಲ ವಲಯದಲ್ಲಿ ಅರ್ಹ ಅಭ್ಯರ್ಥಿಗಳಿಲ್ಲ. ಅಸಂಪೂರ್ಣೋದ್ಯೋಗ (under employment) ಕೂಡಾ ಒಂದು ಸಮಸ್ಯೆ ಆಗಿದೆ ಎಂದು ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ ಹೇಳಿದರು. ನಗರದ ಕಲ್ಲಾಪಿನಲ್ಲಿರುವ ಯುನಿಟಿ ಸಭಾಂಗಣದಲ್ಲಿ ಫೆಬ್ರವರಿ 25ರಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12ನೇ ರಾಜ್ಯ...
ವೇಣೂರು ಮಹಾ ಮಸ್ತಕಾಭಿಷೇಕ; ಸಮಾಜದ ಪ್ರಗತಿಗೆ ಜೈನರ ಕೊಡುಗೆ ಮಹತ್ವದ್ದು; ನಳಿನ್ ಕುಮಾರ್
ಬೆಳ್ತಂಗಡಿ : ಸಮಾಜದ ಸಂಘಟನೆ ಮತ್ತು ಪ್ರಗತಿಗೆ ಜೈನರ ಕೊಡುಗೆ ಅಮೂಲ್ಯವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಭಾನುವಾರ ವೇಣೂರಿನಲ್ಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಅಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಾಹುಬಲಿಯ ಆದರ್ಶತತ್ವಗಳನ್ನು ಪಾಲಿಸಿದರೆ ರಾಜಕೀಯದಲ್ಲಿ ಪಕ್ಷಾಂತರ ಸಾಧ್ಯವಾಗುವುದಿಲ್ಲ ಎಂದು ಹೇಳಿದರುದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಜೈನರು ಅಲ್ಪಸಂಖ್ಯಾತರಾದರೂ ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದರು ಶಾಸಕರುಗಳಾದ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್ ಮತ್ತು ಮಂಜುನಾಥ ಭಂಡಾರಿ ಶುಭ ಹಾರೈಸಿದರು.ಜೀವಂಧರ...
ರಾಜ್ಯ ಸಭಾ ಚುನಾವಣೆ ಇದೀಗ ಜೆಡಿಎಸ್ ಬಿಜೆಪಿಯಲ್ಲಿ ಆತಂಕ
Rajya Sabha election is now a worry in JDS BJP ಬೆಂಗಳೂರು: ಕಾಂಗ್ರೆಸ್ ಶಾಸಕರುಗಳನ್ನು ಸೆಳೆದುಕೊಂಡು ಅಡ್ಡಮತದಾನ ಮಾಡಿಸಿ ಗೆಲ್ಲಬಹುದು ಎಂದು ರಾಜ್ಯಸಭಾ ಚುನಾವಣೆಯಲ್ಲಿ ಐದನೇ ಅಭ್ಯರ್ಥಿ ಯನ್ನು ಕಣಕ್ಕೆಇಳಿಸಿದ ಬಿಜೆಪಿ ಜನತಾದಳ ಮೈತ್ರಿಗೆ ಇದೀಗ ಆತಂಕ ಎದುರಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗೆ ಅಗತ್ಯಕ್ಕಿಂತ ಎರಡು ಹೆಚ್ಚುವರಿ ಮತ ಹಾಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿದ್ದು ಜತಾದಳದದ ಅಭ್ಯರ್ಥಿ ಗೆಲ್ಲುವ ಅವಕಾಶಗಳೂ ಕ್ಷೀಣಿಸುವಂತೆ ಮಾಡಿದೆ. ಇದು ಮೈತ್ರಿ ಪಕ್ಷ ಜೆಡಿಎಸ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ.ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿಯ ಹೆಚ್ಚುವರಿ...
ಯುವ ಕಾಂಗ್ರೆಸ್ ನಗರ ಹಾಗೂಗ್ರಾಮೀಣ ಘಟಕಗಳ ಪದಾಧಿಕಾರಿಗಳ ಸಭೆ
ಬೆಳ್ತಂಗಡಿ; ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆ ಶನಿವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ ಮಾತನಾಡಿ ಯುವ ಕಾಂಗ್ರೆಸ್ ಅನ್ನು ಸಶಕ್ತವಾಗಿ ಸಂಘಟಿಸಬೇಕಾದ ಅಗತ್ಯತೆಯನ್ನು ತಿಳಿಸಿದರು ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷಸುದರ್ಶನ್ ಶೆಟ್ಟಿ ಅರಂಬೋಡಿಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷಎಸ್. ಕೆ ಹಕೀಮ್ ಕೊಕ್ಕಡಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಅಭಿನಂದನ್ ಹರೀಶ್ ಕುಮಾರ್, ಪ್ರವೀಣ್...
ಡಿ.ವೈ.ಎಫ್.ಐ ರಾಜ್ಯ ಸಮ್ಮೇಳನ ಧ್ವಜ ಸ್ತಂಭ ಮೆರವಣಿಗೆಗೆ ಚಾಲನೆ
ಮಂಗಳೂರು; ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ ಡಿವೈಎಫ್ಐ ಸಂಗಾತಿಗಳು ಅಪಾರ ಪ್ರಮಾಣದ ತ್ಯಾಗ ಬಲಿದಾನಗಳನ್ನು ಗೈದಿದ್ದಾರೆ. ನಮ್ಮ ದೇಹಗಳು ಛಿದ್ರವಾದರೂ ಸರಿಯೇ ದೇಶವನ್ನು ಛಿದ್ರಗೊಳ್ಳಲು ಡಿವೈಎಫ್ಐ ಸಂಗಾತಿಗಳಾದ ನಾವು ಬಿಡಲಾರೆವು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.ನಗರದ ಬಜಾಲ್ ಪ್ರದೇಶದಲ್ಲಿ ಡಿವೈಎಫ್ಐ ಹುತಾತ್ಮ ನಾಯಕ ಶ್ರೀನಿವಾಸ್ ಬಜಾಲ್ ಅವರು ಹುತಾತ್ಮರಾದ ಸ್ಥಳದಲ್ಲಿ ಪುಷ್ಪಾರ್ಪಣೆ ಮಾಡಿ, ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಧ್ವಜ ಸ್ಥಂಭ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಜನರಿಗೆ ವರ್ಷಕ್ಕೆರಡು ಕೋಟಿ ಉದ್ಯೋಗದ ಆಮೀಷವೊಡ್ಡಿ ದಶಕದಿಂದ...





