ಸುರತ್ಕಲ್ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆ
ಮಂಗಳೂರು, ಫೆ.28: ಎಸ್.ಎಸ್.ಎಲ್.ಸಿ ಪ್ರಿಪರೇಟರಿ ಪರೀಕ್ಷೆ ನಂತರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಪರೀಕ್ಷೆ ಬರೆದು ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯಶ್ವಿತ್ ಚಂದ್ರಕಾಂತ್, ನಿರೂಪ್, ಅನ್ವಿತ್ ಹಾಗೂ ರಾಘವೇಂದ್ರ ಮೃತ ದುರ್ದೈವಿಗಳು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸುರತ್ಕಲ್ ಪಟ್ಟಣದ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ವಿದ್ಯಾರ್ಥಿಗಳು ನಿನ್ನೆ ಎಸ್.ಎಸ್.ಎಲ್.ಸಿ...
ಕಲಾವಿದ ಮೌನವಾದರೆ ಸಮಾಜವೇ ಮೌನವಾದಂತೆ ಪ್ರಕಾಶ್ ರೈ
ಮಂಗಳೂರು; ನಾನು ಜನರ ಪಕ್ಷ ಯಾಕೆಂದರೆ ನಾನು ಕಲಾವಿದ. ಕಲಾವಿದನಾಗಿ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಿದೆ. ಕಲಾವಿದ ಮಾತನಾಡಬೇಕು, ಕಲಾವಿದ ಮೌನವದರೆ ಸಮಾಜವೇ ಮೌನವಾದಂತೆಹಾಗಾಗಿ ನಾನು ಮಾತನಾಡುತ್ತೇನೆ. ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಹೇಳಿದರು. ಮಂಗಳೂರಿನ ತೊಕ್ಕೂಟ್ಟಿನ ಯುನಿಟಿ ಹಾಲ್‌ನ ಮೈದಾನದಲ್ಲಿ ಫೆಬ್ರವರಿ 27 ರಂದು ನಡೆದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12 ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಪ್ರಕಾಶ್ ರೈ ಮಾತನಾಡಿದರು. ಆರ್‌ಎಸ್‌ಎಸ್, ಬಿಜೆಪಿ ಕಿಡ್ನಾಪ್ ಪಕ್ಷಗಳು. ಭಗತ್ ಸಿಂಗ್‌ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದರು....
ಹೊಸಂಗಡಿಯಲ್ಲಿ ಅಕ್ರಮ ಮರಳುಸಾಗಾಟ ಲಾರಿ ವಶಕ್ಕೆ
ಬೆಳ್ತಂಗಡಿ; ಹೊಸಂಗಡಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವೇಳೆ ವೇಣೂರು ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಾರಿಯಲ್ಲಿ ಚಾಲಕ ಕಾಶೀಪಟ್ಣ ನಿವಾಸಿ ವಸಂತ ಎಂಬಾತ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ವೇಣೂರು ಪೊಲೀಸರು ವಾಹನ ತಪಾಸಣೆಯ ವೇಳೆ ಕೆ.ಎ07 ಬಿ 5412 ಲಾರಿಯನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ. ಯಾವುದೋ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ಲಾರಿಯನ್ನು ಮರಳಿನ ಸಮೇತ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ; ಸೋಮಶೇಖರ ಶೆಟ್ಟಿ
ಉಜಿರೆ: ಜೀವನದಲ್ಲಿ ಸೋಲುಗಳು ಬರಬಹುದು, ಆದರೆ ಪ್ರಯತ್ನ ಕೈ ಬಿಡಬಾರದು ಪ್ರಯತ್ನ ಪಡುತ್ತಲೇ ಇದ್ದಾಗ ಸಕಾರಾತ್ಮಕ ಫಲಿತಾಂಶ ಬರುತ್ತದೆಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಶ್ರೀ ಸೋಮಶೇಖರ ಶೆಟ್ಟಿಯವರು ಅಭಿಪ್ರಾಯ ಪಟ್ಟರು. ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಎಸಿ ಮತ್ತು ಫ್ರಿಡ್ಜ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ವಿದ್ಯಾರ್ಥಿ ಜೀವನ ಯಾವಾಗಲೂ ನೆನಪಿನಲ್ಲಿ ಇರುವಂತಹ ಜೀವನ, ಒಳ್ಳೆಯ ಅಂಕಗಳು ಪಡೆಯುವುದರ ಜೊತೆಗೆ ಮೌಲ್ಯಗಳನ್ನೂ ಕೂಡ ಅಳವಡಿಸಿಕೊಳ್ಳಿ, ಮಾದಕ ದ್ರವ್ಯಗಳಿಂದ ದೂರ ಇರಿ, ರುಡ್‌ಸೆಟ್...
ಕರಾಯದಲ್ಲಿ ಸ್ಕೂಟರ್ ಅಪಘಾತ; ಗಾಯಾಳು ಸಾವು
ಬೆಳ್ತಂಗಡಿ; ಕರಾಯದಲ್ಲಿ ಸ್ಕೂಟರ್ ಸ್ಕಿಡ್ ಆಗಿ ಮಗುಚಿಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತ ವ್ಯಕ್ತಿ ಕರಾಯ ಗ್ರಾಮದ ನಿವಾಸಿ ನಾರಾಯಣ ನಾಯ್ಕ (79) ಎಂಬವರಾಗಿದ್ದಾರೆ. ಇವರು ಫೆ 25ರಂದು ತನ್ನ ಮಗ ಉದಯ ನಾಯ್ಕ ಎಂಬರ ಸ್ಕೂಟರ್ ನಲ್ಲಿ ರಾತ್ರಿಯ ವೇಳೆ ಪ್ರಯಾಣಿಸುತ್ತಿದ್ದಾಗ ಕರಾಯ ಗ್ರಾಮದ ಮರಿಪಾದೆ ಬಳಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಸವಾರ ಉದಯ ನಾಯ್ಕ ಹಾಗೂ ಅವರ ತಂದೆ ನಾರಾಯಣ ನಾಯ್ಕ ರಸ್ತೆಗೆ ಬಿದ್ದು ಗಂಭೀರ ಗಾಯಗಳಾಗಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಅವರನ್ನು ಮಂಗಳೂರಿನ...
ತೋಟತ್ತಾಡಿ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸಾವು
ಬೆಳ್ತಂಗಡಿ; ತೋಟತ್ತಾಡಿ ಗ್ರಾಮದ ಮೂರ್ಜೆ ಎಂಬಲ್ಲಿ ದ್ವಿಚಕ್ರವಾಹನ ಮಗುಚಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೃತ ಮಹಿಳೆ ನಾವೂರು ಗ್ರಾಮದ ನಿವಾಸಿ ಸಂಜೀವ ಎಂಬವರ ಪತ್ನಿ ಕಮಲ(45)ಎಂಬವರಾಗಿದ್ದಾರೆ.ಇವರು ದ್ವಿಚಕ್ರವಾಹನದಲ್ಲಿ ಸಹ ಸವಾರೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ತೋಟತ್ತಾಡಿ ಗ್ರಾಮದ ಮೂರ್ಜೆ ಎಂಬಲ್ಲಿಗೆ ಬಂದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಮಗುಚಿ ಬಿದ್ದಿದೆ. ಕಮಲ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭಿರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಈಕೆ ಸೋಮವಾರ ಮೃತಪಟ್ಟಿದ್ದಾರೆ.
ಕರಾವಳಿಗೆ ಚಲನೆಯನ್ನು ಕೊಟ್ಟವರು ಮಿಷನರಿಗಳು – ಪುರುಷೋತ್ತಮ ಬಿಳಿಮಲೆ
ಮಂಗಳೂರು; ಕರಾವಳಿಯಲ್ಲಿ ಇತಿಹಾಸ ಬರೆದವರಲ್ಲಿ ಪ್ರಮುಖ ಪಾತ್ರವನ್ನು ಬಿಎ ಸಾಲೆತ್ತೂರು, ಗೋವಿಂದ ಪೈ ಮೊದಲಾದವರುಗಳು ಹೊಂದಿದ್ದಾರೆ. ಆದರೆ ನಮ್ಮ ಕರಾವಳಿಯ ಇತಿಹಾಸವನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆ ಬಂದಾಗ ಅದರಲ್ಲಿ ಮೊದಲ ಸ್ಥಾನವನ್ನು ಪಡೆಯುವುದು ಬಾಸೆಲ್ ಮಿಷನರಿಗಳು. ಕರಾವಳಿಗೆ ಒಂದು ಚಲನೆಯನ್ನು ಕೊಟ್ಟವರು ಮಿಷನರಿಗಳು ಎಂದು ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.ಡಿವೈಎಫ್‌ಐನ 12 ನೇ ರಾಜ್ಯ ಸಮ್ಮೇಳನದ ಎರಡನೆಯ ದಿನ ನಡೆದ “ ಕರಾವಳಿ ಕಟ್ಟಿದ ಬಗೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಾರಂಪರಿಕತೆಯನ್ನು ಸಾರ್ವತ್ರಿಕಗೊಳಿಸಿದ ಕ್ರಾಂತಿ ಕರಾವಳಿಯಲ್ಲಿ...
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಭಾರತೀಯ ವೈಜ್ಞಾನಿಕ ಪರಂಪರೆ’ ರಾಷ್ಟ್ರೀಯ ವಿಚಾರ ಸಂಕಿರಣ
ಉಜಿರೆ, ಫೆ. 26: ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಫೆ. 26) ‘ಭಾರತೀಯ ವೈಜ್ಞಾನಿಕ ಪರಂಪರೆ’ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಿತು. ಕಾಲೇಜಿನ ಭೌತಶಾಸ್ತ್ರ, ಸಂಸ್ಕೃತ ಹಾಗೂ ಗಣಿತಶಾಸ್ತ್ರ ವಿಭಾಗಗಳ ವತಿಯಿಂದ, ಐಐಟಿ ಖರಗ್‌ಪುರದ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇಂಡಿಯನ್ ನಾಲೆಜ್ ಸಿಸ್ಟಮ್ಸ್ ಸಹಯೋಗದಲ್ಲಿ ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್-ಇಂಡಿಯನ್ ನಾಲೇಜ್ ಸಿಸ್ಟಮ್ (ಎಐಸಿಟಿಇ- ಐಕೆಎಸ್) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಶಿಕ್ಷಕರ ಸಂಘದ ಬೆಂಬಲದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ...
ಚಾರಣಕ್ಕೆ ಬಂದು ಅರಣ್ಯದಲ್ಲಿ ಸಿಲುಕಿಕೊಂಡ ಯುವಕ; ರಕ್ಷಿಸಿದ ಪೊಲೀಸರು
ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಬಂಡಾಜೆ ಫಾಲ್ಸ್ ನೋಡಲೆಂದು ಅರಣ್ಯಕ್ಕೆ ಬಂದಿದ್ದ ಚಾರಣಿಗರಲ್ಲಿ ಒರ್ವ ಯುವಕ ರಾತ್ರಿ ನಾಪತ್ತೆಯಾದ ಘಟನೆ ಸಂಭವಿಸಿದ್ದು ನಾಪತ್ತೆಯಾದ ಯುವಕನ್ನು ತಡ ರಾತ್ರಿ ಬಾಳೂರು ಪೊಲೀಸ್ ಠಾಣಾವ್ಯಾಪ್ತಿಯ ಬಲ್ಲಾಳ ರಾಯನ ದುರ್ಗದ ಸಮೀಪ ಪತ್ತೆಹಚ್ಚಿ ರಕ್ಷಿಸಲಾಗಿದೆ.ಚಾರಣಕ್ಕೆಂದು ಬಂದಿದ್ದ ಧನುಷ್ ಎಂಬಾತನೇ ನಾಪತ್ತೆಯಾದ ಯುವಕ, ಅರಣ್ಯದಲ್ಲಿ ಚಾರಣಕ್ಕೆ ಅವಕಾಶ ನಿರಾಕರಿಸಲಾಗಿದ್ದರು ಪೊಲೀಸ್ ಅಧಿಕಾರಿಯೊಬ್ಬರ ಶಿಫಾರಸ್ಸಿನ ಮೂಲಕ ಇವರು ಚಾರಣಕ್ಕೆ ಅವಕಾಶ ಪಡೆದುಕೊಡಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ಇವರು ಚಾರಣಕ್ಕೆ ಹೊರಟಿದ್ದು ಸಂಜೆಯ ವೇಳೆ ಗುಂಪಿನಿಂದ ಇಬ್ಬರು ತಪ್ಪಿಸಿಕೊಂಡಿದ್ದರು, ಬಳಿಕ...
ಮಂಗಳೂರು ಲೋಕಸಭಾ ಕ್ಷೇತ್ರದ ಇತಿಹಾಸ, ಒಂದು ಅವಲೋಕನ
MPs from Mangalore, Mangalore's first MP ಮತ್ತೊಂದು ಲೋಕಸಬಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಿದ್ದವಾಗುತ್ತಿದೆ. 1952 ರಲ್ಲಿ ಜಿಲ್ಲೆ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದಾಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು ಅಂದು ಕಾಸರಗೋಡನ್ನು ತನ್ನ ವ್ಯಾಪ್ತಿಗೆ ಒಳಗೊಂಡಿತ್ತು. ಬಳಿಕ ಹಲವು ಬದಲಾವಣೆಗಳನ್ನು ಕಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿ ರೂಪಗೊಂಡಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರ ಬಳಿಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಗೊಂಡಿತ್ತು. ಕಾಂಗ್ರೆಸ್...





