ಬೆಳ್ತಂಗಡಿ; ನಕ್ಸಲ್ ಮುಕ್ತ ಹೋರಾಟಕ್ಕೆ ಅನೇಕ ರಾಜ್ಯಗಳು ಶ್ರಮಿಸಿವೆ. ನಕ್ಸಲ್ ಹೋರಾಟವನ್ನು ತಡೆಯಲು ಯತ್ನಿಸಿವೆ. ಈ ಪ್ರಯತ್ನದಲ್ಲಿ, ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಉದ್ದೇಶ ಈಡೇರಿದೆ. ಇದೀಗ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರು ಮಂದಿ ನಕ್ಸಲ್ ಹೋರಾಟಗಾರರಾದ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ರಾಯಚೂರಿನ ಮಾರೆಪ್ಪ ಅರೋಲಿ ಸರ್ಕಾರದ ಎದುರು ತಮ್ಮ ವಸ್ತ್ರಗಳನ್ನು ಒಪ್ಪಿಸಿದ್ದು. ಪ್ರಜಾತಾಂತ್ರಿಕ ಹೋರಾಟ ನಡೆಸಲು ಮುಖ್ಯವಾಹಿನಿಗೆ ಬಂದಿದ್ದಾರೆ. ಈ ನಕ್ಸಲ್ ಹೋರಾಟಗಾರರಿಗೆ
ಗುಲಾಬಿ ಹೂವು ಕೊಟ್ಟು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸರ್ಕಾರದ ಮುಂದೆ ಶರಣಾಗಿರುವ ಆರು ಮಂದಿ ನಕ್ಸಲ್ ಹೋರಾಟಗಾರರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ. ಕಾನೂನು ಪ್ರಕಾರ ಅವರಿಗೆ ಪರಿಹಾರ ಕೊಡುತ್ತೇವೆ. ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ತರುವ ಪ್ರಯತ್ನ ಮಾಡಿದ್ದೇವೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ಕೊಡಲಿದೆ” ಎಂದು ಹೇಳಿದ್ದಾರೆ.

“ಅನ್ಯಾಯದ ವಿರುದ್ಧ ಅವರ ಹೋರಾಟ ಮುಂದುವರಿಯಲಿ. ಸಂವಿಧಾನ ಪ್ರಕಾರ ಹೋರಾಟ ನಡೆಸಲಿ. ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಉದ್ದೇಶ ಈಡೇರಿದೆ. ನಕ್ಸಲ್ ಮುಕ್ತ ಹೋರಾಟಕ್ಕೆ ಅನೇಕ ರಾಜ್ಯಗಳು ಶ್ರಮಿಸಿವೆ.
ಶರಣಾಗತಿ ಆಗಲು ಮುಂದೆ ಬಂದಿರುವ ಆರು ನಕ್ಸಲೀಯರ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಲಿದೆ. ಅವರ ವಿರುದ್ಧದ ಪ್ರಕರಣಗಳ ತನಿಖೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.