
ಬೆಳ್ತಂಗಡಿ; ಲಾಯಿಲ ಗ್ರಾಮದ ಒಂದನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ , ಯುವ ನಾಯಕ ರೋಹಿತ್ ರಾಯನ್ ಡಿಸೋಜ(38) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಅವಿವಾಹಿತರಾಗಿದ್ದು , ಪಿಡ್ಲೂಡಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ದಿವಂಗತ ಅಲ್ಪೋನ್ಸ್ ಡಿಸೋಜ ಅವರ ಪುತ್ರ. ಮೃತರು ಸಹೋದರಿ , ವಿದೇಶದಲ್ಲಿ ಉದ್ಯೋಗದಲ್ಲಿರುವ ರೇಷ್ಮಾ ಡಿಸೋಜ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
