
ಬೆಳ್ತಂಗಡಿ : ಗ್ಯಾರೇಜ್ ನಲ್ಲಿ ರಿಪೇರಿಗೆ ಇರಿಸಿದ್ದ ಓಮಿನಿ ಕಾರನ್ನು ಮೆಕ್ಯಾನಿಕ್ ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ಘಟನೆ ಬೆಳ್ತಂಗಡಿಯಲ್ಲಿ ಅ.22 ರಂದು ರಾತ್ರಿ ನಡೆದಿದೆ.
ಬೆಳ್ತಂಗಡಿ ನಗರದ ಕಲ್ಲಗುಡ್ಡೆ ರಸ್ತೆಯಲ್ಲಿ ಅ.22 ರಂದು ರಾತ್ರಿ ಓಮಿನಿ ಕಾರನ್ನು ಬೆಳ್ತಂಗಡಿ ಗ್ಯಾರೇಜಿನ ಮ್ಯಾಕ್ಯಾನಿಕ್ ಚಲಾಯಿಸಿಕೊಂಡು ಹೋಗುವಾಗ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಈ ವೇಳೆ ಓಮಿನಿ ಕಾರು ಚರಂಡಿಗೆ ಬಿದ್ದಿದೆ. ಚಾಲಕ ಕಾರಿನಿಂದ ಹೊರಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಾರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ನಿವಾಸಿ ಗೀತಾ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು, ರಿಪೇರಿಗಾಗಿ ಬೆಳ್ತಂಗಡಿಯ ಲಾಯಿಲದ ಗ್ಯಾರೇಜ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
