ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ವಜಾ, ಆಡಳಿತಾಧಿಕಾರಿ ನೇಮಿಸಿ ಆದೇಶ

0

ಬೆಳ್ತಂಗಡಿ: ಕಳೆದ ಏಳು ತಿಂಗಳುಗಳಿಂದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯುತ್ತಿದ್ದ ಜಟಾಪಟಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ವಿಶೇಷಾಧಿಕಾರಿಯನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ. ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಕೆಲ ನಿರ್ದೇಶಕರುಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಸದಸ್ಯರು 2023ರ ನವೆಂಬರ್ 29ರಂದು ಸಂಘದ ಎದುರು ಪ್ರತಿಭಟನೆಯನ್ನು ನಡೆಸಿದ್ದು,...

ಮಾಚಾರಿನಲ್ಲಿ ಭೀಕರ ಅಪಘಾತ ಬೈಕ್ ಸವಾರ ಪವಾಡ ಸದೃಶ ಪಾರು

0

ಬೆಳ್ತಂಗಡಿ; ಬೆಳಾಲು ಉಜಿರೆ ರಸ್ತೆಯಲ್ಲಿ ಮಾಚಾರು ಸಮೀಪ ಬೈಕ್ ಹಾಗೂ ಕಾರಿನ ನಡುವೆ ಇಂದು ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಎರಡು ತುಂಡಾಗಿ ಬಿದ್ದಿದೆ. ಆದರೆ ಬೈಕಿನಲ್ಲಿದ್ದವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ‌. ಅಪಘಾತದ ವೇಳೆ ಬೈಕ್ ಸವಾರ ಬೈಕಿನಿಂದ ಎಸೆಯಲ್ಪಟ್ಟಿದ್ದು ರಸ್ತೆಬದಿಗೆ ಬಿದ್ದಿದ್ದಾರೆ. ಆದರೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ. ಕಾರಿಗೂ ಹಾನಿಯಾಗಿದ್ದು ಕಾರಿನಲ್ಲಿದ್ದವರೂ ಅಪಾಯದಿಂದ ಪಾರಾಗಿದ್ದಾರೆ.

ನೂರುಲ್ ಹುದಾ ದರ್ಸ್ ಉಳ್ತೂರು ಪ್ರಾರಂಭೋತ್ಸವ

0

ಬೆಳ್ತಂಗಡಿ; ವೇಣೂರುಸಮೀಪದ ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿರುವ ನೂರುಲ್ ಹುದಾ ದರ್ಸ್ ಇದರ 2024-25ನೇ ಸಾಲಿನ ಪ್ರಾರಂಭೋತ್ಸವ ದಿನಾಂಕ 29/04/2024 ರಂದು ಬಹು ಸಾದಾತ್ ತಂಙಳ್ ನೇತೃತ್ವದಲ್ಲಿ ನಡೆಯಿತುದರ್ಸ್ ವಿದ್ಯಾರ್ಥಿಗಳಿಗೆ ಉಪದೇಶ ನೀಡಿ ಬಹು ಸಾದಾತ್ ತಂಙಳ್ ಪ್ರಾರ್ಥನೆಯೊಂದಿಗೆ ದರ್ಸ್ ಪ್ರಾರಂಭಿಸಿದರು ಕಾರ್ಯಕ್ರಮದಲ್ಲಿ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಉಳ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು

ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿಲ್ಲ ಕುಮಾರಸ್ವಾಮಿಯವರ ಕುಟುಂಬದಕುಡಿಯೇ ದಾರಿ ತಪ್ಪಿದ್ದಾನೆ; ರಕ್ಷಿತ್ ಶಿವರಾಂ ಆರೋಪ

0

ಬೆಳ್ತಂಗಡಿ; ಹಾಸನದ ಹಾಲಿ ಸಂಸದ , ಬಿಜೆಪಿ , ಜೆಡಿಎಸ್ ಮೈತ್ರಿ ಕೂಟದ ಲೋಕಸಭಾ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ನಡೆಸಿದ ಜಗತ್ತಿನ ಅತ್ಯಂತ ದೊಡ್ಡ ಲೈಂಗಿಕ ಹಗರಣದ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್.ಐ.ಟಿ ನೇಮಕ ಮಾಡಿರುವುದು ಸ್ವಾಗತರ್ಹ. ಭೇಟಿ ಬಚಾವೋ , ಭೇಟಿ ಪಡಾವೋ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನವಹಿಸುವ ಮೂಲಕ ನಕಲಿತನ ಪ್ರದರ್ಶಿಸುತ್ತಿದ್ದಾರೆ. ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ. ಮಹಿಳೆಯರನ್ನು ಮಾತೆ , ದೇವತೆ ಎಂದೇಳುವ ಬಿಜೆಪಿಗರು ಈ ಲೈಂಗಿಕ ದೌರ್ಜನ್ಯ, ಹಿಂಸೆಯ...

ಕಡಿರುದ್ಯಾವರ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣದ ಆರೋಪ, ಕಾಮಗಾರಿ ತಡೆದ ಗ್ರಾಮಸ್ಥರು

0

ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆಗೆ ನಿರ್ಮಾಣವಾಗುತ್ತಿದ್ದ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಘಟನೆ ಬುಧವಾರ ನಡೆದಿದೆ.ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆ ನಡಿವೆ ಸುಮಾರು 200 ಮೀ.ಕಾಂಕ್ರೀಟ್ ರಸ್ತೆಗೆ ಜಿ.ಪಂ. ನಿಧಿಯಿಂದ ಸುಮಾರು 10 ಲಕ್ಷ ರೂ. ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ಸ್ಕಿಡ್ಡರ್ ಅಳವಡಿಸದೆ ನಿರ್ಮಿಸಿದ್ದಾರೆ. ಇದರಿಂದ ರಸ್ತೆ ಒಂದು ವರ್ಷವೂ ಬಾಳಿಕೆ ಬರುವುದಿಲ್ಲ. ಸಮರ್ಪಕವಾಗಿ ಕಾಂಕ್ರೀಟ್ ಒಳಗಡೆ ಸೇರಿಕೊಳ್ಳಲು ಇದರ ಅವಶ್ಯಕತೆಯಿದೆ. ಈ ವಿಧಾನ ಅಳವಡಿಸದಿರುವ ಕುರಿತು ಗ್ರಾಮಸ್ಥರು...

ಕಳೆಂಜದಲ್ಲಿ ಮನೆಗೆ ನುಗ್ಗಿ ತಾಯಿ ಮಗನ ಮೇಲೆ ಹಲ್ಲೆ ಪ್ರಕರಣ‌ ದಾಖಲು

0

ಕಳೆಂಜ; ತಾಲೂಕಿನ ಕಳೆಂಜದಲ್ಲಿ ತಂಡವೊಂದು ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಳೆಂಜ ಗ್ರಾಮದ ನಿವಾಸಿ ಸೇಸಮ್ಮ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಎ.30ರಂದು ರಾತ್ರಿ ತನ್ನ ಮನೆಯಲ್ಲಿ ಪೂಜಾ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಅವರ ಸಂಬಂಧಿಕರೇ ಆದ ಯೋಗೀಶ್, ಆನಂದ ಬೀಜದಡಿ, ಶೇಖರ್, ಆನಂದ ಕುಲಾಡಿ, ಅಣ್ಣು ಗೌಡ, ಹರೀಶ್ ಹಾಗೂ ಇತರರು ಮನೆ ಬಳಿ ಬಂದು ಸೇಸಮ್ಮ ಅವರ ಮಗ ಹರೀಶ್...

ಧರ್ಮಸ್ಥಳ; ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿ ವಿರುದ್ದ ಪ್ರಕರಣ ದಾಖಲು

0

ಧರ್ಮಸ್ಥಳ; ಧರ್ಮಸ್ಥಳ ಗ್ರಾಮದ ಕೆಂಬರ್ಜೆ ಎಂಬಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಶ್ರೀಧರ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಯಾವುದೇ ಪರವಾನಿಗೆಯಿಲ್ಲದೆ ಪಟ್ರಮೆ ಹೊಳೆಯಿಂದ ಮರಳನ್ನು ತೆಗೆದು ರಾಶಿ ಹಾಕುತ್ತಿದ್ದ ಬಗ್ಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಾರು 40ಬುಟ್ಟಿಯಷ್ಟು ಮರಳನ್ನು ಸಂಗ್ರಹಿಸಿರುವುದು ಕಂಡು ಬಂದಿದ್ದು ಈ ಬಗ್ಗೆ ಆರೋಪಿ ಶ್ರೀಧರ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಿ ಮೋದಿಗೆ ಸಿದ್ದರಾಮಯ್ಯ ಪತ್ರ

0

ಬೆಂಗಳೂರು; ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ವಿಡಿಯೊ ಹಗರಣ ಗೊತ್ತಿದ್ದರೂ ನೀವು ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು ಎಂದು ಕಿಡಿಕಾರಿದ್ದಾರೆ. ಆರೋಪಿ ಪ್ರಜ್ವಲ್ ರೇವಣ್ಣ ಭಾರತದಲ್ಲಿ ವಿಚಾರಣೆ ಎದುರಿಸಬೇಕು. ಹೀಗಾಗಿ ಕೂಡಲೇ...

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ; ವೈವಾಹಿಕ ಜೀವನ ಪ್ರವೇಶಿಸಿದ 123ಜೋಡಿ

0

ಬೆಳ್ತಂಗಡಿ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೆಯ ವರ್ಷದ ಸಾಮೂಹಿಕ ವಿವಾಹ ಬುಧವಾರ ಸಂಜೆ 6.45ರ ಗೋಧೂಳಿ ಲಗ್ನದಲ್ಲಿ ಸಂಭ್ರಮದಿಂದ ನಡೆಯಿತು.ನಾಡಿನ ವಿವಿಧ ಭಾಗಗಳ 123ಮಂದಿ ವಧು ವರರು ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಸ್ವೀಕರಿಸಿ ವೈವಾಹಿಕ ಜೀವನವನ್ನು ಪ್ರವೇಶಿಸಿದರು. ವಧು ವರೆನ್ನು ಆಶೀರ್ವದಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಧರ್ಮಸ್ಥಳ ದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಪವಿತ್ರವಾದ ಕಾರ್ಯ ಎಂದು ಭಾವಿಸಿ ಬರುತ್ತಿದ್ದಾರೆ.ಅಂತರ್ಜಾತಿ ವಿವಾಹಗಳೂ ಆಗುತ್ತಿದೆ. ಇದು ಉತ್ತಮವಿಚಾರ...

ಮೇದಿನ ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನ — ಮುನೀರ್ ಕಾಟಿಪಳ್ಳ

0

ಬೆಳ್ತಂಗಡಿ; ಮೇದಿನ ಎಲ್ಲಾ ದಿನದಂತಲ್ಲ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾದ ದುಡಿಯುವ ಜನರ ದಿನವಾಗಿದ್ದು, ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನವೇ ಈ ಮೇದಿನ ಎಂದು ಸಿಪಿಐ(ಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಹೇಳಿದರು.ಅವರು ಇಂದು ಬೆಳ್ತಂಗಡಿಯ ಜಮಾಯಿತುಲ್ ಫಲಾಹ್ ಸಭಾ ಭವನದಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಮೇದಿನಾಚರಣೆಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕಾರ್ಮಿಕ ವರ್ಗದ ತ್ಯಾಗ ಬಲಿದಾನಗಳಿಂದ ಕೆಂಬಾವುಟ ಹಿಡಿದು ತಂದ ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತೆಸೆಯುತ್ತಾ ಇರುವ ಕೇಂದ್ರದ ಬಿಜೆಪಿ...