ನಿವೃತ್ತ ಸೈನಿಕ ಗಣೇಶ್ ಬಿ.ಎಲ್ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ
ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 21ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಗೊಂಡು ಬೆಳ್ತಂಗಡಿ ಗೆ ಆಗಮಿಸಿದ ಲಾಯಿಲದ ಗಣೇಶ್ ಬಿ.ಎಲ್ ಅವರಿಗೆ ಶನಿವಾರ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು.ಬೆಳಿಗ್ಗೆ ಕುತ್ಯಾರು ದೇವಸ್ಥಾನದಿಂದ ತೆರೆದ ವಾಹನದಲ್ಲಿ ಗಣೇಶ್ ಬಿಎಲ್. ಅವರನ್ನು ಕರೆತರಲಾಯಿತು.ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಅಭಿನಂದಬಾ ಸಭೆ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮರಾಠಿ ಸಂಘದ ಮುಖಂಡ ಉಮೇಶ್ ಕೇಳ್ತಡ್ಕದೇಶಸೇವೆ ಎನ್ನುವುದು ಸುಲಭವಾದ ಕೆಲಸವಲ್ಲ. ಅಲ್ಲಿ ತುಂಬಾ ತ್ಯಾಗ ಇರುತ್ತದೆ. ಅವರ ತ್ಯಾಗವನ್ನು ನಾವು ಗುರುತಿಸಿ...
ಸವಣಾಲು ದೇವಸ್ಥಾನದ ಅರ್ಚಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸವಣಾಲುಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರ್ಸಿ ಮೂಲದ ವಿಜಯ್ ಭಟ್ (29ವ) ಎಂಬವರು ದೇವಸ್ಥಾನದ ಹಿಂಬಾಗದಲ್ಲಿ ತಾನು ವಾಸವಾಗಿದ್ದ ಮನೆಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4 ರಂದು ನಡೆದಿದೆ. ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಮೂರು ತಿಂಗಳ ಮಗು ಕೂಡ ಇದೆ. ಅವರು ವಾಸವಿದ್ದ ಕೊಠಡಿಯಲ್ಲಿ ಒಬ್ಬರೇ ಇದ್ದು, ದೇವಸ್ಥಾನಕ್ಕೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಮೇ 4ರಂದು ಅರ್ಚಕರು ಬಂದಿರಲಿಲ್ಲ. ಕ್ಷೇತ್ರಕ್ಕೆ ಬಂದ ಭಕ್ತರು ಅರ್ಚಕರನ್ನು...
ಕಾಜೂರು ಉರೂಸ್ ಗೆ ಸಂಭ್ರಮದ ಚಾಲನೆ
ಬೆಳ್ತಂಗಡಿ: ನಮ್ಮ ವಸ್ರ್ತಧಾರಣೆ ಮತ್ತು ನಮ್ಮ ಬಾಹ್ಯ ಸೌಂದರ್ಯ ದ ಮೇಲೆ ಅಲ್ಲಾಹನ ನೋಟ ಇರುವುದಲ್ಲ. ಅವನ ನೋಟ ನಮ್ಮ ಪರಿಶುದ್ಧ ಅಂತರ್ ಮನಸಿನ ಮೇಲೆ. ಆದ್ದರಿಂದ ಪರಸ್ಪರ ಅಸೂಯೆ ಇಲ್ಲದ, ದ್ವೇಷ ಹಗೆತನವಿಲ್ಲದ, ಅಹಂಕಾರವಿಲ್ಲದ, ಶುದ್ಧ ಹೃದಯಿಗಳಾಗೋಣ. ಆ ಮೂಲಕ ಅವನ ಇಷ್ಟದಾಸರಾದ ಔಲಿಯಾಗಳ ಕೃಪೆ ಪಡೆಯೋಣ. ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.ಕಾಜೂರು ದರ್ಗಾ ಶರೀಫ್‌ನಲ್ಲಿ ಮೇ.3 ರಂದು ನಡೆದ ಉರೂಸ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.ಉದ್ಘಾಟನೆಯನ್ನು...
ಧರ್ಮಸ್ಥಳ; ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಕೆರೆಗೆ ಬಿದ್ದು ಸಾವು
ಧರ್ಮಸ್ಥಳ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಟವಾಡುತ್ತಾ ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಮೇ 2ರಂದು ಧರ್ಮಸ್ಥಳದ ಮುಳ್ಳಿಕಾರ್‌ನಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿ ಮನೆ ನಿವಾಸಿ ಜಗದೀಶ್ ಎಂಬವರ ಪುತ್ರ ಪ್ರಣಿತ್ ಕುಮಾರ್ (1ವರ್ಷ 9 ತಿಂಗಳು)ಈ ದುರ್ಘಟನೆಯಲ್ಲಿ ಮೃತಪಟ್ಟ ಮಗು. ಜಗದೀಶ್ ಅವರ ಪತ್ನಿ ಪ್ರತಿ ದಿನ ತೋಟಕ್ಕೆ ನೀರು ಬಿಡಲೆಂದು ಸಂಗ್ರಹಿಸಿರುವ ಕೆರೆಗೆ ಬಟ್ಟೆ ತೊಳೆಯಲು ಹೋಗುತ್ತಿದ್ದು ಆ ಸಮಯ ಪುತ್ರ ಪ್ರಣಿತ್ ಕುಮಾರ್‌ನನ್ನು ಆಗಾಗ ಕೆರೆಯ ಬಳಿ ಕರೆದುಕೊಂಡು ಹೋಗುತ್ತಿದ್ದರು. ಪ್ರಣಿತ್ ಕೆರೆಯ...
ವಾಣಿ ಕಾಲೇಜಿನ ಉಪನ್ಯಾಸಕ ನಂದಕುಮಾರ್ ನಿಧನ
ಬೆಳ್ತಂಗಡಿ: ಹಲವು ಸಮಯದಿಂದ ದೊಡ್ಡ ಕರಳು ಹಾಗೂ ಮೇದೋಜಿರಕ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ವಾಣಿ ಕಾಲೇಜಿನ ಉಪನ್ಯಾಸಕ ನಂದಕುಮಾರ್(40) ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪುದುವೆಟ್ಟು ಗ್ರಾಮದ ಎಷ್ಟೋಡು ಶೇಖರ ಗೌಡರ ಪುತ್ರ ನಂದಕುಮಾರ್ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.ಅವರು ಪತ್ನಿ ದಿವ್ಯಾ ನಂದಕುಮಾರ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಕೇಶದಾನದ ಮೂಲಕ ಮಾದರಿಯಾದ ಭುವನೇಶ್ ಗೇರುಕಟ್ಟೆ
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜಿಲ್ಲಾ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಅವರು ಇತರರಿಗೂ ಮಾದರಿಯಾಗಿದ್ದಾರೆ. ಭುವನೇಶ್ ಗೇರುಕಟ್ಟೆ ಅವರು ಕಳೆದ ಕೆಲವು ವರ್ಷಗಳಿಂದ ಉದ್ದ ಕೂದಲು ಅನ್ನು ಬೆಳೆಸಿಕೊಂಡಿದ್ದ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತಮ್ಮ ಕೇಶದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ನೇತ್ರದಾನಕ್ಕೂ ಮುಂದಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಗುರುವಾಯನಕೆರೆಯಲ್ಲಿ ಬೈಕ್ ಅಪಘಾತ ಸವಾರನಿಗೆ ಗಂಭೀರ ಗಾಯ
ಗುರುವಾಯನಕೆರೆ: ಗುರುವಾಯನಕೆರೆಯ ಜೈನ್ ಪೇಟೆಯ ತಿರುವು ರಸ್ತೆಯಲ್ಲಿ ರಾತ್ರಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಬೈಕ್ ಸವಾರ ಗೇರುಕಟ್ಟೆ ನಿವಾಸಿ ಶಿವಶಂಕರ್ ಎಂದು ತಿಳಿದು ಬಂದಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೇ 4ರಂದು 22ಮಕ್ಕಳಿಗೆ ಪವಿತ್ರ ಪರಮ ಪ್ರಸಾದ
ಬೆಳ್ತಂಗಡಿ : ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೇ 4ರಂದು 22ಮಕ್ಕಳಿಗೆ ಪವಿತ್ರ ಪರಮ ಪ್ರಸಾದ ನಡೆಯಲಿದೆ ಎಂದು ಧರ್ಮಗುರುಗಳು ಹಾಗೂ ಚರ್ಚ್ ಆಡಳಿತ ಮಂಡಳಿ ತಿಳಿಸಿದೆ. ಅತ್ಯಂತ ಸಂಭ್ರಮದಿಂದ ನಡೆಯುವ ಪರಮಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಆಗ್ನೆಸ್ ಮರಿಯ,ಅನ್ನಾ ಮರಿಯಾ,ಲಿಯಾನಾ ರೋಸ್ಲಿನ್, ಕ್ರಿಸ್ ಗ್ರೇಸ್, ಎಲಿಜಬೇತ್, ಜ್ವೆಲ್ ಕ್ರಿಸ್ಟೀನಾ ಆ್ಯಂಜಲ್, ರೋಸಾ, ಅನ್ನಮ್ಮಾ, ಲಜ್ಮಿ, ಫೆಬಾ ಮರಿಯಾ, ಜೋನಾಥ್, ಶೋನ್, ಡೆಲ್ವಿನ್, ಎಲೈಟ್ ಅಬ್ರಹಾಂ, ಅಲ್ಫೋನ್ಸ್ ಸೆಬಾಸ್ಟಿಯನ್, ಜೀವನ್ ರಾಯ್ ಅವರು ಪರಮಪ್ರಸಾದ ಸ್ವೀಕರಿಸಲಿದ್ದಾರೆ.
ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಚುನಾವಣಾ ಕಣಕ್ಕೆ
ಬೆಳ್ತಂಗಡಿ; ರಾಹುಲ್ ಗಾಂಧಿ ಅವರು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಉತ್ತರಪ್ರದೇಶ ಚುನಾವಣೆಯಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.ಗಾಂಧೀ ಕುಟುಂಬದ ಕ್ಷೇತ್ರವಾಗಿದ್ದ ರಾಯ್ ಬರೇಲಿಯನ್ನು ಈ ಹಿಂದೆ ಸೋನಿಯಾ ಗಾಂಧಿಯವರು ಪ್ರತಿನಿಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸಂಸದರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದರು. ಇದೀಗ ರಾಹುಲ್ ಅವರು ಎರಡನೆಯ ಕ್ಷೇತ್ರವಾಗಿ ರಾಯ್ ಬರೇಲಿಯಲ್ಲಿಯೂ ಕಣಕ್ಕೆ ಇಳಿಯಲಿದ್ದಾರೆ ಎಂದು ಕಾಂಗ್ರೆಸ್...
ಆರು ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ
ಬೆಂಗಳೂರು : ರಾಜ್ಯ ವಿಧಾನಪರಿಷತ್‌ನ 6 ಸ್ಥಾನಗಳಿಗೆ ಆಯೋಗವು ಚುನಾವಣೆಯನ್ನು ಘೋಷಣೆ ಮಾಡಿದ್ದು, 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟನೆ ತಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಮೇ.16 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ.20 ಕೊನೆಯ ದಿನವಾಗಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನಿಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.














