
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸವಣಾಲು
ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರ್ಸಿ ಮೂಲದ ವಿಜಯ್ ಭಟ್ (29ವ) ಎಂಬವರು ದೇವಸ್ಥಾನದ ಹಿಂಬಾಗದಲ್ಲಿ ತಾನು ವಾಸವಾಗಿದ್ದ ಮನೆಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4 ರಂದು ನಡೆದಿದೆ.
ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಮೂರು ತಿಂಗಳ ಮಗು ಕೂಡ ಇದೆ. ಅವರು ವಾಸವಿದ್ದ ಕೊಠಡಿಯಲ್ಲಿ ಒಬ್ಬರೇ ಇದ್ದು, ದೇವಸ್ಥಾನಕ್ಕೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಮೇ 4ರಂದು ಅರ್ಚಕರು ಬಂದಿರಲಿಲ್ಲ. ಕ್ಷೇತ್ರಕ್ಕೆ ಬಂದ ಭಕ್ತರು ಅರ್ಚಕರನ್ನು ಕರೆಯಲು ರೂಮಿನ ಬಳಿ ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣ ನಿಗೂಡವಾಗಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.