ಇತ್ತೀಚೆಗೆ ನಿಧನರಾದ ವಸಂತ ಬಂಗೇರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ

0

ಬೆಳ್ತಂಗಡಿ: ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೇ 18 ರಂದು ಸಂಜೆ ಇತ್ತಿಚೇಗಷ್ಟೇ ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಬೆಳ್ತಂಗಡಿಯ ಹಳೆಕೋಟೆ ಮನೆಗೆ ಭೇಟಿ ನೀಡಿ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು."ನನ್ನ ತಂದೆ ಬಂಗಾರಪ್ಪ ಅವರಂತೆ ವಸಂತ ಬಂಗೇರ ಅವರು ಕೂಡಾ ನೇರ ನಡೆನುಡಿಯ ವ್ಯಕ್ತಿಯಾಗಿದ್ದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಅನುಭವವನ್ನು ಹೊಂದಿದ್ದರು. ಅವರ ನಿಧನರಾದ ದಿನ ಅನಿವಾರ್ಯ ಕಾರಣಗಳಿಂದ ನನಗೆ...

ನಗರದಲ್ಲಿ ಅಪರಿಚಿತ ವಾಹನ ಡಿಕ್ಕಿಹೊಡೆದು ನವಿಲು ಸಾವು

0

ಬೆಳ್ತಂಗಡಿ; ನಗರದ ಚರ್ಚ್ ರೋಡ್ ಸಮೀಪದ ಕಲ್ಲಗುಡ್ಡೆ ಎಂಬಲ್ಲಿರಾಷ್ಟ್ರೀಯ ಪಕ್ಷಿ ನವಿಲು ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ರಸ್ತೆಬದಿಯಲ್ಲಿ ನವಿಲು ಸತ್ತು ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು , ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಪರಿಸರದಲ್ಲಿ ನವಿಲುಗಳ ಓಡಾಟ ಹೆಚ್ಚಾಗಿದ್ದು ಯಾವುದೋ ವಾಹನ ಡಿಕ್ಕಿಹೊಡೆದು ನವಿಲು ಸತ್ತಿರಬಹುದು ಎಂದು ಅನುಮಾನಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವಸಂತ ಬಂಗೇರರಿಗೆ ನುಡಿ ನಮನ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಜಿ ಶಾಸಕ ಕೆ. ವಸಂತ ಬಂಗೇರರಿಗೆ ಮೇ 18ರಂದು ರಂದು ನುಡಿ ನಮನ ಕಾರ್ಯಕ್ರಮ ಪತ್ರಿಕಾ ಭವನದಲ್ಲಿ ನಡೆಯಿತು. ಪತ್ರಕರ್ತರ ಸಂಘದಅಧ್ಯಕ್ಷ ಚೈತ್ರೇಶ್ ಇಳಂತಿಲ, ಕಾರ್ಯದರ್ಶಿ ಗಣೇಶ್ ಶಿರ್ಲಾಲ್, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಜತೆ ಕಾರ್ಯದರ್ಶಿ ಮನೋಹರ ಬಳಂಜ, ಸದಸ್ಯರಾದ ಶ್ರೀನಿವಾಸ ತಂತ್ರಿ, ಬಿ. ಎಸ್. ಕುಲಾಲ್, ಪ್ರಸಾದ್ ಶೆಟ್ಟಿ ನುಡಿ ನಮನ ಸಲ್ಲಿಸಿದರು, ಸದಸ್ಯರಾದ ಜಾರಪ್ಪ ಪೂಜಾರಿ ಬೆಳಾಲು, ಅರವಿಂದ ಹೆಬ್ಬಾರ್, ಹೃಷಿಕೇಶ್ ಧರ್ಮಸ್ಥಳ, ಅಚುಶ್ರೀ ಬಾಂಗೇರು...

ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

0

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಕನ್ನಯ್ಯ ಕುಮಾರ್, ಶುಕ್ರವಾರ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಅವರ ಮೇಲೆ ಹಲ್ಲೆ ನಡೆದಿದೆ. ಮಾಲಾರ್ಪಣೆ ಮಾಡುವ ನೆಪದಲ್ಲಿ ಅವರನ್ನು ಸಮೀಪಿಸಿರುವ ಕೆಲವು ದುಷ್ಕರ್ಮಿಗಳು, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.ದುಷ್ಕರ್ಮಿಗಳು ಆಮ್ ಆದ್ಮಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಗೌರವ್ ಶರ್ಮ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ಕುರಿತು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಕನ್ನಯ್ಯ ಕುಮಾರ್ ಅವರು ಬಿಜೆಪಿ ಅಭ್ಯರ್ಥಿ...

ಭಾರತ್ ಬೀಡಿ ಕಂಪೆನಿ ವಿರುದ್ದ ಹೋರಾಟ; ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ಕಾರ್ಮಿಕರು

0

ಬೆಳ್ತಂಗಡಿ; ನಗರದ ಭಾರತ್ ಬೀಡಿ ಕಂಪೆನಿಯ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಗುತ್ತಿಗೆದಾರರು ಎರಡು ದಿನಗಳ ಕಾಲ ರಾತ್ರಿ ಹಗಲು ನಡೆಸಿದ ಮುಷ್ಕರ ಶುಕ್ರವಾರ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.ಮಂಗಳೂರಿನಲ್ಕಿ ಸಹಯಕ ಕಾರ್ಮಿಕ ಆಯುಕ್ತರು ಹೋರಾಟಗಾರರು ಹಾಗೂ ಕಂಪೆನಿಯ ಮಾಲಕರೊಂದಿಗೆ ಕರೆದಿದ್ದ ಸಂಧಾನ ಸಭೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕಂಪೆನಿ‌ ಮುಚ್ಚಬಾರದು ಎಂದು ಸರಕಾರದ‌ ಪರವಾಗಿ ನಾನು ನಿಮಗೆ ಹೇಳಬಯಸುತ್ತೇನೆ ಎಂದು ಎ.ಎಲ್.ಸಿ. ಮಾಲಕರಿಗೆ ಹೇಳಿದರು. ಈ ಬಗ್ಗೆ ಉತ್ತರಿಸಿದ ಕಂಪೆನಿ ಮಾಲಕರು ಮುಂದಿನ ಗುರುವಾರದ ಒಳಗಾಗಿ ಈ ಬಗ್ಗೆ ಚರ್ಚಿಸಿ...

ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು; ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲು

0

ಬೆಳ್ತಂಗಡಿ: ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅಂತುಬಾಯಮ್ಮ ಎಂಬವರೇ ಚಿನ್ನಾಭರಣ ನಗದು ಕಳೆದುಕೊಂಡವರಾಗಿದ್ದಾರೆ. ಇವರು ಮೇ 15 ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿ ಸೌತಡ್ಕ ದೇವಸ್ಥಾನಕ್ಕೆ ಹೋಗಿದ್ದಾರೆ. ಧರ್ಮಸ್ಥಳ ದಿಂದ ಹೊರಡುವ ವೇಳೆ ಅವರ ಬ್ಯಾಗಿನಲ್ಲಿ ಇಟ್ಟಿದ್ದ ಪರ್ಸಿನಲ್ಲಿ ಚಿನ್ನಾಭರಣ ಹಾಗೂ ನಗದು ಇತ್ತು. ಸೌತಡ್ಕ ದೇವಸ್ಥಾನ ತಲುಪಿ ಅಂಗಡಿಯಲ್ಲಿ ಹಣಕೊಡಲು ಪರ್ಸ್ ಹುಡುಕಿದಾಗ...

ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು; ಪ್ರಕರಣ ದಾಖಲು

0

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ಮೇ 15ರಂದು ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ಎಸ್.ಡಿ.ಎಂ ಪಿ.ಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಧರ್ಮಸ್ಥಳ ಸಾಕೇತ ವಸತಿ ಗೃಹದ ಬಳಿ ಹೋಂಡಾ ಶೈನ್ ಕೆ.ಎ 21 L1747 ಬೈಕ್ ನಿಲ್ಲಿಸಿ ವಸತಿ ಗೃಹದಲ್ಲಿದ್ದ ತಮ್ಮ ಮನೆಯವರನ್ನು ಭೇಟಿಯಾಗಿ ಹಿಂತಿರುಗಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭಿಸದ ಹಿನ್ನಲೆಯಲ್ಲಿ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರೆ....

ರಾಜ್ಯದಲ್ಲಿ ಒಂದುವಾರ ಮಳೆ ಮುಂದುವರಿಕೆ ಸಾಧ್ಯತೆ; ದ.ಕ ಸೇರಿದಂತೆ ಆರು ಜಿಲ್ಲೆಗಳಲ್ಲಿ “ಯೆಲ್ಲೋ ಅಲರ್ಟ್”

0

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗೆ ಶುಕ್ರವಾರ 'ಯೆಲ್ಲೊ ಅಲರ್ಟ್‌' ನೀಡಲಾಗಿದೆ. ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲ ಸ್ಥಳಗಳಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಶನಿವಾರ ಹೆಚ್ಚುವ...

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ

0

ನವದೆಹಲಿ: ಭಾರತದ ಫುಟ್‌ಬಾಲ್ ತಂಡದನಾಯಕ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಓರ್ವನೆನಿಸಿಕೊಂಡಿರುವ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್‌ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಪ್ರಕಟಿಸಿದ್ದಾರೆ. ಕಳೆದ ಎರಡು ದಶಕಗಳ ಕಾಲ ಭಾರತೀಯ ಫುಟ್ಬಾಲ್ ಅನ್ನು ಮುನ್ನಡೆಸಿದ ಅವರು ತಮ್ಮ 39ನೆಯ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ತೆರೆ ಎಳೆಯುತ್ತಿದ್ದಾರೆ. ಸುನೀಲ್ ಅವರು ಮಾರ್ಚ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗುವಾಹಟಿಯಲ್ಲಿ ಭಾರತದ ಪರವಾಗಿ 150ನೇ ಫುಟ್‌ಬಾಲ್ ಪಂದ್ಯವಾಡಿದ್ದರು. ಇದರಲ್ಲಿ 1-2 ಗೋಲುಗಳ...

ಕೊಲ್ಪೆದ ಬೈಲಿನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ನಿವಾಸಿಯೊಬ್ಬ ಮನೆಯಲ್ಕಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಕೇತಿಯನಗ ಡಿಸೋಜ(77) ಎಂಬವರಾಗಿದ್ದಾರೆ.ಈ ಬಗ್ಗೆ ಮೃತರ ಪತ್ನಿ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು ಕಳೆದ ಕೆಲದಿನಗಳಿಂದ ವಲೇರಿಯನ್ ಡಿಸೋಜ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೇ 15ರಂದು ಮನೆಯಲ್ಕಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.