Home ಸ್ಥಳೀಯ ಸಮಾಚಾರ ಭಾರತ್ ಬೀಡಿ ಕಂಪೆನಿ ವಿರುದ್ದ ಹೋರಾಟ; ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ಕಾರ್ಮಿಕರು

ಭಾರತ್ ಬೀಡಿ ಕಂಪೆನಿ ವಿರುದ್ದ ಹೋರಾಟ; ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ಕಾರ್ಮಿಕರು

175
0

ಬೆಳ್ತಂಗಡಿ; ನಗರದ ಭಾರತ್ ಬೀಡಿ ಕಂಪೆನಿಯ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಗುತ್ತಿಗೆದಾರರು ಎರಡು ದಿನಗಳ ಕಾಲ ರಾತ್ರಿ ಹಗಲು ನಡೆಸಿದ ಮುಷ್ಕರ ಶುಕ್ರವಾರ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಮಂಗಳೂರಿನಲ್ಕಿ ಸಹಯಕ ಕಾರ್ಮಿಕ ಆಯುಕ್ತರು ಹೋರಾಟಗಾರರು ಹಾಗೂ ಕಂಪೆನಿಯ ಮಾಲಕರೊಂದಿಗೆ ಕರೆದಿದ್ದ ಸಂಧಾನ ಸಭೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಕಂಪೆನಿ‌ ಮುಚ್ಚಬಾರದು ಎಂದು ಸರಕಾರದ‌ ಪರವಾಗಿ ನಾನು ನಿಮಗೆ ಹೇಳಬಯಸುತ್ತೇನೆ ಎಂದು ಎ.ಎಲ್.ಸಿ. ಮಾಲಕರಿಗೆ ಹೇಳಿದರು. ಈ ಬಗ್ಗೆ ಉತ್ತರಿಸಿದ ಕಂಪೆನಿ ಮಾಲಕರು ಮುಂದಿನ ಗುರುವಾರದ ಒಳಗಾಗಿ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೋರಾಟವನ್ನು ಶುಕ್ರವಾರದ ವರೆಗೆ ಮುಂದೂಡಲಾಗಿದೆ. ಎಂದು ಹೋರಾಟಗಾರರು ತಿಳಿಸಿದ್ದಾರೆ.

ಕಂಪೆನಿ ಮುಚ್ಚಿದರೆ ಶುಕ್ರವಾರದಿಂದ ಮತ್ತೆ ಮುಷ್ಕರ

ಕಂಪೆನಿಯನ್ನು ಮುಚ್ಚಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಮುಚ್ಚಲು ಮುಂದಾದರೆ ಶುಕ್ರವಾರದಿಂದಲೇ ಹೋರಾಟವನ್ನು ಮತ್ತೆ ಆರಂಭಿಸಲಾಗುವುದು.
ಬಿ.ಎಂ ಭಟ್ ಕಾರ್ಮಿಕ ಮುಖಂಡ

LEAVE A REPLY

Please enter your comment!
Please enter your name here