ಭಾರತ್ ಬೀಡಿ ಕಂಪೆನಿ ವಿರುದ್ದ ಹೋರಾಟ; ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ಕಾರ್ಮಿಕರು
ಬೆಳ್ತಂಗಡಿ; ನಗರದ ಭಾರತ್ ಬೀಡಿ ಕಂಪೆನಿಯ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಗುತ್ತಿಗೆದಾರರು ಎರಡು ದಿನಗಳ ಕಾಲ ರಾತ್ರಿ ಹಗಲು ನಡೆಸಿದ ಮುಷ್ಕರ ಶುಕ್ರವಾರ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.ಮಂಗಳೂರಿನಲ್ಕಿ ಸಹಯಕ ಕಾರ್ಮಿಕ ಆಯುಕ್ತರು ಹೋರಾಟಗಾರರು ಹಾಗೂ ಕಂಪೆನಿಯ ಮಾಲಕರೊಂದಿಗೆ ಕರೆದಿದ್ದ ಸಂಧಾನ ಸಭೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಕಂಪೆನಿ ಮುಚ್ಚಬಾರದು ಎಂದು ಸರಕಾರದ ಪರವಾಗಿ ನಾನು ನಿಮಗೆ ಹೇಳಬಯಸುತ್ತೇನೆ ಎಂದು ಎ.ಎಲ್.ಸಿ. ಮಾಲಕರಿಗೆ ಹೇಳಿದರು. ಈ ಬಗ್ಗೆ ಉತ್ತರಿಸಿದ ಕಂಪೆನಿ ಮಾಲಕರು ಮುಂದಿನ ಗುರುವಾರದ ಒಳಗಾಗಿ ಈ ಬಗ್ಗೆ ಚರ್ಚಿಸಿ...
ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು; ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ: ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅಂತುಬಾಯಮ್ಮ ಎಂಬವರೇ ಚಿನ್ನಾಭರಣ ನಗದು ಕಳೆದುಕೊಂಡವರಾಗಿದ್ದಾರೆ. ಇವರು ಮೇ 15 ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿ ಸೌತಡ್ಕ ದೇವಸ್ಥಾನಕ್ಕೆ ಹೋಗಿದ್ದಾರೆ. ಧರ್ಮಸ್ಥಳ ದಿಂದ ಹೊರಡುವ ವೇಳೆ ಅವರ ಬ್ಯಾಗಿನಲ್ಲಿ ಇಟ್ಟಿದ್ದ ಪರ್ಸಿನಲ್ಲಿ ಚಿನ್ನಾಭರಣ ಹಾಗೂ ನಗದು ಇತ್ತು. ಸೌತಡ್ಕ ದೇವಸ್ಥಾನ ತಲುಪಿ ಅಂಗಡಿಯಲ್ಲಿ ಹಣಕೊಡಲು ಪರ್ಸ್ ಹುಡುಕಿದಾಗ...
ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು; ಪ್ರಕರಣ ದಾಖಲು
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ಮೇ 15ರಂದು ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ಎಸ್.ಡಿ.ಎಂ ಪಿ.ಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಧರ್ಮಸ್ಥಳ ಸಾಕೇತ ವಸತಿ ಗೃಹದ ಬಳಿ ಹೋಂಡಾ ಶೈನ್ ಕೆ.ಎ 21 L1747 ಬೈಕ್ ನಿಲ್ಲಿಸಿ ವಸತಿ ಗೃಹದಲ್ಲಿದ್ದ ತಮ್ಮ ಮನೆಯವರನ್ನು ಭೇಟಿಯಾಗಿ ಹಿಂತಿರುಗಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭಿಸದ ಹಿನ್ನಲೆಯಲ್ಲಿ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರೆ....
ರಾಜ್ಯದಲ್ಲಿ ಒಂದುವಾರ ಮಳೆ ಮುಂದುವರಿಕೆ ಸಾಧ್ಯತೆ; ದ.ಕ ಸೇರಿದಂತೆ ಆರು ಜಿಲ್ಲೆಗಳಲ್ಲಿ “ಯೆಲ್ಲೋ ಅಲರ್ಟ್”
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗೆ ಶುಕ್ರವಾರ 'ಯೆಲ್ಲೊ ಅಲರ್ಟ್' ನೀಡಲಾಗಿದೆ. ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲ ಸ್ಥಳಗಳಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಶನಿವಾರ ಹೆಚ್ಚುವ...
ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ
ನವದೆಹಲಿ: ಭಾರತದ ಫುಟ್‌ಬಾಲ್ ತಂಡದನಾಯಕ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಓರ್ವನೆನಿಸಿಕೊಂಡಿರುವ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಪ್ರಕಟಿಸಿದ್ದಾರೆ. ಕಳೆದ ಎರಡು ದಶಕಗಳ ಕಾಲ ಭಾರತೀಯ ಫುಟ್ಬಾಲ್ ಅನ್ನು ಮುನ್ನಡೆಸಿದ ಅವರು ತಮ್ಮ 39ನೆಯ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ತೆರೆ ಎಳೆಯುತ್ತಿದ್ದಾರೆ. ಸುನೀಲ್ ಅವರು ಮಾರ್ಚ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗುವಾಹಟಿಯಲ್ಲಿ ಭಾರತದ ಪರವಾಗಿ 150ನೇ ಫುಟ್‌ಬಾಲ್ ಪಂದ್ಯವಾಡಿದ್ದರು. ಇದರಲ್ಲಿ 1-2 ಗೋಲುಗಳ...
ಕೊಲ್ಪೆದ ಬೈಲಿನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ನಿವಾಸಿಯೊಬ್ಬ ಮನೆಯಲ್ಕಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಕೇತಿಯನಗ ಡಿಸೋಜ(77) ಎಂಬವರಾಗಿದ್ದಾರೆ.ಈ ಬಗ್ಗೆ ಮೃತರ ಪತ್ನಿ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು ಕಳೆದ ಕೆಲದಿನಗಳಿಂದ ವಲೇರಿಯನ್ ಡಿಸೋಜ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೇ 15ರಂದು ಮನೆಯಲ್ಕಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿಯಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ ರಾತ್ರಿಯೂ ಮುಂದುವರಿದ ಧರಣಿ
ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ.ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ಬೀಡಿ ಫೆಡರೇಶನ್ ನ ರಾಜ್ಯ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಯಾವುದೇ ಕಾರಣಕ್ಕೂ...
ವಕೀಲರ ಸಂಘದಿಂದ ನ್ಯಾಯಾಧೀಶರಿಗೆ ಬೀಳ್ಕೊಡುಗೆ
ಬೆಳ್ತಂಗಡಿ; ವಕೀಲರ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಅವರು ವಹಿಸಿ ಶುಭ ಹಾರೈಸಿದರುಮುಖ್ಯ ಅಥಿತಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ ಸಂದೇಶ್ ಕೆ ಜೆ ಅವರು ಭಾಗವಹಿಸಿ ಶುಭ ಹಾರೈಸಿದರು. ಹಿರಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಹಿರಿಯ ವಕೀಲರ ಸಮಿತಿ...
ಭಾರತ್ ಬೀಡಿ ಕಂಪೆನಿ ಎದುರು ಕಾರ್ಮಿಕರ ಅನಿರ್ಧಿಷ್ಟ ಧರಣಿ ಆರಂಭ
ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ. ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘ (ಸಿಐಟಿಯು) ಜಿಲ್ಲಾ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ನೆರವೇರಿಸಿ...
ಹೇಡ್ಯ ನಿವಾಸಿ ಎಸ್..ಪಿ ಮ್ಯಾಥ್ಯೂ ನಿಧನ
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹೇಡ್ಯ ವಿಲಿಯಾತ್ ಪರಂಬಿಲ್ ನಿವಾಸಿ ಎಸ್. ಪಿ. ಮ್ಯಾಥ್ಯೂ ( 77) ಅಲ್ಪ ಕಾಲದ ಅಸೌಖ್ಯದಿಂದಮೇ 16ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಕೃಷಿಕರಾಗಿದ್ದ ಅವರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು. ಅತ್ಯುತ್ತಮ ಕಲಾವಿದರೂ ಆಗಿದ್ದು ಮುಂಡಾಜೆ ಸೈಂಟ್ ಮೇರಿ ಚರ್ಚ್ ಸಹಿತ ಹಲವೆಡೆ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು.ಮೃತರು ಪತ್ನಿ ಆನಿಸ್, ಪುತ್ರ ವಿಲ್ಸನ್,ಪುತ್ರಿ ಮಾಲಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ













