ಬೆಳ್ತಂಗಡಿ; ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿದ್ದರೂ ತಿಂಗಳಿಗೆ ಕೇವಲ 15ಹೆರಿಗೆಗಳು ಮಾತ್ರ ಆಗುತ್ತಿದೆ. ಉಚಿತ ವ್ಯವಸ್ಥೆ ಇದ್ದರೂ ಯಾಕೆ ಜನ ಬರುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರುಗಳನ್ಬು ಪ್ರಶ್ನಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ವಿವಿಧ ಘಟಕಗಳ ಉದ್ಘಾಟನೆಗೆಂದು ಆಗಮಿಸಿದ ವೇಳೆ ಆಸ್ಪತ್ರೆಯ ಪ್ರಗತಿಯ ಬಗ್ಗೆ ಪ್ರಶ್ನಿಸಿ ವೈದ್ಯರುಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ 15ಹೆರಿಗೆಗಳು ಮಾತ್ರ ನಡೆಯುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಸಚಿವರು ತಜ್ಞ ವೈದ್ಯರು, ಅನಸ್ತೇಷಿಯಾ ಸ್ಪೆಷ್ಯಲಿಸ್ಟ್ ಎಲ್ಲರೂ ಇದ್ದಾರೆ ಆದರೆ ಜನ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಜನಬರದಿದ್ದರೆ ವೈದ್ಯರಿಗೆ ವೇತನ ನೀಡುವುದು ವ್ಯರ್ಥವಾಗುತ್ತದೆ ಎಂದ ಸಚಿವರು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯವರು ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಗಳು ಜನರಿಗೆ ಲಭಿಸಬೇಕು ಅದಕ್ಕೆಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಅಗತ್ಯ ಸಿಬ್ಬಂದಿ ನೇಮಕ ಮಾಡುವಂತೆ ಹಾಗೂ ಉಪಕರಣಗಳನ್ನು ಒದಗಿಸುವಂತೆಯೂ ಅವರು ಸೂಚಿಸಿದರು. ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಸ್ಪತ್ರೆಯಲ್ಲಿ ನ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಚಿವರು ಬಿಪಿಹೆಚ್ ಲ್ಯಾಬ್ ಹಾಗೂ 12ಬೆಡ್ ಗಳ ಐಸೋಲೇಷನ್ ವಾರ್ಡ್ ನ ಉದ್ಘಾಟನೆಯನ್ನು ನೆರವೇರಿಸಿದರು.
ಶಾಸಕ ಹರೀಶ್ ಪೂಂಜ, ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಪಟ್ಟಣ ಪಂಚಾಯತು ಅಧ್ಯಕ್ಷ ಜಯಾನಂದ ಗೌಡ ಹಾಗೂ ಇತರರು ಇದ್ದರು.