ಬೆಳ್ತಂಗಡಿ :- ಕೇಂದ್ರ ಜುಮ್ಮಾ ಮಸೀದಿಯಲ್ಲಿ ಇದುಲ್ – ಹದಾ ಬಕ್ರೀದ್ ನಮಾಝ್

0

ಬೆಳ್ತಂಗಡಿ :- ಕೇಂದ್ರ ಜುಮ್ಮಾ ಮಸೀದಿಯಲ್ಲಿ ಇದುಲ್ - ಹದಾ ಬಕ್ರೀದ್ ನಮಾಝ್ ಖತೀಬರಾದ ಹನೀಫ್ ಫೈಝಿ ಯವರ ನೇತ್ರತ್ವದಲ್ಲಿ ನಡೆಯಿತು. ಮಸೀದಿ ಅಧ್ಯಕ್ಷರಾದ ಬಿ,ಎ,ನಝೀರ್, ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಗಳಾದ ಬಿ,ಎಚ್, ರಝಾಕ್, ಹನೀಫ್ ವರ್ಷಾ,ಮಹಮ್ಮದ್ ಕುದ್ರಡ್ಕ,ಕೋಶಾಧಿಕಾರಿ ಇಸ್ಮಾಲಿ ಐ,ಬಿ, ಹಾಗೂ ಎಲ್ಲಾ ಜಮಾತ್ ಬಾಂಧವರು ಉಪಸ್ಥಿತರಿದ್ದರು.

ತೈಲ ಬೆಲೆಯೇರಿಕೆ ಸಮರ್ಥಿಸಿದ ಸಿ.ಎಂ ಸಿದ್ದರಾಮಯ್ಯ.

0

ಬೆಂಗಳೂರು; ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮುಖ್ಯಮಂತ್ರಿ ಗಳು ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪಾನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ...

ಬಳ್ಳಮಂಜ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಪದಗ್ರಹಣ

0

ಬೆಳ್ತಂಗಡಿ; ಹುಟ್ಟಿನಿಂದ ಸಾವಿನ ವರೆಗೆ ಬರುವ ಸಾಕಷ್ಟು ಸಂಕಷ್ಟಗಳಿಗೆ ಸಹಕಾರ ನೀಡುವುದು, ಗ್ರಾಮಿಣ ಭಾಗದಲ್ಲಿರುವ ಸಮಸ್ಯೆಗಳನ್ನ ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮೂಲಬೂತ ಸೌಕರ್ಯಗಳಿಗೆ ಅನುದಾಗಳನ್ನ ಒದಗಿಸಿ ಅಭಿವೃದ್ದಿ ಮಾಡುವುದೂ ಯೋಜನೆಯ ಆಶಯ 42 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದ್ದ ಕಡು ಬಡತನವನ್ನ ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು 1982 ರಲ್ಲಿ ಗ್ರಾಮಾಭಿವೃದ್ದಿ ಯೋಜನೆಯನ್ನೂ ಜಾರಿಗೆ ತಂದರು ಇದರ ಮುಖ್ಯ ಉದ್ದೇಶ ಸಾಲ ನೀಡುವುದು ಅಲ್ಲ ಬದಲಾಗಿ ಸಮಾಜದ...

ಇಂದಬೆಟ್ಟು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ

0

ಬೆಳ್ತಂಗಡಿ: ತಾಯಿಗೆ ಕಾಡಿದ ಅನಾರೋಗ್ಯದಿಂದ ಬೇಸತ್ತು ಮನನೊಂದು ಹತ್ತನೆ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದಬೆಟ್ಟು ಗ್ರಾಮದಲ್ಲಿ ಜೂ 15 ರಂದು ನಡೆದಿದೆ. ನಡ ಶಾಲೆಯ ಹತ್ತನೆ ತರಗತಿಯಲ್ಲಿ ಕಲಿಯುತ್ತಿದ್ದ ಇಂದಬೆಟ್ಟು ಗ್ರಾಮದ ಕಲ್ಲಾಜೆ ಸಮೀಪದ ವಿದ್ಯಾರ್ಥಿನಿ ಜಯಲಕ್ಷ್ಮಿ ತನ್ನ ತಾಯಿ ಅನಾರೋಗ್ಯದಿಂದ ಬಳಲುತಿದ್ದು ಇದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೃತರ ಸಹೋದರ ನೀಡಿರುವ ದೂರಿನಂತೆಬೆಳ್ತಂಗಡಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೈಲ ಬೆಲೆಯೇರಿಕೆ ಹಿಂಪಡೆಯದೆ ಇದ್ದಲ್ಲಿ ಬಿಜೆಪಿಯಿಂದ ಹೋರಾಟ ರಾಜ್ಯ ಅಧ್ಯಕ್ಷ ವಿಜಯೇಂದ್ರ ಎಚ್ಚರಿಕೆ

0

ಬೆಂಗಳೂರು: ರಾಜ್ಯ ಸರಕಾರ ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ತೈಲ ಬೆಲೆ ಏರಿಕೆಯ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಸಿಎಂ ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಜೂ.17ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು. ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಸರಕಾರವು, ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 3 ರೂ., ಡೀಸೆಲ್ ದರವನ್ನು 3.50 ರೂ.ಗೆ...

ಪೆಟ್ರೋಲ್ ಬೆಲೆ ಏರಿಸುವ ಮೂಲಕ ರಾಜ್ಯ ಸರಕಾರದ ಬಣ್ಣ ಬಯಲಾಗಿದೆ ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ಪೆಟ್ರೋಲ್ ದರ ಏರಿಸುವ ಮೂಲಕ ರಾಜ್ಯಸರಕಾರದ ಬಣ್ಣ ಬಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ.ಪಂಚ ಭಾಗ್ಯಗಳನ್ನು ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರಕಾರ ಇದೀಗ ಆರ್ಥಿಕ ಹಿನ್ನಡೆಯಿಂದ ಬಳಲುತ್ತಿದೆ. ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಹಣ ಇಲ್ಲದೆ ಪರದಾಡುತ್ತಿದೆ. ಇದರಿಂದ ಸ್ವಪಕ್ಷೀಯರೇ ಅಸಮಾಧಾನಗೊಂಡಿದ್ದು ಮುಖ್ಯಮಂತ್ರಿಯವರು ಕಂಗಾಲಾಗಿರುವುದು ಸ್ಪಷ್ಟ. ಉಚಿತ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು ಅದನ್ನು ಭರಿಸುವುದಕ್ಕೋಸ್ಕರ ಇದೀಗ ಪೆಟ್ರೋಲ್ ನ ಸೆಸ್ ಏರಿಸಿರುವುದು ಜನ ಸಾಮಾನ್ಯರಿಗೆ ಹೊರೆಯಾಗಲಿದೆ. ಸರಕಾರ ಏಕಾಏಕಿ ಪೆಟ್ರೋಲ್ ದರ ಏರಿಸಿರುವುದು...

ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ವಿರೋಧಿಸಿ ಬಿಜೆಪಿಯಿಂದ ಜೂ.18 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ

0

ಬೆಳ್ತಂಗಡಿ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ,ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ದ್ವೇಷ ರಾಜಕೀಯವನ್ನು ವಿರೋಧಿಸಿ ಭಾರತೀಯ ಜಮತಾ ಪಕ್ಷ ಬೆಳ್ತಂಗಡಿ ಮಂಡಲ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಜೂ 18ಮಂಗಳವಾರಬೆಳಿಗ್ಗೆ 10.00 ಗಂಟೆಗೆ ಬೆಳ್ತಂಗಡಿಯ ಸಂತೆಕಟ್ಟೆಯ ಅಯ್ಯಪ್ಪ ಗುಡಿಯಿಂದ ತಾಲೂಕು ಆಡಳಿತ ಸೌಧದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ . ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜ‌ ಸೇರಿದಂತೆ ಹಿರಿಯ ಮುಖಂಡರುಗಳು ಭಾಗಬಹಿಸುವ ನಿರೀಕ್ಷೆಯಿದೆ.

ಶಾಸಕ ಹರೀಶ್ ಪೂಂಜರ ‘ಮಸೀದಿ‌ಗಳಲ್ಲಿ ಶಸ್ತ್ರಾಸ್ತ್ರ’ ಹೇಳಿಕೆ; ಬೆಳ್ತಂಗಡಿ ತಾಲೂಕು ಜಮಾಅತ್ ಗಳ ಒಕ್ಕೂಟದಿಂದ ಠಾಣೆಗೆ, ಸ್ಪೀಕರ್ ಗೆ ದೂರು ಸಲ್ಲಿಕೆ

0

ಬೆಳ್ತಂಗಡಿ; ಮುಸ್ಲಿಂ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳಾದ ಮಸೀದಿ ಮತ್ತು ಮದರಸಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಗಳನ್ನು ಪೇರಿಸಿಡಲಾಗಿದೆ ಎಂದು ದ್ವೇಷಪೂರಿತವಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ‌ಕೈಗೊಳ್ಳಬೇಕೆಂದು ಆಗ್ರಹಿಸಿ‌ 'ಬೆಳ್ತಂಗಡಿ ತಾಲೂಕು ಜಮಾಅತ್ ಗಳ ಒಕ್ಕೂಟ'ದಿಂದ ಜೂ.15 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ವಿಧಾನ ಸಭೆಯ ಸ್ಪೀಕರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಯಿತು. ತಾಲೂಕಿನ ಜಮಾಅತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಆಯಾಯಾ ಪ್ರದೇಶದ ಜಮಾಅತ್ ಪ್ರಮುಖರನ್ನೊಳಗೊಂಡ ಪಕ್ಷ‌ ಮತ್ತು‌ ವಿವಿಧ ಸಂಘಟನಾ ಅತೀತವಾದ 'ತಾಲೂಕು...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಸಂವಿದಾನ ವಿರೋದಿ ಹೇಳಿಕೆಗೆ ಸಿಪಿಐಎಂ ಖಂಡನೆ — ಬಿ.ಎಂ.ಭಟ್

0

ಬೆಳ್ತಂಗಡಿ; ಎಲ್ಲಾ ಮಸೀದಿಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಇವೆ ಎಂದು ತಾನೇ ಖುದ್ದಾಗಿ ನೋಡಿ ಬಂದಂತೆ, ಯಾವುದೇ ಸಾಕ್ಷಿಗಳಿಲ್ಲದೆ ಗಂಬೀರ ಆಪಾದನೆ ಮಾಡಿದ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜರ ಹೇಳಿಕೆ ಖಂಡನೀಯ ಹಾಗೂ ಸಂವಿಧಾನ ವಿರೋದಿ ಮತ್ತು ಮತಾಂಧ ಹೇಳಿಕೆಯಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಿಪಿಐಎಂ ಮುಖಂಡ ಬಿ.ಎಂ.ಭಟ್ ಹೇಳಿದ್ದಾರೆ.ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪೂಂಜರು ಕರ್ನಾಟಕ ರಾಜ್ಯದಲ್ಲಿ ಕಳೆದ 4 ವರ್ಷ ಬಿಜೆಪಿ ಸರಕಾರ ಇದ್ದಾಗ ಎಲ್ಲಾ ಮಸೀದಿಗಳ...

ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬೆಳ್ತಂಗಡಿ ಯ ಸಂದೇಶ್. ಎಸ್.ಜೈನ್ ಆಯ್ಕೆ

0

ಬೆಳ್ತಂಗಡಿ : ತಾಲೂಕಿನ ಕನ್ಯಾಡಿ:1 ಗ್ರಾಮದ ನಿವಾಸಿಯಾಗಿದ್ದು, ಪ್ರಸಕ್ತ ದಾಂಡೇಲಿಯ‌ಲ್ಲಿ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್.ಎಸ್.ಜೈನ್ ಅವರು ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೇಶ್.ಎಸ್.ಜೈನ್ ಅವರು ದಾಂಡೇಲಿ ಜೈನ ಸಮಾಜದ ಅಧ್ಯಕ್ಷರಾಗಿಯೂ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರ್ವಧರ್ಮ ಸಮನ್ವಯತೆಯನ್ನು ಸಾರುವ ಹಿಂದೂ ಮುಸ್ಲಿಂ ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇವರು ನಾಭಿರಾಜ್ ಜೈನ್ ಮತ್ತು ಶಶಿಕಲಾ ಜೈನ್ ದಂಪತಿಗಳ ಸುಪುತ್ರರಾಗಿದ್ದಾರೆ.