ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

0

ಬೆಳ್ತಂಗಡಿ; ವಾಹನಗಳಲ್ಲಿ ನೋಡುಗರ ಕಣ್ಣಿಗೆ ಬೆಳಕು ಕುಕ್ಕುವ ರೀತಿಯಲ್ಲಿ ಉಪಯೋಗಿಸುವ ಎಲ್.ಇ‌.ಡಿ ಬಲ್ಬುಗಳನ್ನು ಬಳಸಬಾರದು ಎಂಬ ನಿಯಮವಿದ್ದು ಶುಕ್ರವಾರ ಬೆಳ್ತಂಗಡಿ, ಉಜಿರೆ, ಹಳೆಪೇಟೆ ಮೊದಲಾದೆಡೆ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಕಾರ್ಯಾಚರಣೆ ನಡೆಸಸಿ ಕಾನೂನು ಬಾಹಿರವಾಗಿ ಎಲ್.ಇ.ಡಿ ಬಲ್ಬ್ ಗಳನ್ನು ಉಪಯೋಗಿಸುವವರಿಗೆ ಎಚ್ಚರಿಕೆ ನೀಡಲಾಯಿತು. ಸ್ವತಃ ಫೀಲ್ಡಿಗಿಳಿದ ಸಂಚಾರಿ ಠಾಣೆ ಎಸ್.ಐ ಅರ್ಜುನ್ ಅವರು ರಿಕ್ಷಾ ಚಾಲಕರಲ್ಲಿ ಹಾಗೂ ಇತರ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದರು. ಸದ್ರಿ ಲೈಟ್ ಉಪಯೋಗಿಸುತ್ತಿದ್ದವರ ಲೈಟ್ ಗಳನ್ನು ತೆರವುಗೊಳಿಸಿದರು. ಅದೇ ರೀತಿ ಕೆಲ ವಾಹನಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವ ಕರ್ಕಷ ಹಾರ್ನ್‌ಗಳನ್ನು...

ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಸಂಸ್ಥಾಪನಾ ದಿನಾಚರಣೆ

0

ಬೆಳ್ತಂಗಡಿ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ )ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ನಗರದ ಪಕ್ಷದ ಕಛೇರಿ ಮುಂಭಾಗದಲ್ಲಿ ದ್ವಜಾರೋಹಣವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ ವಹಿಸಿದರು.ಪಕ್ಷದ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಳಾದ ಅಕ್ಬರ್ ಬೆಳ್ತಂಗಡಿ, ಸಮಿತಿ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್, ಸಂಜಯ್ ಗ್ಲೋಬಲ್ ಫೌಂಡೇಷನ್ ಇದರ ಅಧ್ಯಕ್ಷರಾದ ಇಸ್ಮಾಲಿ ಐ,ಬಿ, ಕಾರ್ಯದರ್ಶಿಗಳಾದ ಫಝಲ್ ಉಜಿರೆ, ಸಾದಿಕ್ ಲಾಯಿಲಾ, ಕೋಶಾಧಿಕಾರಿ...

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ “ಉನ್ನತಿ” ಉದ್ಘಾಟನೆ

0

ಧರ್ಮಸ್ಥಳ: ಸಹಕಾರಿ ಕ್ಷೇತ್ರ ಬಲಿಷ್ಠವಾದಾಗ ಗ್ರಾಮೀಣ ಪ್ರದೇಶದ ಜನರೂ ಆರ್ಥಿಕ ವಾಗಿ ಸಬಲರಾಗಲು ಸಾಧ್ಯವಿದೆ ಜನರೂ ಸಹಕಾರಿ ಸಂಘಗಳೊಂದಿಗೆ ಸೇರಿ ಸಂಸ್ಥೆಯ ಯಶಸ್ವಿಗೆ ಸಹಕರಿಸಬೇಕು ಎಂದು‌ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರುಅವರು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಾಣಿಜ್ಯ ಕಟ್ಟಡ ಉನ್ನತಿ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಸಹಕಾರಿ ರಂಗ ಗಟ್ಟಿಯಾಗಬೇಕು ಮತ್ತು ಬಲಿಷ್ಠವಾಗಬೇಕು.ಧರ್ಮಸ್ಥಳ ಕ್ಷೇತ್ರದಲ್ಲಿರುವ ಸಂಸ್ಥೆ ಒಳ್ಳೆಯ ರೀತಿಯಲ್ಲಿ ನಡೆದು ಸರ್ವಾಂಗೀಣ ಪ್ರಗತಿ ಸಾಧಿಸಿದೆ. ಸಹಕಾರಿ ರಂಗ ಮತ್ತು ಧರ್ಮಸ್ಥಳದ ಸ್ವಸಹಾಯ ಸಂಘಗಳು ಜೊತೆ ಜೊತೆಯಾಗಿ...

ಮದ್ದಡ್ಕ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

0

ಬೆಳ್ತಂಗಡಿ:ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಮದ್ದಡ್ಕದ ಮೈದಾನದಲ್ಲಿ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ ನಡೆಯಿತು.ದ್ವಜಾರೋಹಣವನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿದಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸ್ವಾಲಿ ಮದ್ದಡ್ಕ ನೆರೆವೇರಿಸಿದರು ,ಅದ್ಯಕ್ಷತೆಯನ್ನು ಮದ್ದಡ್ಕ ಬೂತ್ ಸಮಿತಿ ಅದ್ಯಕ್ಷರಾದ ಹಮೀದ್ ಆಲಂದಿಲ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ,ಅನ್ವರ್ ಲ್ ಹಿದಾಯ ಪಾದೆ ಮದರಸ ಕಾರ್ಯದರ್ಶಿ ಮನ್ಸೂರ್ ಪಾದೆ,ಅನ್ವರ್ ಲ್‌ ಹಿದಾಯ ಮದರಸ ಮಾಜಿ ಅದ್ಯಕ್ಷರಾದ ಆರೀಸ್ ಶಾಫಿ,ಅಲ್ಲದೇ ಪಕ್ಷದ ಕಾರ್ಯಕರ್ತರು...

ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಈಶ್ವರಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಶ್ರೀ ಕಳೆಂಜ ಆಯ್ಕೆ

0

ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ (ರಿ) ಸಿಐಟಿಯು ಇದರ ಮಹಾಸಭೆಯಲ್ಲಿ ನೂತನನೂತನ ಅದ್ಯಕ್ಷರಾಗಿ ಈಶ್ವರಿ ಶಂಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜಯಶ್ರಿ ಕಳೆಂಜಖಜಾಂಜಿಯಾಗಿ ಬಿ.ಎಂ.ಭಟ್ಉಪಾದ್ಯಕ್ಷರುಗಳಾಗಿ ನೆಬಿಸಾ, ಸುಂದರಿ ಕುತ್ಲೂರು, ಪುಷ್ಪಾ, ಕುಮಾರಿಸಹಕಾರ್ಯದರ್ಶಿಗಳಾಗಿ ಜಯರಾಮ‌ ಮಯ್ಯ, ಕೈರುನ್ನೀಸಾ, ಪ್ರೇಮ ಕುದ್ಯಾಡಿಸರ್ವಾನುಮತದಿಂದ ಆಯ್ಕೆಯಾದರುಸಮಿತಿ ಸದಸ್ಯರುಗಳಾಗಿ ಯಕ್ಷಲ ಬರಂಗಾಯ, ಪ್ರೇಮ ಲತ ಶಿಬಾಜೆ, ಸಾರಾ, ಜಯಂತಿ ಮುಂಡಾಜೆ, ಹರಿಣಾಕ್ಷಿ ಉಜಿರೆ, ಪದ್ಮಾವತಿ ಬೆಳಾಲು, ಕುಸುಮ ಪಡ್ಪು, ಮಮ್ತಾಜ್ ನಾವೂರು, ಶಾರದಾ ಚಾರ್ಮಾಡಿ, ಸುಮನ ಲ್ಯಾಲ, ಸುನಂದ ಮುಂಡಾಜೆ, ಪ್ರೇಮ ಬೆಳಾಲು, ಡೀಗಯ...

ಧರ್ಮಸ್ಥಳದಲ್ಲಿ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

0

ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಸಹಭಾಗಿತ್ವದಲ್ಲಿ ಜೂ. 21ರ ಶುಕ್ರವಾರ ಪೂರ್ವಾಹ್ನ ಏಳು ಗಂಟೆಯಿಂದ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ.ಜಾನ್ ಎಬ್‌ನಜರ್ ಮತ್ತು ತುಮಕೂರು ಶ್ರೀ ಸಿದ್ಧಾರ್ಥ ಅಕಾಡೆಮಿಯ ಉಪಕುಲಪತಿ ಡಾ. ಕೆ.ಬಿ.ಲಿಂಗೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹನಾಯಕ್ ಭಾಗವಹಿಸಿದ್ದರು.ಪೂರ್ವಾಹ್ನ 7 ಗಂಟೆ ಯಿಂದ...

ದಲಿತ ಚಳವಳಿಯ ಮುಚೂಣಿ ನಾಯಕ ಚಂದು ಎಲ್ ನಿಧನ

0

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದ.ಕ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಂದು ಎಲ್ ಅವರು ಬೆಳ್ತಂಗಡಿ ತಾಲೂಕು ಪಂಚಾಯತು ಉಪಾಧ್ಯಕ್ಷರಾಗಿ, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಿದ್ದರು ಕಾರ್ಯನಿರ್ವಹಿಸಿದ್ದರುಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ದ.ಕ...

ಧರ್ಮಸ್ಥಳ ಗ್ರಾಮ ಪಂಚಾಯತಿ ವತಿಯಿಂದ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ

0

ಬೆಳ್ತಂಗಡಿ; ಇತ್ತೀಚೆಗೆ ನಿವೃತ್ತರಾದ ಸರಕಾರಿ ಅಧಿಕಾರಿಗಳಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿವರಾದ ಹಾಗೂ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ನಿ ಬೆಳ್ತಂಗಡಿ ಇದರ ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ಮತ್ತು ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಚಿದಾನಂದ ಹೂಗಾರ್ ರವರನ್ನು ಧರ್ಮಸ್ಥಳ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವಿಮಲಾ ಪಂಚಾಯತ್ ಅಧ್ಯಕ್ಷರು. ಶ್ರೀನಿವಾಸ್ ರಾವ್ ಪಂಚಾಯತ್ ಉಪಾಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್. ಕೆ,...

ಉಜಿರೆ ಸರಕಾರಿ ಶಾಲೆಯ ಸಮೀಪ ಭೂಕುಸಿತ; ಶಾಸಕ ಹರೀಶ್ ಪೂಂಜ ಅವರಿಂದ ಪರಿಶೀಲನೆ.

0

ಬೆಳ್ತಂಗಡಿ; ಸರಕಾರಿ ಪ್ರೌಢಶಾಲೆ ಹಳೆಪೇಟೆ ಉಜಿರೆ ಶಾಲೆಯ ಹಿಂಬದಿಯಲ್ಲಿ ಮಣ್ಣು ಕುಸಿದಿದ್ದು ಸ್ಥಳಕ್ಕೆ ‌ಬೆಳ್ತಂಗಡಿ ಶಾಸಕರಾದ ಹರೀಶ್ ಪೂಜರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಹಿಂಭಾಗದಲ್ಲಿ ಭೂ ಕುಸಿತವಾಗಿದ್ದು ಶಾಲಾಕಟ್ಟಡಕ್ಕೆ ಅಪಾಯವಾಗದಂತೆ ತಕ್ಷಣವೇ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಕಾರಂತ್, ಉಪಾಧ್ಯಕ್ಷರಾದ ರವಿ ಕುಮಾರ್ ಬರಮೇಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೋಚ್ಚ, ಬೆಳ್ತಂಗಡಿ ಪಟ್ಟಣಪಂಚಾಯತು ಸದಸ್ಯ ಜಯಾನಂದ ಗೌಡ ಜಿಲ್ಲಾ ಪಂಚಾಯತ್ ಇಂಜಿನಿಯರ್ ಹರ್ಷಿತ್ ,...

ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ಕಾಂಗ್ರೆಸ್ ಮುಖಂಡ ಚಂದು ಎಲ್ ಅವರ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

0

ಬೆಳ್ತಂಗಡಿ; ಹಿರಿಯ ಕಾಂಗ್ರೆಸ್ ನಾಯಕ , ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ , ದಸಂಸ(ಅಂಬೇಡ್ಕರ್ ವಾದ) ಇದರ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ರವರ ಆರೋಗ್ಯವನ್ನು ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಿಚಾರಿಸಿದರು. ಇಂದು ಆಸ್ಪತ್ರೆಗೆ ಭೇಟಿ ನೀಡಿದ ರಕ್ಷಿತ್ ಶಿವರಾಂ ರವರು ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆಗೆ ಚಂದು ರವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ದಸಂಸ ಮುಖಂಡರು ಹಾಗೂ ಕುಟುಂಬದ ಸದಸ್ಯರ ಜೊತೆಗೆ ಮಾತುಕತೆ ನಡೆಸಿ , ಧೈರ್ಯ ತುಂಬಿದರು. ಕಾಂಗ್ರೆಸ್...