Home ಅಪಘಾತ ಕೂಲಿ ಕಾರ್ಮಿಕ ಕುಸಿದು ಬಿದ್ದು ಸಾವು

ಕೂಲಿ ಕಾರ್ಮಿಕ ಕುಸಿದು ಬಿದ್ದು ಸಾವು

230
0

ಬೆಳ್ತಂಗಡಿ: ಕೂಲಿ ಕಾರ್ಮಿಕನೋರ್ವ ಕುಸಿದು ಬಿದ್ದು

ಸಾವನ್ನಪ್ಪಿದ ಘಟನೆ ಅರಸಿನಮಕ್ಕಿಯಲ್ಲಿ ಗುರುವಾರ ಸಂಜೆ ನಡೆದಿದೆ. ಬಿ.ಎಸ್.ಎನ್. ಎಲ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದ ಹೊನ್ನಳ್ಳಿಯಿಂದ ಐವರು ಕಾರ್ಮಿಕರು ಬಂದಿದ್ದು ಇವತ್ತು ಅರಸಿನಮಕ್ಕಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಸತೀಶ್ (44) ಕುಳಿತಲ್ಲೇ ಕುಸಿದು ಬಿದಿದ್ದು ತಕ್ಷಣ ಇತರರು ಕೊಕ್ಕಡ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋಗಲು ಸೂಚಿಸಿದ್ದಾರೆ. ಅದರೆ ಬೆಳ್ತಂಗಡಿ ಆಸ್ಪತ್ರೆಗೆ ತರುವಷ್ಟರಲ್ಲಿ ವ್ಯಕ್ತಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಲಾಗಿದೆ.

LEAVE A REPLY

Please enter your comment!
Please enter your name here