ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ; ಧರ್ಮಸ್ಥಳದ ವಸತಿ ಗೃಹದ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳದ ಕಾವೇರಿ ವಸತಿಗೃಹದ ವರಾಂಡದಲ್ಲಿ ಮಲಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತನಿಗೆ ಸುಮಾರು 40 ರಿಂದ 45 ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಮೃತ ದೇಹದ ಮೇಲೆ ನಾಗರತ್ನ, ಪುಟ್ಟ, ಮಂಜಮ್ಮ ಲೋಲಾಕ್ಷಮ್ಮ, ತನುಶ್ರೀ ಎಂಬ ಹೆಸರುಗಳನ್ನು ಹಚ್ಚೆ ಹಾಕಿರುವುದು ಕಂಡು ಬಂದಿದ್ದು ಅದರ ಹೊರತಾಗಿ ಯಾವುದೇ ವಿಳಾಸದ ಗುರುತುಗಳು ಕಂಡು ಬಂದಿಲ್ಲ.ಧರ್ಮಸ್ಥಳ...
ಪಟ್ರಮೆಯಲ್ಲಿ ವಸಂತ ಬಂಗೇರರಿಗೆ ನುಡಿನಮನ
ಬೆಳ್ತಂಗಡಿ; ಸಮಾಜವನ್ನೇ ತನ್ನ ಕುಟುಂಬವಾಗಿ ಕಂಡಿದ್ದ ಅಪರೂಪದ ವ್ಯಕ್ತಿತ್ವ ನಮ್ಮ ತಂದೆ ವಸಂತ ಬಂಗೇರ ಅವರದ್ದಾಗಿತ್ತು ಎಂದು ಸನ್ಮಾನ್ಯ ಕೆ ವಸಂತ ಬಂಗೇರ ಅವರ ಮಗಳು ಪ್ರಿತಿತಾ ಬಂಗೇರ ಹೇಳಿದರು. ಪಟ್ರಮೆಯ ಅನಾರು ಶಾಲಾ ಜನಾರ್ಪಣ ಭವನದಲ್ಲಿ ಸನ್ಮಾನ್ಯ ಕೆ. ವಸಂತ ಬಂಗೇರ ಅವರಿಗೆ ಗೌರವಯುತ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಮಂಗನಕಾಯಿಲೆಯ ಹುಟ್ಟಡಗಿಸಿದ ಅವರ ಸಾಧನೆ ಕೇಳಿ ಬಲ್ಲೆ. ಅವರನ್ನು ಗೌರವಿಸುವ ಜನರನ್ನು ಕಂಡು ನಮ್ಮ ಅಪ್ಪನ ಬಗ್ಗೆ ಹೆಮ್ಮೆಯೂ, ಇಷ್ಟ ಬೇಗ ಅವರಿಂದ ನಾವೆಲ್ಲ ಅಗಲುವಂತಾದ್ದು ತುಂಬಾ ನೋವೂ...
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ
ಉಜಿರೆ: ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಭಾನುವಾರ ಸಂಜೆ ಧರ್ಮಸ್ಥಳಕ್ಕೆ ಬಂದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪ ಸಿಂಹ ನಾಯಕ್ ಜೊತೆಗಿದ್ದರು.ಭಾನುವಾರ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ತಂಗಿದ ಯಡಿಯೂರಪ್ಪ ಸೋಮವಾರ ಬೆಳಗ್ಗೆ ದೇವರ ದರ್ಶನ ಮಾಡಲಿದ್ದಾರೆ.
ಗುರಿಪಳ್ಳ ರಿಕ್ಷಾ ಪಲ್ಟಿ ಹಲವರಿಗೆ ಗಾಯ
ಬೆಳ್ತಂಗಡಿ:ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ ಹೊಡೆದ ಘಟನೆ ಭಾನುವಾರ ನಡೆದಿದೆ.ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ರಿಕ್ಷಾದಲ್ಲಿ ಮಡಂತ್ಯಾರು ಕಡೆಯ ಮೂವರು ಪ್ರಯಾಣಿಕರಿದ್ದು ಅವರಿಗೂ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬೆಳ್ತಂಗಡಿ; ಕಥೊಲಿಕ್ ಸಭಾ ಮಡಂತ್ಯಾರ್ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ
ಬೆಳ್ತಂಗಡಿ; ಕಥೊಲಿಕ್ ಸಭಾ ಮಡಂತ್ಯಾರ್ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.ಘಟಕದ ಅಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ಮ್ಯಾಕ್ಸಿಮ್ ಕೋಶಾಧಿಕಾರಿ ನೆಲ್ಸನ್ ನಿಕಟ ಪೂರ್ವ ಅಧ್ಯಕ್ಷರು ಫಿಲಿಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರುಮಾಜಿ ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ಸದಸ್ಯರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಜೆರಾಲ್ಡ್ ಮೊರಾಸ್ ಸಭೆಯಲ್ಲಿ ಪಾಲ್ಗೊಂಡಿದ್ದರುಈ ಸಭೆಯಲ್ಲಿ 12 ಚರ್ಚ್ ಗಳನ್ನೂ ಒಳಗೊಂಡ ವಾರಾಡೊ ಮಟ್ಟದ ಅಧ್ಯಕ್ಷರಾಗಿ ಆಯ್ಕೆಯಾದ ಲಿಯೋ ರೊಡ್ರಿಗಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಫಿಲಿಪ್ ಡಿಕುನ್ಹಾ ರಾಜಕೀಯ ಸಂಚಾಲಕರಾಗಿ ಆಯ್ಕೆಯಾದ ವಿನ್ಸೆಂಟ್ ಡಿಸೋಜಾ ಇವರನ್ನು ಗಿಡಗಳನ್ನು...
ಕೆಸರು ನೀರಿನಿಂದ ತುಂಬಿದ ಹೆದ್ದಾರಿಯಲ್ಲಿ ಪ್ರಯಾಣಿಕರ ಸಂಕಟ; ಉಜಿರೆಯಲ್ಲಿ ರಸ್ತೆಯಲ್ಲಿ ಕುಳಿತು ಪ್ರವೀಣ್ ಅವರಿಂದ ಪ್ರತಿಭಟನೆ
ಬೆಳ್ತಂಗಡಿ; ಪೂಂಜಾಲಕಟ್ಟೆ ಯಿಂದ ಚಾರ್ಮಾಡಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಬೆಳ್ತಂಗಡಿಯಿಂದ ಮುಂಡಾಜೆಯವರೆಗೆ ಸಂಪೂರ್ಣ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು ಅಪಘಾತಗಳಿಗೆ ಕಾರಣವಾಗುತ್ತಿದೆ. ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೋಟೆಲ್ ಮಾಲಕ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಅವರು ಏಕಾಂಗಿಯಾಗಿ ಭಾನುವಾರ ಉಜಿರೆಯಲ್ಲಿ ರಸ್ತೆಯ ಕೆಸರಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅವರ ಪ್ರತಿಭಟನೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿದರು. ರಸ್ತೆ ಅಗಲೀಕರಣ ಕಾಮಗಾರಿಯಿಂದ ಉಜಿರೆಯಿಂದ ಮುಂಡಾಜೆ ಸಾಗುವ ರಸ್ತೆ ಬೆಳ್ತಂಗಡಿಯಿಂದ ಮುಂದಕ್ಕೆ ಕಾಶಿಬೆಟ್ಟು ಸಮೀಪ, ಮಡಂತ್ಯಾರಿಂದ ಮುಂದಕ್ಕೆ ಬರುವ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿ...
ನ್ಯಾಯವಾದಿ ಮುರಳೀಧರ ಬಲಿಪ ನೇತೃತ್ವದ ಬಲಿಪ ರೆಸಾರ್ಟ್ ವತಿಯಿಂದ 9 ಸರಕಾರಿ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ
ಬೆಳ್ತಂಗಡಿ: ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ನ್ಯಾಯವಾದಿ ಮುರಳೀಧರ ಬಲಿಪ ಅವರು ಈ ಪುಣ್ಯ ಕಾರ್ಯಮಾಡುತ್ತಿರುವುದು ಇತರರಿಗೆ ಸ್ಪೂರ್ತಿಯುಂಟು ಮಾಡುವ ಕೆಲಸ. ಸಂಪತ್ತು ನಮ್ಮಲ್ಲಿ ಎಷ್ಟಿದೆ ಎನ್ನುವುದಕ್ಕಿಂತ ಅದನ್ನು ಸಮಾಜಕ್ಕೆ ದಾನ ಮಾಡಬೇಕೆಂಬ ಹೃದಯ ವೈಶಾಲ್ಯತೆ ದೊಡ್ಡದು ಎಂದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಿಕ ವಸಂತ ಆಚಾರ್ಯ ಹೇಳಿದರು.ನ್ಯಾಯವಾದಿ ಹಾಗೂ ನೋಟರಿ ಪಬ್ಲಿಕ್ ಆಗಿರುವ ಮುರಳೀಧರ ಬಲಿಪ ಅವರು ತಮ್ಮ ಬಲಿಪ ರೆಸಾರ್ಟ್ ಮೂಲಕ ಶನಿವಾರ ಹಮ್ಮಿಕೊಂಡಿದ್ದ 9 ಸರಕಾರಿ ಶಾಲೆಗಳಿಗೆ 2.50 ಲಕ್ಷ ರೂ...
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರಿಂದ ಸಂವಾದ ಕಾರ್ಯಕ್ರಮ”
ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ಎರಡು ತರಬೇತಿ ತಂಡಗಳ ಶಿಭಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರುಡ್‌ಸೆಟ್ ಸಂಸ್ಥೆಗಳ ತರಬೇತಿಯಲ್ಲಿ ಪ್ರಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದರಿಂದ ಶಿಭಿರಾರ್ಥಿಗಳಿಗೆ ಹೆಚ್ಚು ಕೌಶಲ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು, ಇದರಿಂದ ಸ್ವಂತ ಉದ್ಯೋಗ ಪ್ರಾರಂಬಿಸಲು ಅನುಕೂಲವಾಗುತ್ತದೆ, ಇಲ್ಲಿನ ತರಬೇತಿ ಪಡೆದ ನಂತರವೂ ಹೊಸ ಹೊಸ ತಂತ್ರಜ್ಞಾನಗಳನ್ನು ನವೀಕರಿಸಿಕೊಳ್ಳಿ, ಹೊಸ...
ಕಳೆಂಜದಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ಶ್ರಮದಾನದ ಮೂಲಕ ರಸ್ತೆ ದುರಸ್ತಿ
ಕಳೆಂಜ; ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇದರ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಕಾಯರ್ತಡ್ಕ- ಶಿಬರಾಜೆ ರಸ್ತೆಯಲ್ಲಿರುವ ಅಪಾಯಕಾರಿ ಗುಂಡಿಗಳನ್ನು ಮುಚ್ವುವ ಕಾರ್ಯ ವನ್ನು ಹಾಗೂ ರಸ್ತೆಯ ಇಕ್ಕೆಲಗಳಲ್ಕಿರುವ ಗಿಡ ಗಂಟಿಗಳನ್ನು ತೆಗೆದು ರಸ್ತೆಯಲ್ಲಿ ಶ್ರಮದಾನ ನಡೆಸಿದರು. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಶ್ರಮದಾನದಲ್ಲಿ ಭಾಗಿಗಳಾದರು.
ತಾಲೂಕಿನಲ್ಲಿ ನಾಲ್ಕು ದಿನ ಭಾರೀ ಮಳೆ ಮುನ್ಸೂಚನೆ, ರೆಡ್ ಅಲೆರ್ಟ್ ಘೋಷಣೆ; ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ
ಬೆಳ್ತಂಗಡಿ; ಮುಂಗಾರು ಚುರುಕುಗೊಂಡಿದ್ದು ಜೂನ್ 22ಶನಿವಾರದಿಂದ ನಾಲ್ಕು ದಿನಗಳು ತಾಲೂಕಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಎರಡು ದಿನ ರೆಡ್ ಅಲರ್ಟ್ ಹಾಗೂ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ತಿಳಿಸಿದ್ದಾರೆ.ಜೂ.22 ರಿಂದ ಆರೆಂಜ್ ಅಲೆರ್ಟ್ ಇದ್ದು ಮಳೆ ಪ್ರಮಾಣ ಹೆಚ್ಚಾಗಲಿದೆ.ಜೂ.22ರಂದು ಹಾಗೂ ಜೂ.25 ರಂದು ಆರೆಂಜ್ ಅಲರ್ಟ್, ಜೂ.23 ಮತ್ತು ಜೂ.24ರಂದು ರೆಡ್ ಅಲರ್ಟ್ ಹೊಂದಿದೆ. ಈ ಸಂದರ್ಭದಲ್ಲಿ ಸಿಡಿಲು, ಮಿಂಚು ಸಂಭವಿಸುವ ಸಾಧ್ಯತೆಯಿರುವುದರಿಂದ ಜನಸಾಮಾನ್ಯರು ಮರದಡಿ, ಬಯಲು ಪ್ರದೇಶದಲ್ಲಿ ಒಂದೆಡೆ ನಿಲ್ಲಬಾರದು....















