Home ಅಪರಾಧ ಲೋಕ ವೇಣೂರು ಠಾಣಾವ್ಯಪ್ತಿಯಲ್ಲಿ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ರಿಬ್ಬರಿಂದ ಲೈಂಗಿಕ ದೌರ್ಜನ್ಯ ಪ್ರಕರಣ‌ದಾಖಲು

ವೇಣೂರು ಠಾಣಾವ್ಯಪ್ತಿಯಲ್ಲಿ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ರಿಬ್ಬರಿಂದ ಲೈಂಗಿಕ ದೌರ್ಜನ್ಯ ಪ್ರಕರಣ‌ದಾಖಲು

1
0

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರ್ಷದ ಮಗುವಿನ ಮೇಲೆ ಎರಡು ಮಂದಿ ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ಬಾಲಾರೋಪಿಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

2023 ರಲ್ಲಿ ಸಂತ್ರಸ್ತ ಬಾಲಕಿ 6 ವರ್ಷದ ಸಂದರ್ಭ ಈ ಕೃತ್ಯ ನಡೆದಿದ್ದು ಸಂತ್ರಸ್ತ ಮಗುವಿನ ಸಂಬಂಧಿ ಹಾಗೂ ಸ್ಥಳೀಯ ಬಾಲಕ ಜೊತೆಗೂಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳಲ್ಲಿ ಒರ್ವನನ್ನು(16) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಅಪ್ರಾಪ್ತ ಬಾಲಕ(18) ಮುಂಬಯಿ ನಗರಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳು ಇದನ್ನು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದು
ಮೊಬೈಲ್ ಫೋನ್ ಇನ್ನೊಬ್ಬರಿಗೆ ನೀಡಿದ ಸಮಯದಲ್ಲಿ ಅದರಲ್ಲಿ ಸೆರೆ ಹಿಡಿಯಲಾದ ದೃಶ್ಯಾವಳಿಗಳನ್ನು ಗಮನಿಸಿ ಈ ವಿಚಾರವನ್ನು ಸಂತ್ರಸ್ತ ಮಗುವಿನ ತಾಯಿಗೆ ವಿಚಾರ ತಿಳಿಸಿದ್ದು ಪ್ರಕರಣ ಬೆಳಕಿಗೆ ಬಂದು ಅವರು ವೇಣೂರು ಪೊಲೀಸ್ ಠಾಣೆಗೆ ಜೂ.23ರಂದು ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 376,376AB,376DB,506 ಜೊತೆಗೆ 34 IPC ಮತ್ತು ಕಲಂ 6 ಪೋಕ್ಸೋ ಕಾಯಿದೆ-2012 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here